ನವದೆಹಲಿ: ಲೆಬನಾನ್ ರಾಜಧಾನಿ ಬೈರುತ್ ಬಂದರಿನಲ್ಲಿ ಮಂಗಳವಾರ ನಡೆದ ಸ್ಫೋಟದಲ್ಲಿ ಮೃತಪಟ್ಟವರಿಗೆ ಭಾರತ ತಂಡದ ನಾಯಕ ಹಾಗೂ ತಂಡದ ಇತರೆ ಸದಸ್ಯರು ಸಂತಾಪ ಸೂಚಿಸಿದ್ದಾರೆ.
ಬುಧವಾರ ಬೈರುತ್ ಬಂದರಿನಲ್ಲಿ ಭಯಾನಕ ಸ್ಫೋಟ ಸಂಭವಿಸಿದ್ದು, ಇದರಲ್ಲಿ ಸುಮಾರು 78 ಮಂದಿ ಸಾವನ್ನಪ್ಪಿದ್ದು, 4000 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾಬ್ ಆರೋಗ್ಯ ಸಚಿವರು ತಿಳಿಸಿದ್ದಾರೆ. ಈ ದಾರುಣ ಘಟನೆಯಲ್ಲಿ ಮೃತಪಟ್ಟ ಬಡಜನರ ಆತ್ಮಕ್ಕೆ ಶಾಂತಿಕೋರಿ ಕೊಹ್ಲಿ ಮತ್ತು ಬಳಗ ದೇವರಲ್ಲಿ ಪ್ರಾರ್ಥಿಸಿದ್ದಾರೆ.
"ಇದೊಂದು ಹೃದಯ ವಿದ್ರಾವಕ ಘಟನೆಯಾಗಿದೆ. ಲೆಬನಾನ್ ಜನತೆಯ ಒಳಿತಿಗಾಗಿ ನಾನು ಪ್ರಾರ್ಥಿಸುತ್ತೇನೆ " ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಜೀವಗಳನ್ನು ಕಳೆದುಕೊಳ್ಳುವುದು ಯಾವಾಗಲೂ ದುರಂತವಿದ್ದಂತೆ. ಲೆಬನಾನ್ನಲ್ಲಿ ಮೃತಪಟ್ಟವರಿಗೆ ನನ್ನ ಸಂತಾಪ ಎಂದು ಆಲ್ರೌಂಡರ್ ರವೀಂದ್ರ ಜಡೇಜಾ ಟ್ವೀಟ್ ಮಾಡಿದ್ದಾರೆ.
ಭಾರತೀಯ ಟೆಸ್ಟ್ ತಂಡದ ಆರಂಭಿಕ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ , ಕೆಎಲ್ ರಾಹುಲ್ ಸೇರಿದಂತೆ ಹಲವಾರು ಕ್ರೀಡಾ ದಿಗ್ಗಜರು ಲೆಬನಾನ್ ಜನತೆಯ ಒಳಿತಿಗಾಗಿ ತಮ್ಮ ಪ್ರಾರ್ಥನೆ ಸಲ್ಲಿಸಿದ್ದಾರೆ.
-
Pray for Lebanon 🙏
— K L Rahul (@klrahul11) August 5, 2020 " class="align-text-top noRightClick twitterSection" data="
">Pray for Lebanon 🙏
— K L Rahul (@klrahul11) August 5, 2020Pray for Lebanon 🙏
— K L Rahul (@klrahul11) August 5, 2020
2,750 ಟನ್ ಅಮೋನಿಯಂ ನೈಟ್ರೇಟ್ ಅನ್ನು ಗೋದಾಮಿನೊಂದರಲ್ಲಿ ಅಸುರಕ್ಷಿತವಾಗಿ ಸಂಗ್ರಹಿಸಿದ್ದರರಿಂದ ಈ ಸ್ಫೋಟ ಸಂಭವಿಸಿದೆ ಎಂದು ಅಧ್ಯಕ್ಷ ಮೈಕೆಲ್ ಅವುನ್ ಹೇಳಿದ್ದಾರೆ