ಕೊಲಂಬೊ: 2011ರ ವಿಶ್ವಕಪ್ ಫೈನಲ್ ಪಂದ್ಯವನ್ನು ತಮ್ಮ ದೇಶವು ಭಾರತಕ್ಕೆ ಮಾರಾಟ ಮಾಡಿದೆ ಎಂದು ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುತ್‌ಗಮಾಗೆ ಆರೋಪಿಸಿದ್ದಾರೆ.
ಸ್ಥಳೀಯ ಟಿವಿ ಚಾನಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಲುತ್‌ಗಮಾಗೆ, 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಆಗಿತ್ತು ಎಂದಿದ್ದಾರೆ. 'ನಾವು 2011ರ ವಿಶ್ವಕಪ್ ಮಾರಾಟ ಮಾಡಿದ್ದೇವೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ನಾನು ಕ್ರೀಡಾ ಮಂತ್ರಿಯಾಗಿದ್ದಾಗ ಇದನ್ನು ಹೇಳಿದ್ದೇನೆ' ಎಂದು ಆ ಸಮಯದಲ್ಲಿ ಕ್ರೀಡಾ ಸಚಿವರಾಗಿದ್ದ ಅಲುತ್‌ಗಮಾಗೆ ಹೇಳಿದ್ದಾರೆ.
ದೇಶದ ಪರವಾಗಿ ನೋಡುವುದಾರರೆ ನಾನು ಇದನ್ನು ಹೇಳಬಾರದು. ಅದು 2011 ಅಥವಾ 2012 ಎಂದು ನನಗೆ ನಿಖರವಾಗಿ ನೆನಪಿಲ್ಲ. ಆದರೆ ನಾವು ಆ ಪಂದ್ಯವನ್ನು ಗೆಲ್ಲಬೇಕಾಗಿತ್ತು ಎಂದು ಪ್ರಸ್ತುತ ಉಸ್ತುವಾರಿ ಸರ್ಕಾರದಲ್ಲಿ ರಾಜ್ಯ ವಿದ್ಯುತ್ ಸಚಿವರಾಗಿರುವ ಮಹಿಂದಾನಂದ ಅಲುತ್‌ಗಮಾಗೆ ಹೇಳಿದ್ದಾರೆ.
ಆ ಪಂದ್ಯವನ್ನು ಫಿಕ್ಸ್ ಮಾಡಲಾಗಿತ್ತು ಎಂದು ನಾನು ಭಾವಿಸಿದ್ದೇನೆ. ಈ ಬಗ್ಗೆ ಯಾವುದೇ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದಿದ್ದಾರೆ. ಆದರೆ ಸಚಿವರ ಆರೋಪವನ್ನು 2011ರ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ ಮಾಜಿ ನಾಯಕ ಜಯವರ್ಧನೆ ತಿರಸ್ಕರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜಯವರ್ಧನೆ, ಚುನಾವಣೆ ಹಿನ್ನೆಲೆಯಲ್ಲಿ ಸರ್ಕಸ್ ಪ್ರಾರಂಭವಾದಂತಿದೆ. ನಿಮ್ಮ ಆರೋಪಕ್ಕೆ ಹೆಸರುಗಳು ಮತ್ತು ಪುರಾವೆಗಳು ಇದ್ದಾವೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
-
Is the elections around the corner 🤔Looks like the circus has started 🤡 names and evidence? #SLpolitics #ICC https://t.co/bA4FxdqXhu
— Mahela Jayawardena (@MahelaJay) June 18, 2020 " class="align-text-top noRightClick twitterSection" data="
">Is the elections around the corner 🤔Looks like the circus has started 🤡 names and evidence? #SLpolitics #ICC https://t.co/bA4FxdqXhu
— Mahela Jayawardena (@MahelaJay) June 18, 2020Is the elections around the corner 🤔Looks like the circus has started 🤡 names and evidence? #SLpolitics #ICC https://t.co/bA4FxdqXhu
— Mahela Jayawardena (@MahelaJay) June 18, 2020
ಫಿಕ್ಸಿಂಗ್ನಲ್ಲಿ ಯಾವುದೇ ಆಟಗಾರರು ಭಾಗಿಯಾಗಿಲ್ಲ. ಆದರೆ ಕೆಲವು ಪಕ್ಷಗಳು ಭಾಗಿಯಾಗಿವೆ ಎಂದು ಅಲುತ್‌ಗಮಾಗೆ ಹೇಳಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಅಲುತ್‌ಗಮಾಗೆ ಮತ್ತು ಅಂದಿನ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಇಬ್ಬರೂ ಆಹ್ವಾನಿತರಾಗಿದ್ದರು.
ಗೌತಮ್ ಗಂಭೀರ್ (97) ಮತ್ತು ಮಹೇಂದ್ರ ಸಿಂಗ್ ಧೋನಿ (91) ಅವರ ಅದ್ಭುತ ಆಟದಿಂದಾಗಿ ಟೀಂ ಇಂಡಿಯಾ 2011ರ ಏಕದಿನ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತ್ತು.