ETV Bharat / sports

ಬಂಧನಕ್ಕೊಳಗಾದ ಬೆನ್ನಲ್ಲೇ ಮಧುಶಂಕಾ ಅಮಾನತು ಮಾಡಿದ ಲಂಕಾ ಕ್ರಿಕೆಟ್​ ಮಂಡಳಿ

author img

By

Published : May 26, 2020, 10:43 PM IST

ಮಧುಶಂಕಾ ಅವರು ಹೆರಾಯಿನ್​ ಹೊಂದಿದ ಆರೋಪದಲ್ಲಿ ಬಂಧನವಾಗಿದ್ದಾರೆ. ಇದನ್ನು ಬೋರ್ಡ್ ತೀವ್ರವಾಗಿ​ ಖಂಡಿಸುತ್ತದೆ. ಅವರನ್ನು ಎಲ್ಲ ಮಾದರಿಯ ಕ್ರಿಕೆಟ್​ನಿಂದ ಅಮಾನತುಗೊಳಿಸಲಾಗಿದೆ ಎಂದು ಶ್ರೀಲಂಕಾ ಬೋರ್ಡ್​ನ ಅಧಿಕೃತ ವೆಬ್​ಸೈಟ್​ ವರದಿ ಮಾಡಿದೆ.

ಮಧುಶಂಕಾ ಅಮಾನತು
ಮಧುಶಂಕಾ ಅಮಾನತು

ಕೊಲಂಬೋ: ಕ್ವಾರಂಟೈನ್​ ರಿಲೀಸ್​ ಮಾಡಿದ ಬೆನ್ನೆಲ್ಲೇ ಕಾರಿನಲ್ಲಿ ಮಾದಕ ದ್ರವ್ಯದ ಜೊತೆ ಪೊಲೀಸ್​​​​​​ ಕೈಗೆ ಲಂಕಾ ವೇಗಿ ಶಹಾನ್​​ ಮಧುಶಂಕಾ ಸಿಕ್ಕಿಬಿದ್ದಿದ್ದಾರೆ. ಈ ಬೆನ್ನಲ್ಲೇ ಮಧುಶಂಕಾ ಅವರನ್ನು ಎಲ್ಲ ಮಾದರಿಯ ಕ್ರಿಕೆಟ್​ನಿಂದ ಅಮಾನತು ಮಾಡಿ ಲಂಕಾ ಮಂಡಳಿ ಆದೇಶ ಹೊರಡಿಸಿದೆ.

ಮಧುಶಂಕಾ ಅವರು ಹೆರಾಯಿನ್​ ಹೊಂದಿದ ಆರೋಪದಲ್ಲಿ ಬಂಧನವಾಗಿದ್ದಾರೆ. ಇದನ್ನು ಬೋರ್ಡ್ ತೀವ್ರವಾಗಿ​ ಖಂಡಿಸುತ್ತದೆ. ಅವರನ್ನು ಎಲ್ಲ ಮಾದರಿಯ ಕ್ರಿಕೆಟ್​ನಿಂದ ಅಮಾನತುಗೊಳಿಸಲಾಗಿದೆ ಎಂದು ಶ್ರೀಲಂಕಾ ಬೋರ್ಡ್​ನ ಅಧಿಕೃತ ವೆಬ್​ಸೈಟ್​ ವರದಿ ಮಾಡಿದೆ.

2 ಗ್ರಾಮ್‌ನಷ್ಟು ಹೆರಾಯಿನ್ ಹೊಂದಿದ್ದ ಆರೋಪದ ಮೇಲೆ ಪನ್ನಾಲ ನಗರದಲ್ಲಿ ಮಧುಶಂಕಾ ಅವರನ್ನು ಪೊಲೀಸರು ಬಂಧಿಸಿದ್ದರು. ಇನ್ನು ಮಧುಶಂಕಾ ಅವರನ್ನು ಪೂರ್ಣ ವಿಚಾರಣೆ ನಡೆಸುವವರೆಗೂ ಅವರ ಮೇಲಿನ ಅಮಾನತು ಶಿಕ್ಷೆ ಹಾಗೆಯೇ ಇರುತ್ತದೆ ಎಂದು ವೆಬ್​ಸೈಟ್​ ಪ್ರಕಟಿಸಿದೆ.

ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಮಧುಶಂಕಾ ಹ್ಯಾಟ್ರಿಕ್​ ಸಾಧನೆ ಮಾಡಿದ್ದರು. ನಂತರ ಎರಡು ಟಿ-20 ಪಂದ್ಯಗಳಲ್ಲಿ ಆಡಿದ್ದರಾದರು ಮತ್ತೆ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿರಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.