ETV Bharat / sports

ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ: ಡು ಪ್ಲೆಸಿಸ್​​ಗೆ ತಂಡದಲ್ಲಿ ಸೇರಿಸಿಕೊಂಡ ದಕ್ಷಿಣ ಆಫ್ರಿಕಾ!

author img

By

Published : Nov 6, 2020, 8:08 PM IST

ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕ-ಇಂಗ್ಲೆಂಡ್ ನಡುವೆ ಕ್ರಿಕೆಟ್ ಸರಣಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ಹರಿಣಗಳ ತಂಡ ಪ್ರಕಟವಾಗಿದೆ.

du Plessis
du Plessis

ಜೋಹಾನ್ಸ್​ಬರ್ಗ್​: ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದಲ್ಲಿದ್ದ ಫಾಫ್​ ಡು ಪ್ಲೆಸಿಸ್​ ಉತ್ತಮ ಪ್ರದರ್ಶನ ನೀಡಿದ್ದರ ಫಲವಾಗಿ ಇದೀಗ ದಕ್ಷಿಣ ಆಫ್ರಿಕಾ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.

ಇದೇ ವರ್ಷ ಫೆಬ್ರವರಿಯಲ್ಲಿ ಡು ಪ್ಲೆಸಿಸ್​ ಆಸ್ಟ್ರೇಲಿಯಾ ವಿರುದ್ಧ ಟಿ-20 ಪಂದ್ಯದಲ್ಲಿ ಕೊನೆಯದಾಗಿ ಭಾಗಿಯಾಗಿದ್ದರು. ಆದರೆ 2019ರಲ್ಲಿ ಮುಕ್ತಾಯಗೊಂಡ ವಿಶ್ವಕಪ್​ ಬಳಿಕ ಅವರು ಏಕದಿನ ತಂಡದಲ್ಲಿ ಅವಕಾಶ ಪಡೆದುಕೊಂಡಿರಲಿಲ್ಲ. ಇದೀಗ ತಂಡದಲ್ಲಿ ಅವಕಾಶ ಪಡೆದುಕೊಳ್ಳುವುದರ ಮೂಲಕ ಕಮ್​ಬ್ಯಾಕ್​ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಟಿ-20 ಹಾಗೂ ಏಕದಿನ ಕ್ರಿಕೆಟ್​ ಸರಣಿ ಇಂಗ್ಲೆಂಡ್​ ವಿರುದ್ಧ ನಡೆಯಲಿದ್ದು, ಅದಕ್ಕಾಗಿ 24 ಸದಸ್ಯರ ಆಫ್ರಿಕ ತಂಡ ಪ್ರಕಟಗೊಂಡಿದೆ. ನವೆಂಬರ್​ 27ರಿಂದ ಡಿಸೆಂಬರ್​ 9ರವರೆಗೆ ಈ ಟೂರ್ನಿ ನಡೆಯಲಿದೆ. ವಿಕೆಟ್​ ಕೀಪರ್​ ಬ್ಯಾಟ್ಸ್​​ಮನ್​ ಕ್ವಿಂಟನ್ ಡಿಕಾಕ್​ ತಂಡ ಮುನ್ನಡೆಸಲಿದ್ದು, ಕೋವಿಡ್ ನಂತರ ದಕ್ಷಿಣ ಆಫ್ರಿಕಾ ಭಾಗಿಯಾಗುತ್ತಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್​ ಸರಣಿ ಇದಾಗಿದೆ.

ತಂಡ ಇಂತಿದೆ: ಕ್ವಿಂಟನ್​ ಡಿಕಾಕ್, ಬಾವುಮಾ, ಜೂನಿಯರ್​ ದಲಾ, ಫಾಫ್​ ಡು ಪ್ಲೆಸಿಸ್​, ಫಾರ್ಚುಯಿನ್​, ಬ್ಯೂರನ್​ ಹೆಂಡ್ರಿಕ್ಸ್​, ರೀಜಾ ಹೆಂಡ್ರಿಕ್ಸ್​​, ಜಾರ್ಜ್​ ಲಿಂಡೆ, ಕೇಶವ್​ ಮಹಾರಾಜ್​, ಮಲನ್​, ಡೇವಿಡ್​ ಮಿಲ್ಲರ್​, ಲುಂಗಿ ಎನ್​ಗಿಡಿ, ಅನ್ರಿಕ್​ ನಾರ್ಟ್ಜೆ, ಫೆಹ್ಲುಕ್ವಾಯೊ, ಕಗಿಸೋ ರಬಾಡ, ಶಮ್ಸಿ, ಸಿಪಮ್ಲಾ, ಸ್ಮಟ್ಸ್​, ಡುಸೆನ್​, ವೆರೆನ್ನೆ, ಬಿಲ್ಜಾನ್.​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.