ETV Bharat / sports

ಟಿ-20 ಕ್ರಿಕೆಟ್​ನಲ್ಲಿ 10,000 ರನ್​ ಪೂರೈಸಿದ ಮಲಿಕ್​: ಈ ಸಾಧನೆ ಮಾಡಿದ ವಿಶ್ವದ 3ನೇ ಬ್ಯಾಟ್ಸ್​ಮನ್​ - 10 ಸಾವಿರ ರನ್​ಗಳಿಸಿದ ಏಷ್ಯಾದ ಮೊದಲ ಬ್ಯಾಟ್ಸ್​ಮನ್

ಪಾಕಿಸ್ತಾನ ನ್ಯಾಷನಲ್​ ಟಿ-20 ಲೀಗ್​ನಲ್ಲಿ ಖೈಬರ್ ಪಖ್ತುನ್ಖ್ವಾ ತಂಡದ ಪರವಾಗಿ ಆಡಿದ ಮಲಿಕ್​ ಬಲೂಚಿಸ್ತಾನ್ ವಿರುದ್ಧ 44 ಎಸೆತಗಳಲ್ಲಿ 74 ರನ್​ ಸಿಡಿಸುವ ಮೂಲಕ ಈ ಮೈಲಿಗಲ್ಲು ತಲುಪಿದರು.

ಶೋಯಬ್ ಮಲಿಕ್
ಶೋಯಬ್ ಮಲಿಕ್
author img

By

Published : Oct 12, 2020, 9:12 PM IST

ನವದೆಹಲಿ: ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶೋಯಬ್ ಮಲಿಕ್ ಟಿ - 20 ಕ್ರಿಕೆಟ್​ನಲ್ಲಿ 10 ಸಾವಿರ ರನ್​ ಪೂರೈಸಿದ್ದಾರೆ. ಈ ಮೂಲಕ ವೆಸ್ಟ್​ ಇಂಡೀಸ್​ ತಂಡದ ಕ್ರಿಸ್​ ಗೇಲ್ ಹಾಗೂ ಪೊಲಾರ್ಡ್​ ನಂತರ ಈ ಸಾಧನೆ ಮಾಡಿದ ಬ್ಯಾಟ್ಸ್​ಮನ್​ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಪಾಕಿಸ್ತಾನ ನ್ಯಾಷನಲ್​ ಟಿ-20 ಲೀಗ್​ನಲ್ಲಿ ಖೈಬರ್ ಪಖ್ತುನ್ಖ್ವಾ ತಂಡದ ಪರವಾಗಿ ಆಡಿದ ಮಲಿಕ್​ ಬಲೂಚಿಸ್ತಾನ್ ವಿರುದ್ಧ 44 ಎಸೆತಗಳಲ್ಲಿ 74 ರನ್​ ಸಿಡಿಸುವ ಮೂಲಕ ಈ ಮೈಲಿಗಲ್ಲು ತಲುಪಿದರು.

  • Highest run-scorers in all T20 cricket:

    Chris Gayle 👉 13,296
    Kieron Pollard 👉 10,370
    Shoaib Malik 👉 10,027
    Brendon McCullum 👉 9922
    David Warner 👉 9503

    💥 Malik is the newest entrant in the 10,000-run club! pic.twitter.com/EoNEYG8OhL

    — ICC (@ICC) October 11, 2020 " class="align-text-top noRightClick twitterSection" data=" ">

10 ಸಾವಿರ ರನ್​ ಸಿಡಿಸಿದ ಏಷ್ಯಾದ ಮೊದಲ ಬ್ಯಾಟ್ಸ್​ಮನ್​ ಎನಿಸಿಕೊಂಡಿರುವ ಮಲಿಕ್ ಟಿ-20 ಕ್ರಿಕೆಟ್​ನಲ್ಲಿ 395 ಪಂದ್ಯವನ್ನಾಡಿದ್ದು,​​ 37.41ರ ಸರಾಸರಿ ಹಾಗೂ 125.71 ರ ಸ್ಟ್ರೈಕ್​ರೇಟ್​ನಲ್ಲಿ 10,027 ರನ್​ಗಳಿಸಿದ್ದಾರೆ. ಇವರು ಒಂದು ಶತಕ ಹಾಗೂ 62 ಅರ್ಧಶತಕ ದಾಖಲಿಸಿದ್ದಾರೆ.

ವೆಸ್ಟ್​ ಇಂಡೀಸ್​ನ ಸ್ಫೋಟಕ ಬ್ಯಾಟ್ಸ್​ಮನ್​ ಕ್ರಿಸ್​ ಗೇಲ್​ ಟಿ-20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ಗಳಿಸಿರುವ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ. ಅವರು 404 ಪಂದ್ಯಗಳಿಂದ 22 ಶತಕ ಹಾಗೂ 105 ಅರ್ಧ ಶತಕಗಳ ಸಹಿತ 13,296 ರನ್​ಗಳಿಸಿದ್ದಾರೆ. ಪೊಲಾರ್ಡ್​ ನಂತರದ ಸ್ಥಾನದಲ್ಲಿದ್ದು, 518 ಪಂದ್ಯಗಳಿಂದ 10,370 ರನ್​ಗಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.