ETV Bharat / sports

ದ.ಆಪ್ರಿಕಾದ ಯುವ ಬೌಲರ್​ಗಳಿಗೆ ಶಮಿ ನೋಡಿ ಬೌಲಿಂಗ್ ಕಲಿಯಿರಿ ಎಂದ ಡುಪ್ಲೆಸಿಸ್​..

ಶಮಿ ಬೌಲಿಂಗ್​ ಮಾಡುವಾಗ ಅನುಸರಿಸುವ ಆ್ಯಂಗಲ್​ಗಳು, ಚೆಂಡನ್ನು ರಿವರ್​ಸ್ವಿಂಗ್​ ಮಾಡುವ ಕಲೆಯನ್ನು ಖಂಡಿತ ನಮ್ಮ ಬೌಲರ್​ಗಳು ಕಲಿಯಬೇಕಿದೆ ಎಂದಿರುವ ಪ್ಲೆಸಿಸ್​ ಕೊನೆಯ ದಿನ ಅದ್ಭುತ ಬೌಲಿಂಗ್ ಮಾಡಿದ ಭಾರತೀಯ ವೇಗಿಯನ್ನು ಗುಣಗಾನ ಮಾಡಿದ್ದಾರೆ.

Faf Du Plessis
author img

By

Published : Oct 9, 2019, 7:09 PM IST

ಪುಣೆ: ಭಾರತದ ವಿರುದ್ಧ ಮೊದಲ ಟೆಸ್ಟ್​​ನಲ್ಲಿ 203 ರನ್​ಗಳಿಂದ ನಾಟಕೀಯ ಸೋಲುಂಡು ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕ ಪ್ಲೆಸಿಸ್​, ಶಮಿ ಬೌಲಿಂಗ್​ ಶೈಲಿಯನ್ನು ನೋಡಿ ಬೌಲಿಂಗ್​ ಕಲಿಯಿರಿ ಎಂದು ತಮ್ಮ ಬೌಲರ್‌ಗಳಿಗೆ ಸಲಹೆ ಮೂಲಕ ತಿವಿದಿದ್ದಾರೆ.

ಮೊದಲ ನಾಲ್ಕು ದಿನ ಸ್ಪಿನ್​ ಬೌಲಿಂಗ್​ಗೆ ಸಾಥ್​ ನೀಡುತ್ತಿದ್ದ ವಿಶಾಖಪಟ್ಟಣ ಪಿಚ್​​ನಲ್ಲಿ ಶಮಿ ಕೊನೆಯ ದಿನ ತಮ್ಮ ಇನ್​ಸ್ವಿಂಗ್​ ಬೌಲಿಂಗ್​ ಮೂಲಕ ಹರಿಣಗಳ ಪ್ರಮುಖ ಬ್ಯಾಟ್ಸ್​ಮನ್​ಗಳಾದ ಬುವಾಮ, ಪ್ಲೆಸಿಸ್​ ಹಾಗೂ ಡಿಕಾಕ್​ರನ್ನು ಬೌಲ್ಡ್​ ಮಾಡಿ ಪಂದ್ಯದ ಗತಿಯನ್ನೇ ಬದಲಾಯಿಸಿದ್ದರು.

2ನೇ ಟೆಸ್ಟ್​ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಹರಿಣಗಳ ನಾಯಕ ಪ್ಲೆಸಿಸ್​, "ನಮ್ಮ ತಂಡದ ಯುವ ಬೌಲರ್​ಗಳಿಗೆ ಶಮಿಯಂತಹ ಬೌಲರ್​ರಿಂದ ಕಲಿಯುವ ಅವಕಾಶ ಸಿಕ್ಕಿದೆ. ಅವರು ತವರಿನಲ್ಲಿ ಬೌಲಿಂಗ್​ ಮಾಡುವಾಗ ಅನುಸರಿಸುವ ಕೌಶಲಗಳುನ್ನು ಸೂಕ್ಷ್ಮತೆಯಿಂದ ಗಮನಿಸಿ ತಾವೂ ಅಳವಡಿಸಿಕೊಳ್ಳಬೇಕು ಎಂದು ತಿಳುವಳಿಕೆ ಹೇಳಿದ್ದಾರೆ. ಶಮಿ ಬೌಲಿಂಗ್​ ಮಾಡುವಾಗ ಅನುಸರಿಸುವ ಆ್ಯಂಗಲ್​ಗಳು, ಚೆಂಡನ್ನು ರಿವರ್​ಸ್ವಿಂಗ್​ ಮಾಡುವ ಕಲೆಯನ್ನು ಖಂಡಿತ ನಮ್ಮ ಬೌಲರ್​ಗಳು ಕಲಿಯಬೇಕಿದೆ ಎಂದಿರುವ ಪ್ಲೆಸಿಸ್​ ಕೊನೆಯ ದಿನ ಅದ್ಭುತ ಬೌಲಿಂಗ್ ಮಾಡಿ ಭಾರತೀಯ ವೇಗಿಯನ್ನು ಗುಣಗಾನ ಮಾಡಿದ್ದಾರೆ.

ಮೊದಲ ಪಂದ್ಯದಲ್ಲಿ ಭಾರತ ತಂಡ 203 ರನ್​ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತ್ತು. ಈ ಪಂದ್ಯದಲ್ಲಿ ಅಶ್ವಿನ್​ 8 ವಿಕೆಟ್​, ಜಡೇಜಾ 6 ವಿಕೆಟ್​ ಹಾಗೂ ಶಮಿ 5 ವಿಕೆಟ್​ ಪಡೆದು ಮಿಂಚಿದ್ದರು. ಬ್ಯಾಟಿಂಗ್​ನಲ್ಲಿ ರೋಹಿತ್​ ಎರಡೂ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿ ಮಿಂಚಿದರೆ ಕನ್ನಡಿಗ ಮನೀಷ್​ ಪಾಂಡೆ ದ್ವಿಶತಕ ಸಿಡಿಸಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.