ಆ್ಯಡಿಲೇಡ್: ಆಸ್ಟ್ರೇಲಿಯಾ ಹಾಗು ಪಾಕಿಸ್ತಾನ ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯುತ್ತಿದೆ. ಇದರ ಮಧ್ಯೆ ಆಸೀಸ್‌ನ ಪ್ರತಿಭಾನ್ವಿತ ಆಟಗಾರ ಹಾಗೂ ವಿಶ್ವದ ನಂಬರ್ 1 ಟೆಸ್ಟ್ ಬ್ಯಾಟ್ಸ್ಮನ್ ಸ್ಟೀವನ್ ಸ್ಮಿತ್ ತಂಡದ ಬಸ್ ಮಿಸ್ ಮಾಡಿಕೊಂಡಿದ್ದಾರೆ. ಆದ್ರೆ, ಈ ಪ್ರಮಾದಕ್ಕೆ ಅವರು ಸುಮ್ಮನಾಗಲಿಲ್ಲ. ತನಗೆ ನಾನೇ ಶಿಕ್ಷೆ ಕೊಟ್ಟುಕೊಂಡು ಮೈದಾನದವರೆಗೂ ಓಡಿ ಬಂದಿದ್ದಾರೆ.
ಪಾಕ್ ತಂಡದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಈಗಾಗಲೇ ಮೊದಲ ಪಂದ್ಯದಲ್ಲಿ 5ರನ್ಗಳ ಇನ್ನಿಂಗ್ಸ್ ಗೆಲುವು ದಾಖಲಿಸಿದೆ. ಈ ಪಂದ್ಯಾವಳಿಯ ನಡುವೆ ಆಸ್ಟ್ರೇಲಿಯಾ ತಂಡದ ಪ್ರತಿಭಾನ್ವಿತ ಆಟಗಾರ ಸ್ಟೀವನ್ ಸ್ಮಿತ್ ತಂಡದ ಬಸ್ ತಪ್ಪಿಸಿಕೊಂಡಿದ್ದಾರೆ. ಇಷ್ಟಕ್ಕೆ ಈ ಆಟಗಾರ ಸುಮ್ಮನಾಗಲಿಲ್ಲ. ತನ್ನ ಅಶಿಸ್ತಿಗೆ ತನಗೆ ತಾನೇ ಶಿಕ್ಷೆ ಕೊಟ್ಟುಕೊಂಡರು. ತಾನಿದ್ದ ಹೊಟೇಲಿನಿಂದ ಸುಮಾರು 3 ಕಿಲೋ ಮೀಟರ್ ದೂರದಲ್ಲಿರುವ ಮೈದಾನಕ್ಕೆ ಓಡಿಕೊಂಡೇ ಬಂದಿದ್ದಾರೆ!. ಭಾನುವಾರ ಈ ಘಟನೆ ನಡೆದಿದೆ.
ಅಡಿಲೇಡ್ ಮೈದಾನದಿಂದ ಮೂರು ಕಿಲೋ ಮೀಟರ್ ದೂರದ ಹೋಟೆಲ್ನಲ್ಲಿ ಆಸ್ಟ್ರೇಲಿಯಾ ತಂಡ ಉಳಿದುಕೊಂಡಿತ್ತು. ತಂಡದ ಎಲ್ಲಾ ಸದಸ್ಯರು ಸಮಯಕ್ಕೆ ಸರಿಯಾಗಿ ಬಸ್ ಏರಿ ಮೈದಾನ ತಲುಪಿದ್ದಾರೆ. ಆದರೆ ಸ್ಮಿತ್ ಅವರಿಗೆ ಬಸ್ ಮಿಸ್ ಆಗಿದೆ.
ಈ ಬಗ್ಗೆ ಸ್ಮಿತ್ ಮಾತನಾಡಿ, ನಾನು ಮೈದಾನದಲ್ಲಿ ರನ್ಗಳಿಸಲು ವಿಫಲಗೊಂಡಾಗಲೂ ಈ ರೀತಿಯಾಗಿ ನಡೆದುಕೊಳ್ಳುತ್ತೇನೆ ಎಂದು ಹೇಳಿದ್ರು.
ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಮಿತ್ ಬೃಹತ್ ರನ್ ಕಲೆಹಾಕಲು ವಿಫಲರಾಗಿದ್ದು ಕೇವಲ 4 ರನ್ ಸಾಧನೆ ಮಾಡಿದ್ದರು.