ಕರಾಚಿ: ಭಾರತ ಪ್ರವಾಸ ಮುಗಿದ ಬಳಿಕ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ತೆರಳಬೇಕಿತ್ತು. ಆದರೆ ಇದೀಗ ಪಾಕ್ ಪ್ರವಾಸ ರದ್ದುಗೊಳಿಸಿದೆ ಎಂದು ತಿಳಿದುಬಂದಿದೆ.
-
South Africa delay Pakistan tour due to player workloadhttps://t.co/QY3z3UKM9w pic.twitter.com/iB5WBNJ5Wn
— PCB Media (@TheRealPCBMedia) February 14, 2020 " class="align-text-top noRightClick twitterSection" data="
">South Africa delay Pakistan tour due to player workloadhttps://t.co/QY3z3UKM9w pic.twitter.com/iB5WBNJ5Wn
— PCB Media (@TheRealPCBMedia) February 14, 2020South Africa delay Pakistan tour due to player workloadhttps://t.co/QY3z3UKM9w pic.twitter.com/iB5WBNJ5Wn
— PCB Media (@TheRealPCBMedia) February 14, 2020
'ಮುಂದಿನ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನಕ್ಕೆ ಬರುವುದಿಲ್ಲ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ ಪ್ರವಾಸಕ್ಕೆ ಸಿದ್ಧವಾಗಿದೆ ಈ ನಿಟ್ಟಿನಲ್ಲಿ ಹೊಸ ದಾರಿ ಹುಡುಕಲಾಗುವುದು. ಭದ್ರತೆಯ ಕಾರಣದಿಂದಾಗಿ ಈ ಪ್ರವಾಸ ರದ್ದುಮಾಡಿಲ್ಲ. ಆಟಗಾರರಿಗೆ ಸಮಯದ ಅಭಾವ ಇರುವ ಕಾರಣ ಪಾಕ್ ಪ್ರವಾಸ ರದ್ದುಗೊಂಡಿದೆ' ಎಂದು ಪಾಕ್ ಬೋರ್ಡ್ ತಿಳಿಸಿದೆ.
ಮಾರ್ಚ್ 12ರಂದು ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಆಗಮಿಸಲಿದ್ದು, ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದ್ದಾರೆ. ಆ ಬಳಿಕ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ 3 ಪಂದ್ಯಗಳ ಟಿ-20 ಸರಣಿ ಆಡಲು ತೀರ್ಮಾನಿಸಲಾಗಿತ್ತು. ಆದರೆ ಇದೀಗ ಪಾಕ್ ಪ್ರವಾಸ ರದ್ದುಗೊಳಿಸಿದೆ.
ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಸರಣಿ ಸಮಸ್ಯೆ ಎದುರಿಸುತ್ತಿದ್ದು, ಎರಡೂ ಬೋರ್ಡ್ಗಳು ಇದೇ ವರ್ಷ ಮತ್ತೊಂದು ಸರಣಿ ಆಯೋಜನೆ ಮಾಡುವ ಕುರಿತು ಚರ್ಚೆ ನಡೆಸುತ್ತಿವೆ. ಎಂದು ಪಿಸಿಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.