ಪಾರ್ಲ್ ( ದಕ್ಷಿಣ ಆಫ್ರಿಕಾ) : ಶ್ರೀಲಂಕಾ ತಂಡದ ಆಲ್ರೌಂಡರ್ ಇಸುರು ಉದಾನ ಮಜಾನ್ಸಿ ಸೂಪರ್ ಲೀಗ್ನಲ್ಲಿ ಎದುರಾಳಿಯ ತಂಡದ ಬ್ಯಾಟ್ಸ್ಮನ್ ಗಾಯಗೊಂಡು ಕ್ರೀಸ್ ಮಧ್ಯದಲ್ಲಿದ್ದರೂ ಅವರನ್ನು ರನ್ಔಟ್ ಮಾಡದೇ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ.
ಮಜಾನ್ಸಿ ಸೂಪರ್ ಲೀಗ್ನಲ್ಲಿ ಪಾರ್ಲ್ ರಾಕ್ಸ್ ತಂಡದ ಪರ ಆಡುತ್ತಿರುವ ಉದಾನ 19 ನೇ ಓವರ್ ಮಾಡುತ್ತಿದ್ದ ವೇಳೆ, ಎದುರಾಳಿ ನೆಲ್ಸನ್ ಮಂಡೇಲಾ ಜೈಂಟ್ಸ್ಗೆ 8 ಎಸೆತಗಳಲ್ಲಿ 24 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಉದಾನರ ಬೌಲಿಂಗ್ನಲ್ಲಿ ಕೀಪರ್ ಬ್ಯಾಟ್ಸ್ಮನ್ ಹೀನೋ ಕುಹ್ನ್ ಬಲವಾಗಿ ಹೊಡೆದ ಚೆಂಡ್ ನಾನ್ ಸ್ಟ್ರೈಕರ್ನಲ್ಲಿದ್ದ ಮಾರ್ಕೊ ಮರಾಯಿಸ್ ಅವರ ತೋಳಿಗೆ ಬಿದ್ದು ನೋವಿನಿಂದ ನರಳಾಡುತ್ತಿದ್ದರು.
-
Spirit of cricket🤝
— Mzansi Super League 🔥 🇿🇦 🏏 (@MSL_T20) December 8, 2019 " class="align-text-top noRightClick twitterSection" data="
Raise your hand for more moments like this! Always! 🖐️🖐️🖐️🖐️#mslt20 pic.twitter.com/5nA8q9rQ2U
">Spirit of cricket🤝
— Mzansi Super League 🔥 🇿🇦 🏏 (@MSL_T20) December 8, 2019
Raise your hand for more moments like this! Always! 🖐️🖐️🖐️🖐️#mslt20 pic.twitter.com/5nA8q9rQ2USpirit of cricket🤝
— Mzansi Super League 🔥 🇿🇦 🏏 (@MSL_T20) December 8, 2019
Raise your hand for more moments like this! Always! 🖐️🖐️🖐️🖐️#mslt20 pic.twitter.com/5nA8q9rQ2U
ಈ ವೇಳೆ ಕ್ರೀಸ್ ಮಧ್ಯೆ ತಲುಪಿದ್ದ ಮಾರ್ಕಸ್ರನ್ನು ಉದಾನ ರನ್ಔಟ್ ಮಾಡುವ ಅದ್ಭುತ ಅವಕಾಶವಿತ್ತು. ಆದರೆ ಉದಾನ ರನ್ಔಟ್ ಮಾಡದೇ ಮರಾಯಿಸ್ ಬಳಿ ತೆರಳಿ ಅವರ ಆರೋಗ್ಯ ವಿಚಾರಿಸಿಕೊಂಡರು. ಈ ವಿಡಿಯೋವನ್ನು ಮಜಾನ್ಸಿ ಸೂಪರ್ ಲೀಗ್ ತನ್ನ ಟ್ವಿಟರ್ನಲ್ಲಿ ಟ್ವೀಟ್ ಮಾಡಿದ್ದು, ಉದಾನ ಕ್ರೀಡಾ ಸ್ಫೂರ್ತಿಗೆ ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ಹೆಚ್ಚು ವ್ಯಕ್ತಪಡಿಸಿದ್ದಾರೆ.
ರನ್ಔಟ್ನಿಂದ ತಪ್ಪಿಸಿಕೊಂಡ ನಂತರದ ಎಸೆತವನ್ನು ಗಾಯಗೊಂಡಿದ್ದ ಮಾರ್ಕಸ್ ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ಸನಿಹ ತಂದರೂ ಗೆಲುವು ದಕ್ಕಿಸಿಕೊಳ್ಳಲಾಗಲಿಲ್ಲ. ನೆಲ್ಸನ್ ಮಂಡೇಲಾ ಜೈಂಟ್ಸ್ಗೆ 12 ರನ್ಗಳಿಂದ ಸೋಲನುಭವಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಿತು.