ಕೋಲ್ಕತ್ತಾ: ಕಳಪೆ ವಿಕೆಟ್ ಕೀಪಿಂಗ್ ಮೂಲಕ ಟೀಕೆಗೊಳಗಾಗಿರುವ ರಿಷಭ್ ಪಂತ್ ಪರ ರೋಹಿತ್ ಶರ್ಮಾ ಬಳಿಕ ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬ್ಯಾಟ್ ಬೀಸಿದ್ದಾರೆ.
ರಿಷಭ್ ಪಂತ್ ಓರ್ವ ಅದ್ಭುತ ಹಾಗೂ ಪ್ರತಿಭಾವಂತ ಪ್ಲೇಯರ್ ಆಗಿದ್ದು, ಸ್ವಲ್ಪ ಸಮಯವಕಾಶ ನೀಡಿದ್ರೆ ಅವರು ತಮ್ಮ ತಪ್ಪು ಸರಿಪಡಿಸಿಕೊಳ್ಳಲಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ.

ಬಾಂಗ್ಲಾದೇಶದ ವಿರುದ್ಧದ ಮೊದಲ ಪಂದ್ಯದಲ್ಲಿ ಡಿಆರ್ಎಸ್ ತಪ್ಪಾಗಿ ಬಳಕೆ ಮಾಡಿ ಟ್ರೋಲ್ಗೆ ಒಳಗಾಗಿದ್ದ ಪಂತ್, ಎರಡನೇ ಪಂದ್ಯದಲ್ಲೂ ವಿಕೆಟ್ ಕೀಪಿಂಗ್ನಲ್ಲಿ ಯಡವಟ್ಟು ಮಾಡಿಕೊಂಡಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕ್ಯಾಪ್ಟನ್ ರೋಹಿತ್ ಶರ್ಮಾ, ಸ್ವಲ್ಪ ದಿನಗಳ ಕಾಲ ಅವರನ್ನ ಅವರಷ್ಟಕ್ಕೆ ಬಿಟ್ಟು ಬಿಡಿ ಎಂದು ಹೇಳಿದ್ದರು. ಇದೀಗ ಗಂಗೂಲಿ ಮಾತನಾಡಿ, ರಿಷಭ್ ಪಂತ್‌ಗೆ ಸ್ವಲ್ಪ ಸಮಯ ಕೊಡಿ. ಆತ ಸುಧಾರಿಸಿಕೊಳ್ಳುತ್ತಾನೆ ಎಂದಿದ್ದಾರೆ. ಈ ಹಿಂದೆ ಸಹ ಪಂತ್ ಪರ ಬ್ಯಾಟ್ ಬೀಸಿದ್ದ ಗಂಗೂಲಿ ಅವರಿಗೆ ಸಮಯವಕಾಶ ನೀಡುವಂತೆ ತಿಳಿಸಿದ್ದರು.