ಅಡಿಲೇಡ್: ಮಹಿಳಾ ಬಿಗ್ಬ್ಯಾಸ್ನ 5ನೇ ಆವೃತ್ತಿಯಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡದ ಆಲ್ರೌಂಡರ್ ಆಗಿರುವ ಸೋಫಿ ಡಿವೈನ್ ಸತತ 5 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ.
ನ್ಯೂಜಿಲ್ಯಾಂಡ್ನ ಆಲ್ರೌಂಡರ್ ಸೋಫಿ ಡಿವೈನ್ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಬೌಲರ್ ಮೆಡಿಲಿನ್ ಪೆನ್ನಾ ಎಸೆದ ಕೊನೆಯ ಓವರ್ನ 5 ಎಸೆತಗಳನ್ನೂ ಸಿಕ್ಸರ್ ಸಿಡಿಸುವ ಮೂಲಕ ಬಿಗ್ಬ್ಯಾಸ್ನಲ್ಲಿ ಒಂದೇ ಓವರ್ನಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಗೆ ಪಾತ್ರರಾದರು. ಈ ಹಿಂದೆ 2014ರಲ್ಲಿ ಸಿಡ್ನಿ ಸಿಕ್ಸರ್ಸ್ನ ಅ್ಯಶ್ ಗಾರ್ಡ್ನರ್ ಡಿವೈನ್ ಬೌಲಿಂಗ್ನಲ್ಲಿಯೇ ಸತತ 3 ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿದ್ದರು.
-
6 6 6 6 6 🤯 WHAT THE HECK SOPHIE!?@CommBank | #WBBL05 pic.twitter.com/YXhhNjznHC
— Rebel Women's Big Bash League (@WBBL) November 10, 2019 " class="align-text-top noRightClick twitterSection" data="
">6 6 6 6 6 🤯 WHAT THE HECK SOPHIE!?@CommBank | #WBBL05 pic.twitter.com/YXhhNjznHC
— Rebel Women's Big Bash League (@WBBL) November 10, 20196 6 6 6 6 🤯 WHAT THE HECK SOPHIE!?@CommBank | #WBBL05 pic.twitter.com/YXhhNjznHC
— Rebel Women's Big Bash League (@WBBL) November 10, 2019
ಕೊನೆಯ ಓವರ್ ವರೆಗೆ 51 ಎಸೆತಗಳಲ್ಲಿ 55 ರನ್ ಗಳಿಸಿದ್ದರು. ಆದರೆ ಕೊನೆಯ ಓವರ್ನ ಕೊನೆಯ 5 ಎಸೆತಗಳನ್ನು ಬೌಂಡರಿ ಗೆರೆ ದಾಟಿಸುವ ಮೂಲಕ 56 ಎಸೆತಗಳಲ್ಲಿ ತಮ್ಮ ಮೊತ್ತವನ್ನು 85 ರನ್ಗಳಿಗೆ ಏರಿಸಿಕೊಂಡರು.
ಬೌಲಿಂಗ್ನಲ್ಲಿ ಕಮಾಲ್ ಮಾಡಿದ ಡಿವೈನ್ 2 ವಿಕೆಟ್ ಪಡೆದು ಅಡಿಲೇಡ್ ಸ್ಟೈಕರ್ಸ್ಗೆ 14 ರನ್ಗಳ ಗೆಲುವು ತಂದುಕೊಟ್ಟು, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.