ETV Bharat / sports

ಐಪಿಎಲ್‌ ಮಹಿಮೆ: ಪಾನಿಪುರಿ ಮಾರುತ್ತಿದ್ದ ಹುಡುಗ ಕೋಟ್ಯಧಿಪತಿಯಾದ! - ಪ್ರಿಯಂ ಗಾರ್ಗ್​​

ಇಂಡಿಯನ್​ ಪ್ರೀಮಿಯರ್​ ಲೀಗ್​ ಕ್ರಿಕೆಟ್‌ನ ಹರಾಜು ಪ್ರಕ್ರಿಯೆಯಲ್ಲಿ 19 ವರ್ಷದೊಳಗಿನ ಆಟಗಾರನಿಗೆ ಜಾಕ್​ಪಾಟ್​ ಹೊಡೆದಿದೆ.

Youngest players
ಯಶಸ್ವಿ ಜೈಸ್ವಾಲ್​ಗೆ ಬಂಪರ್​​
author img

By

Published : Dec 20, 2019, 2:06 PM IST

ಕೋಲ್ಕತ್ತಾ: ಇಂಡಿಯನ್​ ಪ್ರೀಮಿಯರ್​ ಲೀಗ್​​ನ ಹರಾಜು ಪ್ರಕ್ರಿಯೆಯಲ್ಲಿ ಪ್ರಮುಖ ಆಟಗಾರರ ಜೊತೆ ಜೊತೆಗೆ ಭವಿಷ್ಯದ ಯುವತಾರೆಗಳಿಗೆ ಫ್ರಾಂಚೈಸಿಗಳು ಮಣೆ ಹಾಕಿದ್ದು, ಕೋಟಿ ಕೋಟಿ ಹಣ ನೀಡಿ ತಮ್ಮ ತಂಡಗಳಿಗೆ ಸೇರಿಸಿಕೊಂಡಿವೆ.

ಯಶಸ್ವಿ ಜೈಸ್ವಾಲ್​​

ಭಾರತ ತಂಡದ ಅಂಡರ್-19 ಆಟಗಾರ ಯಶಸ್ವಿ ಜೈಸ್ವಾಲ್​ 2019ರ ವಿಜಯ್​ ಹಜಾರೆ ಸೀಸನ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಮಾಡುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದರು. ಇದೀಗ ಐಪಿಎಲ್‌ ಹರಾಜು ಪ್ರಕ್ರಿಯೆಯಲ್ಲಿ ಜೈಸ್ವಾಲ್‌ಗೆ ಅದೃಷ್ಟದ ಬಾಗಿಲು ತೆರೆದಿದೆ. ಬರೋಬ್ಬರಿ 2.4 ಕೋಟಿ ರೂಗಳಿಗೆ ರಾಜಸ್ಥಾನ್ ರಾಯಲ್ಸ್ ತಂಡ ಅವರನ್ನು ಖರೀದಿಸಿದೆ. ಕೇವಲ 20 ಲಕ್ಷ ರೂ ಮೂಲ ಬೆಲೆ ಹೊಂದಿದ್ದ ಈ ಆಟಗಾರ​ ಕ್ರಿಕೆಟ್​ಗಾಗಿ ಊರು ಬಿಟ್ಟು, ಹಾಲಿನ ಡೈರಿಯಲ್ಲಿ ಕೆಲಸ ಮಾಡುತ್ತಿದ್ದನಂತೆ. ಒಂದು ಹೊತ್ತು ಊಟಕ್ಕಾಗಿ ಪಾನಿಪುರಿ ಮಾರಾಟ ಮಾಡಿ ಟೆಂಟ್​ನಲ್ಲೇ ರಾತ್ರಿ ಕಳೆಯುತ್ತಿದ್ದ ಎನ್ನುವ ವಿಚಾರ ಗೊತ್ತಾಗಿದೆ.

ವರುಣ ಚಕ್ರವರ್ತಿ

ಇದರ ಜತೆಗೆ ಅಂಡರ್​​​-19 ತಂಡದ ಕ್ಯಾಪ್ಟನ್​​ ಪ್ರಿಯಂ ಗಾರ್ಗ್ ಸಹ ಐಪಿಎಲ್‌ನಲ್ಲಿ ಛಾಪು ಮೂಡಿಸಿದ್ದು, 20 ಲಕ್ಷ ರೂ ಮೂಲ ಬೆಲೆ ಹೊಂದಿದ ಈ ಆಟಗಾರ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಬರೋಬ್ಬರಿ 1.9 ಕೋಟಿ ರೂಗೆ ಬಿಕರಿಯಾಗಿದ್ದಾರೆ. ಇದರ ಜತೆಗೆ ಮತ್ತೊಬ್ಬ ಭಾರತದ ಯುವ ಪ್ರತಿಭಾವಂತ ಆಟಗಾರರಾದ ವಿರಾಟ್ ಸಿಂಗ್​ ಕೂಡ ಸನ್​ರೈಸರ್ಸ್​ ತಂಡಕ್ಕೆ 1.9 ಕೋಟಿ ರೂಗೆ ಸೇಲ್​ ಆಗಿದ್ದಾರೆ.

ಪ್ರಿಯಾಂ ಗರ್ಗ್​​
​ಅಂಡರ್​​-19 ತಂಡದ ಯುವ ಸ್ಪಿನ್ನರ್ ರವಿ ಬಿಷ್ಣೋಯಿ 2 ಕೋಟಿ ರೂ. ಗಳಿಗೆ ಕಿಂಗ್ಸ್‌ ಇಲೆವೆನ್ ಪಂಜಾಬ್​ ತಂಡದ ಪಾಲಾಗಿದ್ದು, ಸೈಯದ್​ ಮುಷ್ತಾಕ್‌​ ಅಲಿ ಟೂರ್ನಿಯಲ್ಲಿ 12 ವಿಕೆಟ್​ ಕಿತ್ತು ಎಲ್ಲರ ಗಮನ ಸೆಳೆದಿದ್ದರು. ಹಾಗೇನೇ ಕಾರ್ತಿಕ್​ ತ್ಯಾಗಿ ಕೂಡ ರಾಜಸ್ಥಾನ ರಾಯಲ್ಸ್​​ ತಂಡಕ್ಕೆ 1.3 ಕೋಟಿಗೆ ಸೇಲ್​ ಆಗಿದ್ದು, ಇವರ ಮೂಲಬೆಲೆ 20 ಲಕ್ಷ ರೂ ಆಗಿತ್ತು. ಇನ್ನುಳಿದಂತೆ ಕಳೆದ ವರ್ಷ ಬರೋಬ್ಬರಿ 8.4 ಕೋಟಿ ರೂಗೆ ಮಾರಾಟವಾಗಿದ್ದ​ ವರುಣ್​ ಚಕ್ರವರ್ತಿ ಈ ಬಾರಿ ಕೋಲ್ಕತ್ತಾ ತಂಡಕ್ಕೆ 4 ಕೋಟಿ ರೂ ಬಿಕರಿಯಾಗಿದ್ದಾರೆ.

Intro:Body:

ಪಾನಿಪುರಿ ಮಾರುತ್ತಿದ್ದ ಹುಡುಗನಿಗೆ IPLನಲ್ಲಿ ಬಂಪರ್​​... ಯಂಗ್​ ಪ್ಲೇಯರ್ಸ್​ಗೆ ಕೋಟಿ ಕೋಟಿ ನೀಡಿದ ಪ್ರಾಂಚೈಸಿ! 

ಕೋಲ್ಕತ್ತಾ: ಇಂಡಿಯನ್​ ಪ್ರೀಮಿಯರ್​ ಲೀಗ್​​ನ ಹರಾಜು ಪ್ರಕ್ರಿಯೆಯಲ್ಲಿ ಪ್ರಮುಖ ಪ್ಲೇಯರ್ಸ್​ಗಳ ಜೊತೆ ಜೊತೆಗೆ ಕೆಲವೊಂದು ಭವಿಷ್ಯದ ತಾರೆಗಳಿಗೆ ಪ್ರಾಂಚೈಸಿಗಳು ಮಣೆ ಹಾಕಿದ್ದು, ಕೋಟಿ ಕೋಟಿ ಹಣ ನೀಡಿ ತಮ್ಮ ತಂಡಗಳಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. 

ಭಾರತ ತಂಡದ ಅಂಡರ್​ 19 ಆಟಗಾರ ಯಶಸ್ವಿ ಜೈಸ್ವಾಲ್​ 2019ರ ವಿಜಯ್​ ಹಜಾರೆ ಸೀಸನ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಇಡೀ ದೇಶವನ್ನೇ ತನ್ನತ್ತಾ ತಿರುಗುವಂತೆ ಮಾಡಿದ್ದರು. ಇದೀಗ ಇಂಡಿಯನ್​​ ಪ್ರೀಮಿಯರ್​ ಲೀಗ್​​ನ ಹರಾಜು ಪ್ರಕ್ರಿಯೆಯಲ್ಲಿ ಅವರ ಅದೃಷ್ಠದ ಬಾಗಿಲು ತೆರೆದಿದ್ದು, ಬರೋಬ್ಬರಿ 2.4 ಕೋಟಿ ರೂಪಾಯಿಗಳಿಗೆ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ. ಕೇವಲ 20 ಲಕ್ಷ ಮೂಲ ಬೆಲೆ ಹೊಂದಿದ್ದ ಈ ಪ್ಲೇಯರ್​ ಕ್ರಿಕೆಟ್​ಗಾಗಿ ಊರು ಬಿಟ್ಟು, ಹಾಲಿನ ಡೈರಿಯಲ್ಲಿ ಕೆಲಸ ಮಾಡಿ, ಒಂದೊತ್ತು ಊಟಕ್ಕಾಗಿ ಪಾನಿಪುರಿ ಮಾರಿ ಟೆಂಟ್​ನಲ್ಲಿ ಮಲಗುತ್ತಿದ್ದರು. 

ಇದರ ಜತೆಗೆ ಅಂಡರ್​​​-19 ತಂಡದ ಕ್ಯಾಪ್ಟನ್​​ ಪ್ರಿಯಂ ಗಾರ್ಗ್ ಸಹ ಐಪಿಎಲ್‌ನಲ್ಲಿ ಛಾಪು ಮೂಡಿಸಿದ್ದು, 20 ಲಕ್ಷ ರೂ ಮೂಲ ಬೆಲೆ ಹೊಂದಿದ್ದ ಈ ಪ್ಲೇಯರ್​​ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಬರೋಬ್ಬರಿ 1.9 ಕೋಟಿ ರೂಗೆ ಬಿಕರಿಯಾಗಿದ್ದಾರೆ. ಇದರ ಜತೆಗೆ ಮತ್ತೊಬ್ಬ ಭಾರತದ ಯುವ ಪ್ರತಿಭಾವಂತ ಆಟಗಾರರಾದ ವಿರಾಟ್ ಸಿಂಗ್​ ಕೂಡ ಸನ್​ರೈಸರ್ಸ್​ ತಂಡಕ್ಕೆ 1.9 ಕೋಟಿ ರೂಗೆ ಸೇಲ್​ ಆಗಿದ್ದಾರೆ. 

​​ 

ಅಂಡರ್​​-19 ತಂಡದ  ಯುವ ಸ್ಪಿನ್ನರ್ ರವಿ ಬಿಷ್ಣೋಯಿ 2 ಕೋಟಿ ರೂ. ಗಳಿಗೆ ಕಿಂಗ್​​ ಎಲೆವೆನ್ ಪಂಜಾಬ್​್ ತಂಡದ ಪಾಲಾಗಿದ್ದು, ಸೈಯದ್​ ಮುಸ್ತಾಕ್​ ಅಲಿ ಟೂರ್ನಿಯಲ್ಲಿ 12 ವಿಕೆಟ್​ ಕಿತ್ತು ಎಲ್ಲರ ಗಮನ ಸೆಳೆದಿದ್ದರು.  ಮತ್ತೊಬ್ಬ ಅಂಡರ್​​-19 ಪ್ಲೇಯರ್ ಕಾರ್ತಿಕ್​ ತ್ಯಾಗಿ ಕೂಡ ರಾಜಸ್ಥಾನ ರಾಯಲ್ಸ್​​ ತಂಡಕ್ಕೆ 1.3 ಕೋಟಿಗೆ ಸೇಲ್​ ಆಗಿದ್ದು, ಇವರ ಮೂಲಬೆಲೆ 20 ಲಕ್ಷ ಆಗಿತ್ತು. ಇನ್ನೊಳಿದಂತೆ ಕಳೇದ ವರ್ಷದ ಬರೋಬ್ಬರಿ 8.4 ಕೋಟಿ ರೂಗೆ ಸೇಲ್​ ಆಗಿದ್ದ ವರುಣ್​ ಚಕ್ರವರ್ತಿ ಈ ಸಲ ಕೋಲ್ಕತ್ತಾ ತಂಡಕ್ಕೆ 4 ಕೋಟಿಗೆ ಸೇಲ್​ ಆಗಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.