ಹೈದರಾಬಾದ್: ಬಾಂಗ್ಲಾ ವಿರುದ್ಧ ರಿಷಭ್ ಆಡುವಾಗ ಮೈದಾನದಲ್ಲಿದ್ದ ಅಭಿಮಾನಿಗಳು ಧೋನಿ.. ಧೋನಿ ಎಂದು ಘೋಷಣೆ ಕೂಗುತ್ತಿದ್ದರು. ಇದನ್ನು ಖಂಡಿಸಿದ್ದ ಕೊಹ್ಲಿ, ಪ್ರತಿಯೊಬ್ಬ ಆಟಗಾರನನ್ನೂ ಗೌರವಿಸಬೇಕು. ಈ ರೀತಿ ಮಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಪಂತ್ ಕುರಿತು ವಿರಾಟ್ ಹೇಳಿದ್ದ ಈ ಮಾತುಗಳಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾ ದೇಶದ ವಿರುದ್ಧದ ಮೂರು ಟಿ-20 ಪಂದ್ಯಗಳಿಂದ ರಿಷಭ್ ಪಂತ್ ಕೇವಲ 36 ರನ್ ಗಳಿಸಿದ್ದಾರೆ. ಆದಾಗ್ಯೂ, ವಿರಾಟ್ ಕೊಹ್ಲಿ ರಿಷಭ್ ಪಂತ್ ಬೆನ್ನಿಗೆ ನಿಂತಿದ್ದರು. ಪ್ರತಿಯೊಬ್ಬರಿಗೂ ಅವರದ್ದೇ ಆದ ಜವಾಬ್ದಾರಿ ಇದೆ, ಮುಂದಿನ ಪಂದ್ಯಗಳಲ್ಲಾದರೂ ಪಂತ್ರನ್ನ ಅವರಷ್ಟಕ್ಕೆ ಬಿಡಿ, ಧೋನಿ, ಧೋನಿ ಎಂಬ ಘೋಷಣೆ ಕೂಗಬೇಡಿ ಎಂದು ಕೊಹ್ಲಿ ಅಭಿಮಾನಿಗಳನ್ನು ಕೇಳಿಕೊಂಡಿದ್ದರು.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದು ಧೋನಿ ಎಂಬ ಘೋಷಣೆ ನಡುವೆಯೇ ಪಂತ್ ಕಣಕ್ಕಿಳಿದು ಆಡಬೇಕು. ಅದೇ ಘೋಷಣೆಗಳೇ ಪಂತ್ ಯಶಸ್ಸಿಗೆ ಸ್ಫೂರ್ತಿಯಾಗಬೇಕು. ಧೋನಿ ಕೂಡಾ ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ ಧೋನಿ ಆಗಿರಲಿಲ್ಲ. ಆ ಹೆಸರು ಸಂಪಾದಿಸಲು 15 ವರ್ಷ ಬೇಕಾಯಿತು. ಧೋನಿ ಅವರ ಸಮೀಪಕ್ಕೆ ತೆರಳಲು ಪಂತ್ಗೆ 15 ವರ್ಷವಾದರೂ ಬೇಕಾಗುತ್ತದೆ ಎಂದು ದಾದಾ ಅಭಿಪ್ರಾಯಪಟ್ಟರು.