ಲಕ್ನೋ: ಇಲ್ಲಿನ ಅಟಲ್ ಬಿಹಾರಿ ವಾಜಪಾಯಿ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ 7 ವಿಕೆಟ್ಗಳ ಜಯ ಸಾಧಿಸಿದ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಇನ್ನು ಒಂದು ಪಂದ್ಯವಿರುವಂತೆ 5 ಪಂದ್ಯಗಳ ಸರಣಿಯನ್ನು 3-1ರಲ್ಲಿ ವಶ ಪಡಿಸಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮಿಥಾಲಿ ರಾಜ್ ಪಡೆ ನಿಗದಿತ 50 ಓವರ್ಗಳಲ್ಲಿ ಪೂನಮ್ ರಾವುತ್(104) ಅವರ ಶತಕ ಹಾಗೂ ಹರ್ಮನ್ ಪ್ರೀತ್ ಕೌರ್(54) ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ 266 ರನ್ಗಳಿಸಿತ್ತು.
ಪೂನಮ್ ರಾವುತ್ 123 ಎಸೆತಗಳಲ್ಲಿ 10 ಬೌಂಡರಿ ಸಹಿತ 104 ರನ್ಗಳಿಸಿದೆ, ಕೌರ್ 35 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 54 ರನ್ಗಳಿಸಿದರು. ಆದರೆ ಉಪನಾಯಕಿ ಮಂಧಾನ ಕೇವಲ 10 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದು ಹಾಗೂ ಪೂನಿಯಾ 32(51 ಎಸೆತ) ಮತ್ತು ಮಿಥಾಲಿ 45(71ಎಸೆತ) ರನ್ಗಳಿಸಿ 266ರನ್ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.
-
💯! 👍👍
— BCCI Women (@BCCIWomen) March 14, 2021 " class="align-text-top noRightClick twitterSection" data="
3⃣rd ODI hundred for @raut_punam! 👏👏
What a fine knock this has been from the right-hander as she guides #TeamIndia to a solid total! 🙌🙌@Paytm #INDWvSAW
Follow the match 👉 https://t.co/QTYZdicOOu pic.twitter.com/gZ3V3ABj44
">💯! 👍👍
— BCCI Women (@BCCIWomen) March 14, 2021
3⃣rd ODI hundred for @raut_punam! 👏👏
What a fine knock this has been from the right-hander as she guides #TeamIndia to a solid total! 🙌🙌@Paytm #INDWvSAW
Follow the match 👉 https://t.co/QTYZdicOOu pic.twitter.com/gZ3V3ABj44💯! 👍👍
— BCCI Women (@BCCIWomen) March 14, 2021
3⃣rd ODI hundred for @raut_punam! 👏👏
What a fine knock this has been from the right-hander as she guides #TeamIndia to a solid total! 🙌🙌@Paytm #INDWvSAW
Follow the match 👉 https://t.co/QTYZdicOOu pic.twitter.com/gZ3V3ABj44
ಇದನ್ನೂ ಓದಿ:ಏಕದಿನ ಕ್ರಿಕೆಟ್ನಲ್ಲಿ 7000 ರನ್ : ಮಿಥಾಲಿ ರಾಜ್ ಮುಡಿಗೆ ಮತ್ತೊಂದು ದಾಖಲೆ
267 ರನ್ಗಳ ಗುರಿ ಪಡೆದ ದಕ್ಷಿಣ ಆಫ್ರಿಕ ತಂಡ 48.4 ಓವರ್ಗಳಲ್ಲಿ ತಲುಪುವ ಮೂಲಕ 7ವಿಕೆಟ್ಗಳ ಸುಲಭ ಜಯ ಸಾಧಿಸಿತು.
ಕಳೆದ ಪಂದ್ಯದ ಶತಕ ವೀರೆ ಲಿಜಿಲೆ ಲೀ 75 ಎಸೆತಗಳಲ್ಲಿ 10 ಬೌಂಡರಿ ಸಹಿತ 69 ರನ್ಗಳಿಸಿದರೆ, ನಾಯಕಿ ವಾಲ್ವಾರ್ಟ್ 53, ಲಾರಾ ಗೂಡಲ್ ಅಜೇಯ 59, ಮಿಗೋನ್ ಡು ಫ್ರೀಜ್ 55 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 61 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನು ಓದಿ:ಆದಿತ್ಯ ತಾರೆ ಶತಕ: ಯುಪಿ ಮಣಿಸಿ 4ನೇ ಬಾರಿ ವಿಜಯ್ ಹಜಾರೆ ಟ್ರೋಫಿ ಗೆದ್ದ ಮುಂಬೈ