ETV Bharat / sports

ವೆಸ್ಟ್​ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ತಂಡ ಪ್ರಕಟಿಸಿದ ಶ್ರೀಲಂಕಾ

ಈ ಪ್ರವಾಸದಲ್ಲಿ ಶ್ರೀಲಂಕಾ ಅತಿಥೇಯ ವಿಂಡೀಸ್ ವಿರುದ್ಧ 3 ಟಿ20 ಮತ್ತು 3 ಏಕದಿನ ಪಂದ್ಯ ಹಾಗೂ 2 ಪಂದ್ಯಗಳ ಟೆಸ್ಟ್​ ಸರಣಿಯನ್ನಾಡಲಿದೆ.

ಶ್ರೀಲಂಕಾ ತಂಡ  ಪ್ರಕಟ
ಶ್ರೀಲಂಕಾ ತಂಡ ಪ್ರಕಟ
author img

By

Published : Feb 23, 2021, 8:01 PM IST

ಕೊಲೊಂಬೊ: ವೆಸ್ಟ್​ ಇಂಡೀಸ್​ ವಿರುದ್ಧ ಏಕದಿನ ಮತ್ತು ಟಿ20 ಸರಣಿಗಾಗಿ ಶ್ರೀಲಂಕಾ ಕ್ರಿಕೆಟ್​ ಬೋರ್ಡ್​ ತಂಡವನ್ನು ಪ್ರಕಟಿಸಿದೆ.

ಈ ತಂಡಕ್ಕೆ ಯುವ ಮತ್ತು ಕ್ರೀಡಾ ಸಚಿವ ನಮಲ್ ರಾಜಪಕ್ಸೆ ಅನುಮೋದನೆ ನೀಡಿದ್ದಾರೆ.. ಕೋವಿಡ್​ 19 ವೈರಸ್​ಗೆ ತುತ್ತಾಗಿರುವ ವೇಗಿ ಲಹಿರು ಕುಮಾರ ಅವರ ಬದಲಿಯಾಗಿ ಸುರಂಗ ಲಕ್ಮಲ್ ಅವರನ್ನು ಸೇರ್ಪಡೆ ಮಾಡಲಾಗಿದೆ.

ಈ ಪ್ರವಾಸದಲ್ಲಿ ಶ್ರೀಲಂಕಾ ಅತಿಥೇಯ ವಿಂಡೀಸ್ ವಿರುದ್ಧ 3 ಟಿ20 ಮತ್ತು 3 ಏಕದಿನ ಪಂದ್ಯ ಹಾಗೂ 2 ಪಂದ್ಯಗಳ ಟೆಸ್ಟ್​ ಸರಣಿಯನ್ನಾಡಲಿದೆ.

ಎರಡು​ ತಂಡಗಳ ನಡುವಿನ ಮೂರು ಟಿ20 ಪಂದ್ಯಗಳನ್ನು ಮಾರ್ಚ್ 3, 5 ಮತ್ತು 7 ರಂದು ಆಂಟಿಗುವಾದ ಕೂಲಿಡ್ಜ್ ಕ್ರಿಕೆಟ್ ಮೈದಾನದಲ್ಲಿ ಆಡಲಿದೆ. ಏಕದಿನ ಸರಣಿಯ ಮಾರ್ಚ್ 10, 12 ಮತ್ತು 14 ರಂದು ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೆಸ್ಟ್ ಪಂದ್ಯ ಮಾರ್ಚ್ 21 ರಿಂದ ಹಾಗೂ ಎರಡನೇ ಟೆಸ್ಟ್ ಮಾರ್ಚ್ 29 ರಿಂದ ಪ್ರಾರಂಭವಾಗಲಿದೆ.

ಶ್ರೀಲಂಕಾ ತಂಡ: ದಿಮುತ್ ಕರುಣರತ್ನ (ನಾಯಕ), ದಾಸುನ್ ಶನಕ, ದನುಷ್ಕಾ ಗುಣತಿಲಕ, ಪಾತುಮ್ ನಿಸ್ಸಾಂಕಾ, ಆಶೆನ್ ಬಂಡರಾ, ಒಷಾದಾ ಫರ್ನಾಂಡೊ, ದಿನೇಶ್ ಚಂಡಿಮಾಲ್, ಏಂಜೆಲೊ ಮ್ಯಾಥ್ಯೂಸ್, ನಿರೋಷನ್ ಡಿಕ್ವೆಲ್ಲಾ, ತಿಸರಾ ಪೆರೆರಾ, ಕಮಿಂದು ಮೆಂಡಿಸ್, ವನಿಂಡು ಹಸರಂಗ, ನುವಾನ್ ಪ್ರದೀಪ್, ಅಸಿತಾ ಫರ್ನಾಂಡೊ, ದುಷ್ಮಂತಾ ಚಮೀರಾ, ಅಕಿಲಾ ದನಂಜಯ, ಲಕ್ಷನ್ ಸಂದಕನ್, ದಿಲ್ಶನ್ ಮಧುಶಂಕಾ, ಸುರಂಗ ಲಕ್ಮಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.