ಕೊಲೊಂಬೊ: ಇಲ್ಲಿನ ಆರ್. ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡ ಬಾಂಗ್ಲಾದೇಶ ತಂಡವನ್ನು 91 ರನ್ಗಳಿಂದ ಮಣಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಲಂಕಾ 50 ಓವರ್ಗಳಲ್ಲಿ ಕುಸಾಲ್ ಪೆರೆರಾ ಅವರ ಭರ್ಜರಿ ಶತಕದ ನೆರವಿನಿಂದ 314 ರನ್ಗಳಿಸಿತು. ಪೆರೆರಾ 99 ಎಸೆತಗಳಲ್ಲಿ 17 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 111 ರನ್ಗಳಿಸಿದರು. ಇವರಿಗೆ ಸಾಥ್ ನೀಡಿದ ಕುಸಾಲ್ ಮೆಂಡಿಸ್ 43, ಏಂಜೆಲೋ ಮ್ಯಾಥ್ಯೂಸ್ 48 ತಿರುಮನ್ನೆ 25 ರನ್ಗಳಿಸಿದರು.
-
Lasith Malinga took the final wicket and ends his ODI career with a stunning victory! Sri Lanka won the 1st ODI by 91 runs and take 1-0 lead in the 3-match series!
— Sri Lanka Cricket 🇱🇰 (@OfficialSLC) July 26, 2019 " class="align-text-top noRightClick twitterSection" data="
Bangladesh 223-all out (Lasith Malinga 3/38, Nuwan Pradeep 3/51) v Sri Lanka 314/8#ThankYouMalinga #LEGEND pic.twitter.com/L30xnx68M5
">Lasith Malinga took the final wicket and ends his ODI career with a stunning victory! Sri Lanka won the 1st ODI by 91 runs and take 1-0 lead in the 3-match series!
— Sri Lanka Cricket 🇱🇰 (@OfficialSLC) July 26, 2019
Bangladesh 223-all out (Lasith Malinga 3/38, Nuwan Pradeep 3/51) v Sri Lanka 314/8#ThankYouMalinga #LEGEND pic.twitter.com/L30xnx68M5Lasith Malinga took the final wicket and ends his ODI career with a stunning victory! Sri Lanka won the 1st ODI by 91 runs and take 1-0 lead in the 3-match series!
— Sri Lanka Cricket 🇱🇰 (@OfficialSLC) July 26, 2019
Bangladesh 223-all out (Lasith Malinga 3/38, Nuwan Pradeep 3/51) v Sri Lanka 314/8#ThankYouMalinga #LEGEND pic.twitter.com/L30xnx68M5
ಬಾಂಗ್ಲಾಪರ ಶಫಿ ಉಲ್ ಇಸ್ಲಾಮ್ 3, ಮುಸ್ತಫಿಜುರ್ ರೆಹಮಾನ್ 2 ಹಾಗೂ ಮೆಹೆದಿ ಹಸನ್, ಸೌಮ್ಯ ಸರ್ಕಾರ್ ತಲಾ ಒಂದು ವಿಕೆಟ್ ಪಡೆದರು.
315 ರನ್ಗಳ ಸವಾಲಿನ ಮೊತ್ತ ಬೆನ್ನತ್ತಿದ ಬಾಂಗ್ಲಾ 41.5 ಓವರ್ಗಳಲ್ಲಿ 223 ರನ್ಗಳಿಗೆ ಸರ್ವಪತನ ಕಾಣುವ ಮೂಲಕ 91 ರನ್ಗಳ ಸೋಲನುಭವಿಸಿತು.
ವಿಕೆಟ್ ಕೀಪರ್ ಮುಫ್ತಿಕರ್ ರಹೀಮ್ 67, ಸಬ್ಬಿರ್ ರೆಹಮಾನ್ 60 ರನ್ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸ್ಮನ್ಗಳು ಲಂಕಾ ದಾಳಿಗೆ ನಿಲ್ಲಲಾರದೇ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ವಿದಾಯದ ಪಂದ್ಯವಾಡಿದ ಮಾಲಿಂಗ 10 ಓವರ್ಗಳಲ್ಲಿ 38 ರನ್ನೀಡಿ 3 ವಿಕೆಟ್, ನುವಾನ್ ಪ್ರದೀಪ್ 9 ಓವರ್ಗಳಲ್ಲಿ 51 ರನ್ ನೀಡಿ 3 ವಿಕೆಟ್, ಧನಂಜಯ್ ಡಿ ಸಿಲ್ವಾ 2 ಹಾಗೂ ಲಹಿರು ಕುಮಾರ ಒಂದು ವಿಕೆಟ್ ಪಡೆದರು.