ಕೊಲೊಂಬೊ: ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಶ್ರೀಲಂಕಾ ತಂಡ ವೆಸ್ಟ್ ಇಂಡೀಸ್ ವಿರುದ್ಧ 1 ವಿಕೆಟ್ ರೋಚಕ ಜಯ ಸಾಧಿಸಿದೆ.
ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯ ರೋಚಕ ಅಂತ್ಯ ಕಂಡಿದೆ. ಲಂಕಾ ಒಂದು ವಿಕೆಟ್ ಜಯ ಸಾಧಿಸಿ ಸಂಭ್ರಮಿಸಿದರೆ, ಗೆಲ್ಲುವ ಪಂದ್ಯವನ್ನು ಕೈಚೆಲ್ಲಿ ವಿಂಡೀಸ್ ನಿರಾಶೆ ಅನುಭವಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ವೆಸ್ಟ್ ಇಂಡೀಸ್ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 289 ರನ್ ಗಳಿಸಿತ್ತು. ಆರಂಭಿಕ ಬ್ಯಾಟ್ಸ್ಮನ್ ಶಾಯ್ ಹೋಪ್ ಶತಕ(115) ಸಿಡಿಸಿದರೆ, ರಾಸ್ಟನ್ ಚೇಸ್ 41, ಬ್ರಾವೋ 39, ಕೀಮೋ ಪಾಲ್ 32, ಹೇಡನ್ ವಾಲ್ಶ್ 20 ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾಗಿದ್ದರು.
-
Sri Lanka win by one wicket! 🎉
— ICC (@ICC) February 22, 2020 " class="align-text-top noRightClick twitterSection" data="
A great innings by Wanindu Hasaranga to guide his side to victory 👏 #SLvWI pic.twitter.com/BnQ6h3GQRb
">Sri Lanka win by one wicket! 🎉
— ICC (@ICC) February 22, 2020
A great innings by Wanindu Hasaranga to guide his side to victory 👏 #SLvWI pic.twitter.com/BnQ6h3GQRbSri Lanka win by one wicket! 🎉
— ICC (@ICC) February 22, 2020
A great innings by Wanindu Hasaranga to guide his side to victory 👏 #SLvWI pic.twitter.com/BnQ6h3GQRb
ಶ್ರೀಲಂಕಾ ಪರ ಇಸುರು ಉದಾನಾ 82 ರನ್ ನೀಡಿ 3 ವಿಕೆಟ್ ಪಡೆದರೆ, ತಿಸರಾ ಪರೆರಾ ಹಾಗೂ ನುವಾನ್ ಪ್ರದೀಪ್ ತಲಾ ಒಂದು ವಿಕೆಟ್ ಪಡೆದು ವಿಂಡೀಸ್ ತಂಡವನ್ನು 300ರ ಗಡಿ ದಾಟದಂತೆ ನೋಡಿಕೊಂಡರು.
ಒಂದು ವಿಕೆಟ್ ರೋಚಕ ಜಯ:
290 ರನ್ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಲಂಕಾ ತಂಡ 49.1 ಓವರ್ಗಳಲ್ಲಿ 290 ರನ್ ಗಳಿಸಿ ಒಂದು ವಿಕೆಟ್ ರೋಚಕ ಜಯ ಸಾಧಿಸಿತು.
ಆವಿಶ್ಕಾ ಫರ್ನಾಂಡೊ 50, ದಿಮುತ್ ಕರುಣರತ್ನೆ 52, ಕುಸಾಲ್ ಪೆರೆರಾ 42, ತಿಸರಾ ಪೆರೆರಾ 32 ಹಾಗೂ ಕೊನೆಯಲ್ಲಿ ಬಾಲಂಗೋಚಿಗಳ ಜೊತೆ ಅಬ್ಬರದ ಬ್ಯಾಟಿಂಗ್ ನಡೆಸಿದ ಹಸರಂಗ ಔಟಾಗದೆ 42 ರನ್ಗಳಿಸಿ ಲಂಕಾ ತಂಡದ ಗೆಲುವಿನ ರೂವಾರಿಯಾದರು.
ವಿಂಡೀಸ್ ಪರ ಸ್ಟಾರ್ ಬೌಲರ್ ಆದ ಶೆಲ್ಡಾನ್ ಕಾಟ್ರೆಲ್ 10 ಓವರ್ನಲ್ಲಿ 69 ರನ್ ನೀಡಿ ವಿಕೆಟ್ ಪಡೆಯಲು ವಿಫಲರಾದದ್ದೇ ವಿಂಡೀಸ್ ಸೋಲಿಗೆ ಕಾರಣವಾಯಿತು. ಆದರೆ ಅಲ್ಜಾರಿ ಜೋಶೆಫ್ 3, ಹೇಡನ್ ವಾಲ್ಶ್ 2 ಹಾಗೂ ಕೀಮೋ ಪಾಲ್ 2 ವಿಕೆಟ್ ಪಡೆದು ಲಂಕಾ ತಂಡದ ಸುಲಭ ಜಯವಾಗುತ್ತಿದ್ದ ಪಂದ್ಯವನ್ನು ಕೊನೆಯ ಓವರ್ವರೆಗೂ ಕೊಂಡೊಯ್ಯವಂತೆ ಮಾಡಿದರು. ಆದರೆ ಹಸರಂಗ ಅವರ ಆಟ ಲಂಕಾ ತಂಡಕ್ಕೆ ಒಂದು ವಿಕೆಟ್ ರೋಚಕ ಜಯ ತಂದಕೊಟ್ಟಿತು.