ದುಬೈ: ಯುವ ಬೌಲರ್ ಅರ್ಶ್ದೀಪ್, ಕ್ರಿಸ್ ಜೋರ್ಡಾನ್ರ ಪ್ರಚಂಡ ಬೌಲಿಂಗ್ ದಾಳಿ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೇವಲ 127 ರನ್ಗಳ ಟಾರ್ಗೆಟ್ಅನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, 12 ರನ್ಗಳ ಜಯ ಸಾಧಿಸಿ ಪ್ಲೇ ಆಫ್ ಕನಸನ್ನು ಇನ್ನು ಜೀವಂತವಾಗಿರಿಸಿಕೊಂಡಿದೆ.
127 ರನ್ಗಳ ಟಾರ್ಗೆಟ್ ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡ 19.5 ಓವರ್ಗಳಲ್ಲಿ 114 ರನ್ಗಳಿಗೆ ಆಲೌಟ್ ಆಗುವ ಮೂಲಕ 12 ರನ್ಗಳ ರೋಚಕ ಸೋಲು ಕಂಡಿದೆ.
-
What a victory this for @lionsdenkxip. Four wins in a row for them.
— IndianPremierLeague (@IPL) October 24, 2020 " class="align-text-top noRightClick twitterSection" data="
They win by 12 runs.#Dream11IPL pic.twitter.com/YuzbILBiAd
">What a victory this for @lionsdenkxip. Four wins in a row for them.
— IndianPremierLeague (@IPL) October 24, 2020
They win by 12 runs.#Dream11IPL pic.twitter.com/YuzbILBiAdWhat a victory this for @lionsdenkxip. Four wins in a row for them.
— IndianPremierLeague (@IPL) October 24, 2020
They win by 12 runs.#Dream11IPL pic.twitter.com/YuzbILBiAd
ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್ಸ್ಟೋವ್ ಮೊದಲ ವಿಕೆಟ್ಗೆ 56 ರನ್ಗಳ ಜೊತೆಯಾಟ ನೀಡಿದರು. ವಾರ್ನರ್ 20 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 35 ರನ್ಗಳಿಸಿ ರವಿ ಬಿಷ್ಣೋಯ್ಗೆ ವಿಕೆಟ್ ಒಪ್ಪಿಸಿದರು. ನಂತರ ಮುರುಗನ್ ಅಶ್ವಿನ್ ಬೌಲಿಂಗ್ನಲ್ಲಿ ಜಾನಿ ಬೈರ್ಸ್ಟೋವ್ 19 ರನ್ಗಳಿಸಿ ಔಟಾದರು.
ಆದರೆ ಕಳೆದ ಪಂದ್ಯದ ಹೀರೋ ಮನೀಶ್ ಪಾಂಡೆ ಇಂದು ಹೈದರಾಬಾದ್ ಪಾಲಿಗೆ ವಿಲನ್ ಆದರು. ರನ್ಗಳಿಸಲು ಪರದಾಡಿದ ಅವರು 29 ಎಸೆತಗಳಲ್ಲಿ ಯಾವುದೇ ಬೌಂಡರಿಗಳಿಸದೇ ಕೇವಲ 15 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇದು ಪಂಜಾಬ್ ತಂಡಕ್ಕೆ ಟರ್ನಿಂಗ್ ಪಾಯಿಂಟ್ ಆಯಿತು.
ಪಾಂಡೆ ನಂತರ 26 ರನ್ಗಳಿಸಿದ್ದ ವಿಜಯ ್ ಶಂಕರ್ ರನ್ನು ಯುವ ಬೌಲರ್ ಅರ್ಶ್ದೀಪ್ ಸಿಂಗ್ ಪೆವಿಲಿಯನ್ಗಟ್ಟಿದರು. ನಂತರ ಜೋರ್ಡಾನ್ ಒಂದೇ ಓವರ್ನಲ್ಲಿ ಜೇಸನ್ ಹೋಲ್ಡರ್(5) ಹಾಗೂ ರಶೀದ್ ಖಾನ್(0) ಸತತ 2 ಎಸೆತಗಳಲ್ಲಿ ವಿಕೆಟ್ ಪಡೆದು ಪಂಜಾಬ್ ತಂಡಕ್ಕೆ ಮೇಲುಗೈ ತಂದುಕೊಟ್ಟರು.
20 ನೇ ಓವರ್ನಲ್ಲಿ ಗೆಲ್ಲಲು ಹೈದರಾಬಾದ್ ತಂಡಕ್ಕೆ 14 ರನ್ಗಳ ಅಗತ್ಯವಿತ್ತು ಆದರೆ ಯುವ ಬೌಲರ್ ಅರ್ಶ್ದೀಪ್ ಸಿಂಗ್, ಪ್ರಿಯಂ ಗರ್ಗ್(3) ಹಾಗೂ ಸಂದೀಪ್ ಶರ್ಮಾ(0) ರನ್ನು ಔಟ್ ಮಾಡುವ ಮೂಲಕ ಪಂಜಾಬ್ಗೆ 12 ರನ್ಗಳ ರೋಚಕ ಜಯ ತಂದುಕೊಟ್ಟರು.