ಗಾಲೆ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 186 ರನ್ ಗಳಿಸಿದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ಡೇವಿಡ್ ಗೋವರ್ ಮತ್ತು ಕೆವಿನ್ ಪೀಟರ್ಸನ್ ದಾಖಲೆ ಮುರಿದು ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚು ರನ್ ಗಳಿಸಿದ 4ನೇ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
2ನೇ ಇನ್ನಿಂಗ್ಸ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 381 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ 9 ವಿಕೆಟ್ ಕಳೆದುಕೊಂಡು 339 ರನ್ ಗಳಿಸಿದೆ.
2ನೇ ದಿನ 67 ರನ್ ಗಳಿಸಿದ್ದ ಆಂಗ್ಲ ಪಡೆ ನಾಯಕ ಜೋ ರೂಟ್, ಇಂದು ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಕ್ರೀಸ್ನಲ್ಲಿ ಗಟ್ಟಿಯಾಗಿ ನೆಲೆಯೂರಿ ತಮ್ಮ 19ನೇ ಶತಕ ಪೂರ್ಣಗೊಳಿಸಿದರು. ಅಲ್ಲದೆ ಅವರು 179 ರನ್ ಗಳಿಸಿದ್ದ ವೇಳೆ ಡೇವಿಡ್ ಗೋವರ್(8,231) ಹಾಗೂ ಕೆವಿನ್ ಪೀಟರ್ಸನ್(8,181) ಅವರನ್ನು ಹಿಂದಿಕ್ಕಿ ಇಂಗ್ಲೆಂಡ್ ಪರ ಗರಿಷ್ಠ ಗಳಿಸಿದ 4ನೇ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾದರು. ಅವರು ದಿನದಾಟದ ಕೊನೆಯ ಓವರ್ನಲ್ಲಿ 186 ರನ್ ಗಳಿಸಿದ್ದಾಗ ರನ್ ಔಟ್ ಆದರು.
-
GONE – Joe Root is run out for 186!
— ICC (@ICC) January 24, 2021 " class="align-text-top noRightClick twitterSection" data="
Sri Lanka reduce England to 339/9 at stumps on day three. The visitors are trailing by 42 runs. #SLvENG | https://t.co/BtLz95cMXH pic.twitter.com/XR5Pj0qdw7
">GONE – Joe Root is run out for 186!
— ICC (@ICC) January 24, 2021
Sri Lanka reduce England to 339/9 at stumps on day three. The visitors are trailing by 42 runs. #SLvENG | https://t.co/BtLz95cMXH pic.twitter.com/XR5Pj0qdw7GONE – Joe Root is run out for 186!
— ICC (@ICC) January 24, 2021
Sri Lanka reduce England to 339/9 at stumps on day three. The visitors are trailing by 42 runs. #SLvENG | https://t.co/BtLz95cMXH pic.twitter.com/XR5Pj0qdw7
2012ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಜೋ ರೂಟ್ ವೃತ್ತಿ ಜೀವನದ 99ನೇ ಪಂದ್ಯವನ್ನಾಡುತ್ತಿದ್ದಾರೆ. ಅವರು 180 ಇನ್ನಿಂಗ್ಸ್ಗಳಲ್ಲಿ 19 ಶತಕ ಹಾಗೂ 49 ಅರ್ಧಶತ ಸಹಿತ 8,238 ರನ್ ಗಳಿಸಿದ್ದಾರೆ.
ಇನ್ನು 12,472 ರನ್ ಗಳಿಸಿರುವ ಅಲಿಸ್ಟೈರ್ ಕುಕ್ ಇಂಗ್ಲೆಂಡ್ ಪರ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಗ್ರಹಾಂ ಗೋಚ್ 8,900 ಮತ್ತು ಅಲೆಕ್ ಸ್ಟೆವಾರ್ಟ್ 8,463 ರನ್ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.
ಇದನ್ನು ಓದಿ: ಸ್ಪಿನ್ ಬೌಲಿಂಗ್ ಎದುರಿಸಲು ದ್ರಾವಿಡ್ ನೀಡಿದ್ದ ಸಲಹೆ ಶೇರ್ ಮಾಡಿದ ಪೀಟರ್ಸನ್