ETV Bharat / sports

ಡಕ್ವರ್ಥ್ ಲೂಯಿಸ್​ ನಿಯಮದಡಿ ಭಾರತದ ವಿರುದ್ಧ ಗೆದ್ದ ಆಫ್ರಿಕಾ - ದಕ್ಷಿಣ ಆಫ್ರಿಕಾ-ಭಾರತ ಮಹಿಳಾ 3ನೇ ಏಕದಿನ

ಪ್ರವಾಸಿ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ನಡೆದ ಮೂರನೇ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯದಲ್ಲಿ ಭಾರತದ ಮಹಿಳಾ ಪಡೆ ಸೋಲು ಕಂಡಿದ್ದು, ಈ ಮೂಲಕ ನಿರಾಸೆಗೊಳಗಾಗಿದೆ.

South Africa beat India
South Africa beat India
author img

By

Published : Mar 12, 2021, 5:46 PM IST

ಲಕ್ನೋ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಡಕ್ವರ್ಥ್​ ಲೂಯಿಸ್​ ನಿಯಮದಡಿ 6 ರನ್​ಗಳ ಅಂತರದ ಸೋಲು ಕಂಡಿದ್ದು, ಈ ಮೂಲಕ ಸರಣಿಯಲ್ಲಿ 1-2 ಅಂತರದ ಹಿನ್ನಡೆ ಅನುಭವಿಸಿದೆ.

ಟಾಸ್​​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಟೀಂ ಇಂಡಿಯಾ ಪೂನಂ ರಾವತ್​​​ ಅವರ 77ರನ್​ಗಳ ನೆರವಿನಿಂದ 50 ಓವರ್​ಗಳಲ್ಲಿ 5ವಿಕೆಟ್​ ಕಳೆದುಕೊಂಡು 248ರನ್​ಗಳಿಕೆ ಮಾಡಿತು. ಟೀಂ ಇಂಡಿಯಾ ಪರ ಸ್ಮೃತಿ ಮಂದಾನಾ 25ರನ್​, ಮಿಥಾಲಿ ರಾಜ್​ 36, ಹರ್ಮನ್​ಪ್ರೀತ್​ ಕೌರ್​ 36 ಹಾಗೂ ದಿಫ್ತಿ ಶರ್ಮಾ ಅಜೇಯ 36ರನ್​ಗಳಿಕೆ ಮಾಡಿದರು.

ಇದನ್ನೂ ಓದಿ: ಇಂದು ಸಂಜೆ ಭಾರತ-ಇಂಗ್ಲೆಂಡ್​ ಟಿ-20 ಪಂದ್ಯ​: ಶೇ.50ರಷ್ಟು ಜನರಿಗೆ ಮಾತ್ರ ವೀಕ್ಷಣೆ ಅವಕಾಶ

249 ರನ್​ಗಳ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಭ ಪಡೆದುಕೊಂಡಿತು. ತಂಡ 4ವಿಕೆಟ್ ​ನಷ್ಟಕ್ಕೆ 223ರನ್​ಗಳಿಕೆ ಮಾಡಿದ್ದಾಗ ಮಳೆ ಸುರಿಯಿತು. ಹೀಗಾಗಿ ಡಕ್ವರ್ಥ್​ ಲೂಯಿಸ್​ ನಿಯಮದಡಿ ದಕ್ಷಿಣ ಆಫ್ರಿಕಾ 6 ರನ್​ಗಳ ಅಂತರದಿಂದ ಗೆಲುವು ಸಾಧಿಸಿದೆ. ತಂಡದ ಪರ ಆರಂಭಿಕ ಆಟಗಾರ್ತಿ ಲಿಜೆಲ್ ಲೀ ಅಜೇಯ 132ರನ್​ಗಳಿಕೆ ಮಾಡಿ ತಂಡಕ್ಕೆ ನೆರವಾದರು.

ಸಂಕ್ಷಿಪ್ತ ಸ್ಕೋರ್​

ಇಂಡಿಯಾ ವುಮೆನ್ಸ್​: 248/5(50 ಓವರ್​​): ಪೂನಂ ರಾವತ್​​ 77, ದೀಪ್ತಿ ಶರ್ಮಾ ಅಜೇಯ 36ರನ್​​

ಆಫ್ರಿಕಾ ವುಮೆನ್ಸ್​​​: 223/4(46.3 ಓವರ್ಸ್​​): ಲಿಜೆಲ್ ಲೀ ಅಜೇಯ 132ರನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.