ಜೋಹಾನ್ಸ್ಬರ್ಗ್: ನಮ್ಮಲ್ಲಿ ಬಂದು ಕ್ರಿಕೆಟ್ ಸರಣಿ ಆಡಿ ಎಂದು ಆಹ್ವಾನ ನೀಡಿದ್ದ ಪಾಕಿಸ್ತಾನದ ಮನವಿಯನ್ನ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ನಯವಾಗಿ ತಳ್ಳಿ ಹಾಕಿದ್ದು, ಪ್ಲೇಯರ್ಸ್ಗಳು ಬಿಡುವಿಲ್ಲದೇ ಕ್ರಿಕೆಟ್ ಆಡುತ್ತಿರುವ ಕಾರಣ ಮಾರ್ಚ್ ತಿಂಗಳಲ್ಲಿ ಅಲ್ಲಿಗೆ ಬರಲು ಸಾಧ್ಯವಿಲ್ಲ ಎಂದಿದೆ.
ಮಾರ್ಚ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತದ ಪ್ರವಾಸ ಕೈಗೊಂಡು ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ಇದಾದ ಬಳಿಕ ಪಾಕ್ಗೆ ಬಂದು ಟಿ-20 ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿತ್ತು. ಆದರೆ, ಆ ಸಮಯದಲ್ಲಿ ನಾವು ಅಲ್ಲಿಗೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ನಮ್ಮ ಪ್ಲೇಯರ್ಸ್ಗಳು ಹೆಚ್ಚಿನ ಟೂರ್ನಿಗಳಲ್ಲಿ ಭಾಗಿಯಾಗುತ್ತಿರುವ ಕಾರಣ ಈ ಸಮಯದಲ್ಲಿ ಅಲ್ಲಿಗೆ ಬರಲು ಅಸಾಧ್ಯ. ಮುಂದಿನ ತಿಂಗಳು ಎರಡು ತಂಡಗಳಿಗೂ ಸೂಕ್ತವಾಗಿ ಸಮಯದಲ್ಲಿ ಸರಣಿ ಆಯೋಜನೆ ಮಾಡುವಂತೆ ಮನವಿ ಮಾಡಿಕೊಂಡಿದೆ. ದಕ್ಷಿಣ ಆಫ್ರಿಕಾ ತಂಡ ಮಾರ್ಚ್ 12ರಿಂದ 18ರವರೆಗೆ ಭಾರತದಲ್ಲಿ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನಾಡಲಿದೆ. ಇದಾದ ಬಳಿಕ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ ರಾವಲ್ಪಿಂಡಿಯಲ್ಲಿ ಮಾರ್ಚ್ 22ರಿಂದ 29ರವರೆಗೆ ಮೂರು ಟಿ-20 ಪಂದ್ಯಗಳ ಸರಣಿಯನ್ನಾಡಿಸಲು ಪ್ರಸ್ತಾಪಿಸಲಾಗಿತ್ತು.
ಸದ್ಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಟಿ-20 ಪಂದ್ಯಗಳ ಕ್ರಿಕೆಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾಗಿಯಾಗಿದ್ದು, ಎರಡು ಪಂದ್ಯಗಳಲ್ಲಿ ಉಭಯ ತಂಡ ಗೆಲುವು ಸಾಧಿಸಿ ಸರಣಿ ಸಮಬಲ ಮಾಡಿಕೊಂಡಿದೆ. ಕೊನೆ ಪಂದ್ಯ ಮುಕ್ತಾಯಗೊಂಡ ಬಳಿಕ ವರು ನೆಲದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಮೂರು ಏಕದಿನ ಪಂದ್ಯ ಹಾಗೂ ಅಷ್ಟೇ ಪಂದ್ಯಗಳ ಟಿ-20 ಸರಣಿಯಲ್ಲಿ ಭಾಗಿಯಾಗಲಿದೆ. ಮಾರ್ಚ್ 7ಕ್ಕೆ ಈ ಎಲ್ಲ ಸರಣಿಗಳು ಅಂತ್ಯಗೊಳ್ಳಲಿವೆ.