ETV Bharat / sports

ಏಪ್ರಿಲ್​ 8ರಂದು ಕ್ರಿಕೆಟಿಗ ಶ್ರೇಯಸ್‌ ಅಯ್ಯರ್‌ಗೆ ಶಸ್ತ್ರಚಿಕಿತ್ಸೆ - ಭುಜದ ನೋವಿಗೊಳಗಾಗಿರುವ ಅಯ್ಯರ್​

ಕ್ಷೇತ್ರ ರಕ್ಷಣೆ​ ವೇಳೆ ಭುಜದ ನೋವಿಗೊಳಗಾಗಿದ್ದ ಶ್ರೇಯಸ್ ಅಯ್ಯರ್​ ಏಪ್ರಿಲ್​ 8ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ತಿಳಿದು ಬಂದಿದೆ.

Shreyas Iyer
Shreyas Iyer
author img

By

Published : Apr 2, 2021, 3:21 PM IST

ಹೈದರಾಬಾದ್​: ಇಂಗ್ಲೆಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಭುಜದ ನೋವಿಗೊಳಗಾದ ಟೀಂ ಇಂಡಿಯಾ ಯುವ ಆಟಗಾರ​​​ ಶ್ರೇಯಸ್​ ಅಯ್ಯರ್​ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

ಏಪ್ರಿಲ್​ 8ರಂದು ಭುಜದ ಶಸ್ತ್ರಚಿಕಿತ್ಸೆ ಬಳಿಕ, ಮುಂದಿನ ನಾಲ್ಕು ತಿಂಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್​​ನಿಂದ ಹೊರಗುಳಿದಿದ್ದು, ಅವರ ಜಾಗಕ್ಕೆ ರಿಷಭ್​ ಪಂತ್​ ಡೆಲ್ಲಿ ತಂಡದ ಕ್ಯಾಪ್ಟನ್​ ಆಗಿ ಆಯ್ಕೆಯಾಗಿದ್ದಾರೆ.

ಇಂಗ್ಲೆಂಡ್​ ವಿರುದ್ಧದ ಏಕದಿನ ಪಂದ್ಯದ ವೇಳೆ ಜಾನಿ ಬೈರ್‌ಸ್ಟೋವ್‌ ಬಾರಿಸಿದ ಚೆಂಡನ್ನು ಬೌಂಡರಿಗೆ ಹೋಗದಂತೆ ತಡೆಯುವ ಪ್ರಯತ್ನದಲ್ಲಿ ಅಯ್ಯರ್‌ ಎಡ ಭುಜಕ್ಕೆ ಗಾಯವಾಗಿತ್ತು.

ಇದನ್ನೂ ಓದಿ: ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಆಘಾತ: ಆರೋಗ್ಯ ಸಮಸ್ಯೆಯಿಂದ ಶ್ರೇಯಸ್​ ಅಯ್ಯರ್​ ಔಟ್​

26 ವರ್ಷದ ಶ್ರೇಯಸ್ ಅಯ್ಯರ್​ ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್​ ತಂಡದ ಕ್ಯಾಪ್ಟನ್​ ಆಗಿ ತಂಡ ಮುನ್ನಡೆಸಿದ್ದರು. ಜತೆಗೆ ತಂಡವನ್ನು ಫೈನಲ್​ ಹಂತಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.