ಕೊಲಂಬೊ: ಶ್ರೀಲಂಕಾ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಊಹಿಸಲಾಗದ ಘಟನೆವೊಂದು ನಡೆದಿದ್ದು, ರೋಚಕ ಪಂದ್ಯದಲ್ಲಿ ಕ್ಯಾಚ್ ಪಡೆಯಲು ಹೋಗಿ ಶ್ರೀಲಂಕಾ ಪ್ಲೇಯರ್ಸ್ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ.
ಚುಟುಕು ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಂಕಾ 20 ಓವರ್ಗಳಲ್ಲಿ 9ವಿಕೆಟ್ನಷ್ಟಕ್ಕೆ 161ರನ್ಗಳಿಕೆ ಮಾಡಿತ್ತು. 162ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಲಂಕಾ ತಂಡ 19 ಓವರ್ಗಳಲ್ಲಿ 155ರನ್ಗಳಿಸಿತ್ತು. ಕೊನೆ ಓವರ್ನಲ್ಲಿ ತಂಡದ ಗೆಲುವಿಗೆ 7ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಬೌಲಿಂಗ್ ಮಾಡಿದ ಹಸರಂಗ ಮೊದಲ ಎಸೆತದಲ್ಲೇ ಬ್ರೂಸ್(53) ರನೌಟ್ಗೆ ಬಲಿಯಾಗಿದ್ದು, 2ನೇ ಎಸೆತದಲ್ಲಿ ಡ್ಯಾರಿ ಮಿಚೆಲ್ ಕ್ಯಾಚ್ ನೀಡಿ ನಿರ್ಗಮಿಸಿದರು.
-
Drama in the deep! A great catch from Jayasuriya but he collides with his team mate and goes over the boundary. Santner awarded SIX 🏏 Receiving medical attention now, hopefully all ok. #SLvsNZ pic.twitter.com/TJZaUcfczu
— BLACKCAPS (@BLACKCAPS) September 3, 2019 " class="align-text-top noRightClick twitterSection" data="
">Drama in the deep! A great catch from Jayasuriya but he collides with his team mate and goes over the boundary. Santner awarded SIX 🏏 Receiving medical attention now, hopefully all ok. #SLvsNZ pic.twitter.com/TJZaUcfczu
— BLACKCAPS (@BLACKCAPS) September 3, 2019Drama in the deep! A great catch from Jayasuriya but he collides with his team mate and goes over the boundary. Santner awarded SIX 🏏 Receiving medical attention now, hopefully all ok. #SLvsNZ pic.twitter.com/TJZaUcfczu
— BLACKCAPS (@BLACKCAPS) September 3, 2019
ಮೂರನೇ ಎಸೆತ ಎದುರಿಸಿದ ಸ್ಯಾಂಟನರ್ ಚೆಂಡನ್ನ ಸಿಕ್ಸರ್ಗೆ ಅಟ್ಟಲು ಯತ್ನಿಸಿದ್ದಾರೆ. ಈ ವೇಳೆ ಕ್ಯಾಚ್ ಹಿಡಿಯಲು ಶೆಹನ್ ಜಯಸೂರ್ಯ ಮುಂದಾಗಿದ್ದಾರೆ. ಇದೇ ವೇಳೆ ಮೆಂಡಿಸ್ ಕೂಡ ಕ್ಯಾಚ್ ಹಿಡಿಯಲು ಮುಂದಾಗಿದ್ದರಿಂದ ಪರಸ್ಪರ ಡಿಕ್ಕಿ ಹೊಡೆದಿದ್ದಾರೆ. ಆದರೆ ನಿಯಂತ್ರಣ ತಪ್ಪಿದ ಜಯಸೂರ್ಯ ಬೌಂಡರಿ ಲೈನ್ ಮೇಲೆ ಬಿದ್ದಿದ್ದರಿಂದ ಅಂಪೈರ್ ಸಿಕ್ಸರ್ ಎಂದು ಘೋಷಣೆ ಮಾಡಿದ್ದಾರೆ. ಹೀಗಾಗಿ ನ್ಯೂಜಿಲ್ಯಾಂಡ್ ತಂಡ 2 ಎಸೆತ ಬಾಕಿ ಇರುವಂತೆ 165ರನ್ಗಳಿಕೆ ಮಾಡಿ 4ವಿಕೆಟ್ ಗೆಲುವು ದಾಖಲು ಮಾಡಿದ್ದು, ಸರಣಿಯಲ್ಲಿ 2-0 ಅಂತರದ ಮುನ್ನಡೆ ಪಡೆದುಕೊಂಡಿದೆ.
ಈ ವಿಡಿಯೋ ಇದೀಗ ಸಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಲಂಕಾ ತಂಡಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.