ETV Bharat / sports

ನ್ಯೂಜಿಲ್ಯಾಂಡ್​ ಪ್ರವಾಸಕ್ಕೆ ಪಾಕಿಸ್ತಾನ ಪ್ರಕಟಿಸಿದ 35 ಆಟಗಾರರ ತಂಡದಿಂದ ಅಮೀರ್, ಮಲಿಕ್ ಔಟ್​ - ಪಾಕಿಸ್ತಾನ ನ್ಯೂಜಿಲ್ಯಾಂಡ್​

ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ ಟೆಸ್ಟ್​ ಮತ್ತು ಟಿ20 ಕ್ರಿಕೆಟ್ ಸರಣಿಗಳಿಗೆ ಸೇರಿದಂತೆ ಒಟ್ಟು 35 ಆಟಗಾರರನ್ನು ಬಿಡುಗಡೆ ಮಾಡಿದೆ. ಆದರೆ ಯಾವ ಸರಣಿಗೆ ಯಾವ ಆಟಗಾರರು ಎನ್ನುವುದನ್ನ ಖಚಿತಪಡಿಸಿಲ್ಲ.

ಮೊಹಮ್ಮದ್ ಅಮೀರ್​
ಮೊಹಮ್ಮದ್ ಅಮೀರ್​
author img

By

Published : Nov 11, 2020, 9:34 PM IST

ಕರಾಚಿ: ನ್ಯೂಜಿಲ್ಯಾಂಡ್​ ಪ್ರವಾಸಕ್ಕಾಗಿ ಪಿಸಿಬಿ ಆಯ್ಕೆ ಸಮಿತಿ ಬುಧವಾರ ಪ್ರಕಟಿಸಿರುವ 35 ಆಟಗಾರರ ಪಟ್ಟಿಯಲ್ಲಿ ಹಿರಿಯ ಬ್ಯಾಟ್ಸ್​ಮನ್​ ಶೋಯಭ್ ಮಲಿಕ್ ಮತ್ತು ವೇಗಿ ಮೊಹಮ್ಮದ್ ಅಮೀರ್​ರನ್ನು ಕೈಬಿಡಲಾಗಿದೆ.

ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ ಟೆಸ್ಟ್​ ಮತ್ತು ಟಿ20 ಕ್ರಿಕೆಟ್ ಸರಣಿಗಳಿಗೆ ಸೇರಿದಂತೆ ಒಟ್ಟು 35 ಆಟಗಾರರನ್ನು ಬಿಡುಗಡೆ ಮಾಡಿದೆ. ಆದರೆ ಯಾವ ಸರಣಿಗೆ ಯಾವ ಆಟಗಾರರು ಎನ್ನುವುದನ್ನ ಖಚಿತಪಡಿಸಿಲ್ಲ.

ಇನ್ನು ಈ ಸರಣಿಯಲ್ಲಿ ಟೆಸ್ಟ್​ ಮತ್ತು ಟಿ20 ಸರಣಿಗಳೆರಡರಲ್ಲೂ ಬಾಬರ್​ ಅಜಮ್ ನಾಯಕರಾಗಲಿದ್ದಾರೆ. ಟೆಸ್ಟ್​ ತಂಡದ ಉಪನಾಯಕನಾಗಿ ಮೊಹಮ್ಮದ್ ರಿಜ್ವಾನ್ ನೇಮಕಗೊಂಡಿದ್ದಾರೆ.

ಯುವ ಆಟಗಾರರಿಗೆ ಮಾನ್ಯತೆ ನೀಡುವ ದೃಷ್ಟಿಯಿಂದ 38 ವರ್ಷದ ಶೋಯಬ್ ಮಲಿಕ್ ಮತ್ತು ಮೊಹಮ್ಮದ್​ ಅಮೀರ್​ರನ್ನು ಆಯ್ಕೆಗಾರರು ಪರಿಗಣಿಸಿಲ್ಲ ಎಂದು ತಿಳಿದುಬಂದಿದೆ. ಕೇವಲ ಟಿ20 ಕ್ರಿಕೆಟ್​ನಲ್ಲಿ ಮಾತ್ರ ಆಡುತ್ತಿರುವ ಮಲಿಕ್​ರನ್ನು ತಂಡದಿಂದ ಕೈಬಿಟ್ಟಿರುವುದರಿಂದ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ತಂಡಕ್ಕೂ ಪರಿಗಣಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಇನ್ನು ಫಾರ್ಮ್​ನಲ್ಲಿಲ್ಲದ ಅಸಾದ್ ಶಫೀಕ್​ರನ್ನು ತಂಡದಿಂದ ಕೈಬಿಡಲಾಗಿದೆ. ಆದರೆ ರಾಷ್ಟ್ರೀಯ ತಂಡದ ಕ್ಯಾಪ್ ಧರಿಸಿದ ಅಮದ್ ಬಟ್, ಡ್ಯಾನೀಶ್ ಅಜೀಜ್​, ಇಮ್ರಾನ ್ಬಟ್​ ಹಾಗೂ ರೊಹೈಲ್ ನಜೀರ್​ರನ್ನು ಪಿಸಿಬಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ.

35 ಸದಸ್ಯರ ಪಾಕಿಸ್ತಾನ ತಂ

ಆರಂಭಿಕರು: ಅಬಿದ್ ಅಲಿ, ಅಬ್ದುಲ್ಲಾ ಶಫಿಕ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಶಾನ್ ಮಸೂದ್, ಝೀಶಾನ್ ಮಲಿಕ್

ಮಧ್ಯಮ ಕ್ರಮಾಂಕ: ಬಾಬರ್ ಅಜಮ್ (ನಾಯಕ), ಅಜರ್ ಅಲಿ, ಫವಾದ್ ಆಲಮ್, ಹೈದರ್ ಅಲಿ, ಹರಿಸ್ ಸೊಹೈಲ್, ಹುಸೇನ್ ತಲಾತ್, ಇಮ್ರಾನ್ ಬಟ್, ಇಫ್ತಿಖರ್ ಅಹ್ಮದ್ , ಖುಷ್ದಿಲ್ ಷಾ, ಮೊಹಮ್ಮದ್ ಹಫೀಜ್, ಡ್ಯಾನಿಶ್ ಅಜೀಜ್,

ವಿಕೆಟ್ ಕೀಪರ್ಸ್​: ಮೊಹಮ್ಮದ್ ರಿಜ್ವಾನ್, ರೋಹೈಲ್ ನಜೀರ್, ಸರ್ಫರಾಜ್ ಅಹ್ಮದ್,

ಸ್ಪಿನ್ನರ್ಸ್​: ಇಮದ್ ವಾಸಿಮ್, ಶದಾಬ್ ಖಾನ್, ಉಸ್ಮಾನ್ ಖಾದಿರ್, ಯಾಸಿರ್ ಷಾ, ಜಾಫರ್ ಗೋಹರ್

ವೇಗದ ಬೌಲರ್ಸ್​: ಅಮದ್ ಬಟ್, ಫಹೀಮ್ ಅಶ್ರಫ್, ಹ್ಯಾರೀಸ್ ರವೂಫ್, ಮೊಹಮ್ಮದ್ ಅಬ್ಬಾಸ್, ಮೊಹಮ್ಮದ್ ಹಸ್ನೈನ್, ಮೂಸಾ ಖಾನ್, ನಸೀಮ್ ಶಾ, ಶಾಹೀನ್ ಅಫ್ರಿದಿ, ಸೊಹೈಲ್ ಖಾನ್, ವಹಾಬ್ ರಿಯಾಜ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.