ಪೊಚೆಫ್‌ಸ್ಟ್ರೂಮ್: ಆಸ್ಟ್ರೇಲಿಯಾ ವಿರುದ್ಧ ಶನಿವಾರ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 6 ವಿಕೆಟ್ಗಳ ಗೆಲುವು ಸಾಧಿಸುವ ಮೂಲಕ ಏಕದಿನ ಸರಣಿಯನ್ನು 3-0ಯಲ್ಲಿ ವೈಟ್ವಾಶ್ ಸಾಧನೆ ಮಾಡಿದೆ. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ಸತತ 2ನೇ ಬಾರಿ ಕ್ಲೀನ್ ಸ್ವೀಪ್ ಸಾಧಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಸತತ ಸರಣಿ ಸೋಲುಗಳಿಂದ ನಿರಾಶೆ ಅನುಭವಿಸಿದ್ದ ದಕ್ಷಿಣ ಆಫ್ರಿಕಾ ಗೆಲುವಿನ ಹಳಿಗೆ ಮರಳಿದ್ದು, ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧವೇ ವೈಟ್ವಾಶ್ ಸಾಧನೆ ಮಾಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ ಮಾರ್ನಸ್ ಲಾಬುಶೇನ್(108) ಅವರ ಶತಕ ಹಾಗೂ ಡಾರ್ಸಿ ಶಾರ್ಟ್ (36), ಮಿಚೆಲ್ ಮಾರ್ಷ್ (32) ನೆರವಿನಿಂದ 254 ರನ್ಗಳಿಸಿತು.
-
Klaasen passes fifty for the third time in as many innings 🔥
— ICC (@ICC) March 7, 2020 " class="align-text-top noRightClick twitterSection" data="
And he then hits three consecutive boundaries to seal the win!
South Africa sweep the series 3-0 🏆 #SAvAUS pic.twitter.com/1AyzXitX7q
">Klaasen passes fifty for the third time in as many innings 🔥
— ICC (@ICC) March 7, 2020
And he then hits three consecutive boundaries to seal the win!
South Africa sweep the series 3-0 🏆 #SAvAUS pic.twitter.com/1AyzXitX7qKlaasen passes fifty for the third time in as many innings 🔥
— ICC (@ICC) March 7, 2020
And he then hits three consecutive boundaries to seal the win!
South Africa sweep the series 3-0 🏆 #SAvAUS pic.twitter.com/1AyzXitX7q
ದಕ್ಷಿಣ ಆಫ್ರಿಕಾ ತಂಡದ ಪರ ಆ್ಯನ್ರಿಚ್ ನಾರ್ಟ್ಜ್ 2 ವಿಕೆಟ್, ಜೆಜೆ ಸ್ಮಟ್ಸ್ 2, ಪೆಹ್ಲುಕ್ವಾಯೋ ಹಾಗೂ ಡೇರಿನ್ ಡುಪವಿಲನ್ ತಲಾ ಒಂದು ವಿಕೆಟ್ ಪಡೆದು ಆಸ್ಟ್ರೇಲಿಯಾವನ್ನು ಹೆಚ್ಚು ರನ್ಗಳಿಸದಂತೆ ತಡೆಯುವಲ್ಲಿ ಯಶಸ್ವಿಯಾದರು.
255 ರನ್ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ 45.3 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಕ್ಲೀನ್ ಸ್ವೀಪ್ ಸಾಧನೆ ಮಾಡಿತು.
ಜೆಜೆ ಸ್ಮಟ್ಸ್ 84, ಡಿಕಾಕ್ 26, ಜೆ.ಮಲಾನ್ 23, ಕೈಲ್ ವೆರೆಯಾನ್ನೆ 50, ಹೆನ್ರಿಚ್ ಕ್ಲಾಸೆನ್ ಔಟಾಗದೆ 68 ರನ್ ಗಳಿಸಿ ಗೆಲುವಿನ ರೂವಾರಿಯಾದರು. ಆಸ್ಟ್ರೇಲಿಯಾ ಪರ ಹೆಜಲ್ವುಡ್ 2, ಜಂಪಾ ಹಾಗೂ ಕೇನ್ ರಿಚರ್ಡ್ಸನ್ ತಲಾ ಒಂದು ವಿಕೆಟ್ ಪಡೆದರು.
ಈ ಸರಣಿ ಸೋಲಿನ ಮೂಲಕ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸತತ 8 ಪಂದ್ಯ ಹಾಗೂ ಸತತ ಎರಡನೇ ಬಾರಿಗೆ ವೈಟ್ವಾಶ್ ಮುಖಭಂಗಕ್ಕೆ ಒಳಗಾಗಿದೆ.
2016-17ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ 5-0ಯಲ್ಲಿ ಮುಖಭಂಗ ಅನುಭವಿಸಿತ್ತು. ಅಲ್ಲದೆ ಅಸ್ಟ್ರೇಲಿಯಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 3 ಅಥವಾ ಹೆಚ್ಚಿನ ಪಂದ್ಯಗಳ ಸರಣಿಯಲ್ಲಿ 5ನೇ ಬಾರಿಗೆ ವೈಟ್ವಾಶ್ ಮುಖಭಂಗಕ್ಕೆ ತುತ್ತಾಯಿತು.