ಹೈದರಾಬಾದ್: ಜಮೈಕಾದ ಅಥ್ಲಿಟ್ ಯೋಹಾನ್ ಬ್ಲೇಕ್ ತನ್ನ ಮೂಲ ಕ್ರೀಡೆಗೆ ನಿವೃತ್ತಿ ಘೋಷಣೆ ಮಾಡಿದ ನಂತರ ಕ್ರಿಕೆಟ್ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ತನ್ನ ಮನದಾಳ ಹಂಚಿಕೊಂಡಿರುವ ಯೋಹಾನ್ ಬ್ಲೇಕ್, 'ನಾನು ಹೆಚ್ಚು ಎಂದರೆ ಇನ್ನು 2 ವರ್ಷ ಟ್ರ್ಯಾಕ್ನಲ್ಲಿ ಓಡಬಹುದು ಅಷ್ಟೆ. ಆನಂತರ ನನ್ನ ಒಲವು ಕ್ರಿಕೆಟ್ನತ್ತ ಇದೆ ಎಂದಿದ್ದಾರೆ.

ನನಗೆ ವೆಸ್ಟ್ ಇಂಡೀಸ್ ತಂಡದ ಪರ ಆಡುವ ಆಸೆ ಇಲ್ಲ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸುವ ಆಸೆ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಥವಾ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡುವ ಆಸೆ ಇದೆ ಯಾಕೆಂದರೆ ಈ ಎರಡೂ ತಂಡದ ಪರ ಕ್ರಿಸ್ ಗೇಲ್ ಹೆಚ್ಚು ಪಂದ್ಯಗಳನ್ನ ಆಡಿದ್ದರು ಎಂದಿದ್ದಾರೆ. ಅಲ್ಲದೆ ನನಗೆ ಆರ್ಸಿಬಿ ತಂಡ ಎಂದರೆ ತುಂಬಾ ಇಷ್ಟ ಅದರಲ್ಲೂ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ನನ್ನ ನೆಚ್ಚಿನ ಆಟಗಾರರು ಎಂದು ಯೋಹಾನ್ ಬ್ಲೇಕ್ ಹೇಳಿದ್ದಾರೆ.
2012ರ ಒಲಿಂಪಿಕ್ನಲ್ಲಿ 100 ಮತ್ತು 200 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಬ್ಲೇಕ್, 2018ರ ಕಾಮನ್ವೆಲ್ತ್ ಗೇಮ್ಸ್ನ 100 ಮೀಟರ್ ಒಟದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.