ಅಬುಧಾಬಿ: ಮೊಹಮ್ಮದ್ ಸಿರಾಜ್ ಹಾಗೂ ಯುಜವೇಂದ್ರ ಚಹಾಲ್ ಪ್ರಚಂಡ ಬೌಲಿಂಗ್ ದಾಳಿಯ ನೆರವಿನಿಂದ ಆರ್ಸಿಬಿ ಎದುರಾಳಿ ಕೋಲ್ಕತ್ತಾ ತಂಡವನ್ನು ಕೇವಲ 84 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ ತಂಡ 4 ಓವರ್ ಮುಗಿಯುವ ಮುನ್ನವೇ 4 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ತ್ರಿಪಾಠಿ(1), ನಿತೀಶ್ ರಾಣಾ(0) ಟಾಮ್ ಬಾಂಟನ್(10) ರನ್ನು ಮೊಹಮ್ಮದ್ ಸಿರಾಜ್ ಔಟ್ ಮಾಡಿದರೆ, ಗಿಲ್(1) ರನ್ನು ಸೈನಿ ಔಟ್ ಮಾಡಿದರು.
ನಂತರ ಬಂದ ಕಾರ್ತಿಕ್ 14 ಎಸೆತಗಳೆನ್ನುದುರಿಸಿ ಚಹಾಲ್ ಓವರ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ಪ್ಯಾಟ್ ಕಮ್ಮಿನ್ಸ್ ಕೂಡ 17 ಎಸೆತಳಲ್ಲಿ ಕೇವಲ 4 ರನ್ಗಳಿಸಿ ಚಹಾಲ್ಗೆ ವಿಕೆಟ್ 2ನೇ ಬಲಿಯಾದರು. ವಿಕೆಟ್ ಬೀಳುತ್ತಿದ್ದರು ಕ್ರೀಸ್ ಕಚ್ಚಿನಿಂತ ನಾಯಕ ಮಾರ್ಗನ್ 34 ಎಸೆತಗಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 30 ರನ್ಗಳಿಸಿ ವಾಷಿಂಗ್ಟನ್ ಸುಂದರ್ ಓವರ್ನಲ್ಲಿ ಗುರುಕಿರಾತ್ ಮನ್ ಹಿಡಿದ ಕ್ಯಾಚ್ಗೆ ಬಲಿಯಾದರು.
-
Innings Break!
— IndianPremierLeague (@IPL) October 21, 2020 " class="align-text-top noRightClick twitterSection" data="
Brilliant bowling effort by #RCB restricts #KKR to a total of 84/8 (Siraj 3/8, Chahal 2/15).#RCB need 85 runs to win.
Scorecard - https://t.co/XUEBCQIfuL #Dream11IPL pic.twitter.com/iJgxbMWryc
">Innings Break!
— IndianPremierLeague (@IPL) October 21, 2020
Brilliant bowling effort by #RCB restricts #KKR to a total of 84/8 (Siraj 3/8, Chahal 2/15).#RCB need 85 runs to win.
Scorecard - https://t.co/XUEBCQIfuL #Dream11IPL pic.twitter.com/iJgxbMWrycInnings Break!
— IndianPremierLeague (@IPL) October 21, 2020
Brilliant bowling effort by #RCB restricts #KKR to a total of 84/8 (Siraj 3/8, Chahal 2/15).#RCB need 85 runs to win.
Scorecard - https://t.co/XUEBCQIfuL #Dream11IPL pic.twitter.com/iJgxbMWryc
ಲೂಕಿ ಫರ್ಗ್ಯುಸನ್ (19) ಹಾಗೂ ಕುಲ್ದೀಪ್ ಯಾದವ್ (12) 8ನೇ ವಿಕೆಟ್ಗೆ 27 ರನ್ ಸೇರಿಸಿದರು. ಒಟ್ಟಾರೆ ಕೆಕೆಆರ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 84 ರನ್ಳಿಸಿತು.
ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಸಿರಾಜ್ 4 ಓವರ್ಗಳಲ್ಲಿ 2 ಮೇಡನ್ ಸಹಿತ ಕೇವಲ 8 ರನ್ ನೀಡಿ 3 ವಿಕೆಟ್ ಪಡೆದರೆ, ಚಹಾಲ್ 15 ರನ್ ನೀಡಿ 2 ವಿಕೆಟ್, ಸೈನಿ 23 ರನ್ ನೀಡಿ 1 ಹಾಗೂ ಸುಂದರ್ 14 ರನ್ ನೀಡಿ 1 ವಿಕೆಟ್ ಪಡೆದು ಕೆಕೆಆರ್ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿದರು