ETV Bharat / sports

ಗಾಯಕ್ವಾಡ್ ಅರ್ಧಶತಕ ಸಿಡಿಸುತ್ತಿದ್ದಂತೆ ಟ್ವಿಟರ್​ನಲ್ಲಿ ಟ್ರೆಂಡ್ ಆದ 'ಸ್ಪಾರ್ಕ್​' ಪದ

ಫೀಲ್ಡಿಂಗ್​ನಲ್ಲೂ 2 ಕ್ಯಾಚ್ ಪಡೆಯುವ ಮೂಲಕ ಉತ್ತಮ ಪ್ರದರ್ಶನ ತೋರಿದ್ದ ಗಾಯಕ್ವಾಡ್​ ಬ್ಯಾಟಿಂಗ್​ನಲ್ಲೂ ಮಿಂಚಿದ್ದರಲ್ಲದೇ ಕೊನೆಯವರೆಗೂ ಕ್ರೀಸ್​ನಲ್ಲಿ ನಿಂತು ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ರುತುರಾಜ್ ಗಾಯಕ್ವಾಡ್​
ರುತುರಾಜ್ ಗಾಯಕ್ವಾಡ್​
author img

By

Published : Oct 25, 2020, 8:48 PM IST

ದುಬೈ: ಟೂರ್ನಿಯಲ್ಲಿ ಕಳಪೆ ಪ್ರದರ್ಶನದ ಮೂಲಕ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ಲೇ ಆಫ್‌ನಿಂದ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್​ ಬಲಿಷ್ಠ ಆರ್​ಸಿಬಿ ತಂಡದ ವಿರುದ್ಧ ಗೆದ್ದು ಕೊನೆಯ ಸ್ಥಾನದಿಂದ 7ನೇ ಸ್ಥಾನಕ್ಕೆ ಬಡ್ತಿಪಡೆದಿದೆ.

ಆರಂಭಿಕನಾಗಿ ಕಣಕ್ಕಿಳಿದಿದ್ದ ರುತುರಾಜ್ ಗಾಯಕ್ವಾಡ್​ ಅರ್ಧಶತಕ ಬಾರಿಸಿ ಸಿಎಸ್​ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು 51 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್​ ಸಹಿತ ಔಟಾಗದೆ 65 ರನ್​ಗಳಿಸಿದರು.

ರುತುರಾಜ್ ಗಾಯಕ್ವಾಡ್ ಅರ್ಧಶತಕ ಸಿಡಿಸುತ್ತಿದ್ದಂತೆ ಸಾಮಾಜಿಕ ಜಾಲಾತಾಣದಲ್ಲಿ ಸ್ಪಾರ್ಕ್ ಎಂಬ ಪದ ಟ್ರೆಂಡ್ ಆಗಿದೆ.

ಏಕೆಂದರೆ 2 ಪಂದ್ಯಗಳ ಹಿಂದೆ ಧೋನಿ, "ತಂಡದಲ್ಲಿರುವ ಯುವ ಆಟಗಾರರಲ್ಲಿ ಪಂದ್ಯವನ್ನು ಗೆದ್ದು ಕೊಡುವ ಸ್ಪಾರ್ಕ್​ ಕಾಣುತ್ತಿಲ್ಲ" ಎಂದು ಹೇಳಿಕೆ ನೀಡಿದ್ದರು. ಆ ಹೇಳಿಕೆಗೆ ಅಭಿಮಾನಿಗಳ ಜೊತೆಗೆ ಕೆಲವು ಕ್ರಿಕೆಟ್​ ದಿಗ್ಗಜರು ಕೂಡ ಕಿಡಿಕಾರಿದ್ದರು. ಅಲ್ಲದೆ ಕೇದರ್ ಜಾಧವ್ ಅಥವಾ ಪಿಯೂಷ್ ಚಾವ್ಲಾ ಅವರಲ್ಲಿ ಧೋನಿಗೆ ಸ್ಪಾರ್ಕ್ ಕಾಣುತ್ತಿದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಇಂದು ಫೀಲ್ಡಿಂಗ್​ನಲ್ಲೂ 2 ಕ್ಯಾಚ್ ಪಡೆಯುವ ಮೂಲಕ ಉತ್ತಮ ಪ್ರದರ್ಶನ ತೋರಿದ್ದ ಗಾಯಕ್ವಾಡ್​ ಬ್ಯಾಟಿಂಗ್​ನಲ್ಲೂ ಮಿಂಚಿದ್ದರಲ್ಲದೇ ಕೊನೆಯವರೆಗೂ ಕ್ರೀಸ್​ನಲ್ಲಿ ನಿಂತು ತಂಡವನ್ನು ಗೆಲುವಿನ ಗಡಿದಾಟಿಸಿದರು.

ಅಭಿಮಾನಿಗಳು ಗಾಯಕ್ವಾಡ್​ ಅವರ ಬ್ಯಾಟಿಂಗ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವಕಾಶ ಕೊಟ್ಟರೆ ಯುವ ಆಟಗಾರರಿಂದ ಇಂತಹ ಸ್ಪಾರ್ಕ್​ ಹೊರಬರುತ್ತದೆ ಎಂದು ಧೋನಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.