ಕೊಲಂಬೋ: ಸೆಪ್ಟೆಂಬರ್ ಅಂತ್ಯದಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಏಕದಿನ ಹಾಗೂ ಟಿ-20 ಸರಣಿಯ ವೇಳೆ ಲಂಕಾ ಆಟಗಾರರಿಗೆ ಬಿಗಿ ಭದ್ರತೆಯನ್ನು ಕಲ್ಪಿಸುವಂತೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಪಾಕಿಸ್ತಾನಕ್ಕೆ ಮನವಿ ಮಾಡಿದೆ.
ನಮ್ಮ ಪ್ಲೇಯರ್ಸ್ ಪಾಕ್ ತೆರಳದಿರುವ ಹಿಂದೆ ಭಾರತದ ಕೈವಾಡವಿಲ್ಲ: ಪಾಕ್ ಮಿನಿಸ್ಟರ್ಗೆ ಟಾಂಗ್
ಪಾಕಿಸ್ತಾನ ಪ್ರವಾಸದ ವೇಳೆ ಲಂಕಾ ಆಟಗಾರರ ಮೇಲೆ ಉಗ್ರದಾಳಿ ನಡೆಯಲಿದೆ ಎನ್ನುವ ಗುಪ್ತಚರ ಇಲಾಖೆಯ ಮಾಹಿತಿಯನ್ನು ಲಂಕಾ ಪ್ರಧಾನಿ ಕಚೇರಿ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಪ್ರಧಾನಿ ಕಚೇರಿಯಿಂದ ಪಾಕಿಸ್ತಾನದ ದೂರಸಂಪರ್ಕ ಸಚಿವಾಲಯಕ್ಕೆ ಮಾಹಿತಿಯನ್ನು ರವಾನಿಸಿ ಭದ್ರತೆ ಹೆಚ್ಚಳಕ್ಕೆ ಸೂಚಿಸಲಾಗಿದೆ.
-
Update: Sri Lanka's Tour of Pakistan #PAKvSL
— Sri Lanka Cricket 🇱🇰 (@OfficialSLC) September 11, 2019 " class="align-text-top noRightClick twitterSection" data="
SLC has been advised to take extreme care, and ‘reassess’ the situation, before embarking on the Pakistan tour. https://t.co/8eYSuiWjog
">Update: Sri Lanka's Tour of Pakistan #PAKvSL
— Sri Lanka Cricket 🇱🇰 (@OfficialSLC) September 11, 2019
SLC has been advised to take extreme care, and ‘reassess’ the situation, before embarking on the Pakistan tour. https://t.co/8eYSuiWjogUpdate: Sri Lanka's Tour of Pakistan #PAKvSL
— Sri Lanka Cricket 🇱🇰 (@OfficialSLC) September 11, 2019
SLC has been advised to take extreme care, and ‘reassess’ the situation, before embarking on the Pakistan tour. https://t.co/8eYSuiWjog
ಪ್ರಸ್ತುತ ಆಟಗಾರರಿಗೆ ನೀಡಲು ಉದ್ದೇಶಿಸಲಾಗಿರುವ ಭದ್ರತೆಯನ್ನು ಮತ್ತಷ್ಟು ಹೆಚ್ಚಳಕ್ಕೆ ಮನವಿ ಮಾಡಲಾಗಿದ್ದು, ಜೊತೆಗೆ ಗರಿಷ್ಠ ಜಾಗರೂಕತೆಗೆ ಆದ್ಯತೆ ನೀಡುವಂತೆ ಲಂಕಾ ಕ್ರಿಕೆಟ್ ಬೋರ್ಡ್ ಕೇಳಿಕೊಂಡಿದೆ.
ಕೆಲ ದಿನಗಳ ಮುನ್ನ ಭದ್ರತೆಯ ಕಾರಣ ನೀಡಿ ಹತ್ತು ಮಂದಿ ಲಂಕಾ ಆಟಗಾರರು ಪಾಕಿಸ್ತಾನ ಪ್ರವಾಸಕ್ಕೆ ಹಿಂದೇಟು ಹಾಕಿದ್ದರು.
ಉಗ್ರರ ದಾಳಿಗೆ ಬೆದರಿದ ಲಂಕಾ ಟೀಂ... ಪಾಕ್ಗೆ ಹೋಗಲ್ವಂತೆ ಮಲಿಂಗಾ, ಮ್ಯಾಥ್ಯೂಸ್ ಸೇರಿ 10 ಪ್ಲೇಯರ್ಸ್
ಸೆಪ್ಟೆಂಬರ್ 27ರಿಂದ ಆರಂಭವಾಗಲಿರುವ ಪಾಕ್ ಪ್ರವಾಸದಲ್ಲಿ ಮೂರು ಏಕದಿನ ಪಂದ್ಯ ಹಾಗೂ ಮೂರು ಟಿ-20 ಪಂದ್ಯ ನಡೆಯಲಿದೆ. ಅಕ್ಟೋಬರ್ 9ರಂದು ಪ್ರವಾಸ ಮುಕ್ತಾಯವಾಗಲಿದೆ. ಏಕದಿನ ಪಂದ್ಯಗಳು ಕರಾಚಿಯಲ್ಲಿ ನಡೆಯಲಿದ್ದು, ಟಿ-20 ಪಂದ್ಯ ಲಾಹೋರ್ನಲ್ಲಿ ಆಯೋಜನೆಯಾಗಿದೆ.