ETV Bharat / sports

2003ರ ವಿಶ್ವಕಪ್​​ನಲ್ಲಿ ಭಾರತದ ವಿರುದ್ಧ ಪಾಕ್​​​ ಸೋಲು ಕಂಡಿದ್ಯಾಕೆ: ರಹಸ್ಯ ಹೊರಹಾಕಿದ ಶೊಯೆಬ್​ ಅಖ್ತರ್​​! - ಪಾಕಿಸ್ತಾನ ತಂಡ ಸೋಲು

2003ರ ವಿಶ್ವಕಪ್​​ನಲ್ಲಿ ಭಾರತದ ವಿರುದ್ಧ ಪಾಕ್​ ಸೋಲು ಕಂಡಿದ್ಯಾಕೆ ಎಂಬ ರಹಸ್ಯವನ್ನ ಇದೀಗ ಶೊಯೆಬ್​ ಅಖ್ತರ್​ ಹೊರಹಾಕಿದ್ದಾರೆ. ತಮ್ಮದೇ ಯೂಟ್ಯೂಬ್​ ಚಾನಲ್​​ನಲ್ಲಿ ಈ ಬಗ್ಗೆ ಮಾಹಿತಿ ಹರಿಬಿಟ್ಟಿದ್ದಾರೆ.

ಶೊಯೆಬ್​ ಅಖ್ತರ್/Shoaib Akhtar
author img

By

Published : Aug 6, 2019, 9:48 PM IST

ಕರಾಚಿ: ಬರೋಬ್ಬರಿ 16 ವರ್ಷಗಳ ಬಳಿಕ ಪಾಕ್​ ಕ್ರಿಕೆಟ್​ ತಂಡದ ವೇಗದ ಬೌಲರ್​ ಶೊಯೆಬ್​ ಅಖ್ತರ್​​ 2003ರ ವಿಶ್ವಕಪ್​ ಕುರಿತಾದ ರಹಸ್ಯವೊಂದನ್ನ ಹೊರಹಾಕಿದ್ದಾರೆ. ಗ್ರೂಪ್​ ಹಂತದಲ್ಲಿ ಟೀಂ ಇಂಡಿಯಾ ವಿರುದ್ಧ ತಾವು ಸೋಲು ಕಾಣಲು ಏನು ಕಾರಣ ಎಂಬ ಮಾಹಿತಿಯನ್ನ ಇದೀಗ ರಿವೀಲ್​ ಮಾಡಿದ್ದಾರೆ.

2003ರ ಮಾರ್ಚ್​​ 1ರಂದು ದಕ್ಷಿಣ ಆಫ್ರಿಕಾದ ಸೆಂಚೂರಿಯನ್​ನಲ್ಲಿ ನಡೆದಿದ್ದ ಗ್ರೂಪ್​ ಹಂತದ ಪಂದ್ಯದಲ್ಲಿ ಪಾಕ್​ ಭಾರತದ ವಿರುದ್ಧ 6ವಿಕೆಟ್​ಗಳ ಸೋಲು ಕಂಡಿತ್ತು. ಮೊದಲು ಬ್ಯಾಟ್​ ಮಾಡಿದ ಪಾಕ್​​ ಟೀಂ ಇಂಡಿಯಾ ಗೆಲುವಿಗೆ 274ರನ್​ ಟಾರ್ಗೆಟ್​ ನೀಡಿತ್ತು. ಆ ವೇಳೆ ಬಲಿಷ್ಠ ಬೌಲಿಂಗ್​ ಪಡೆ ಹೊಂದಿದ್ದ ಪಾಕ್​ ಟೀಂ ಇಂಡಿಯಾ ತಂಡವನ್ನ ಕಟ್ಟುಹಾಕುವಲ್ಲಿ ವಿಫಲಗೊಂಡಿತ್ತು. ಈ ಪಂದ್ಯದಲ್ಲಿ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​​ 98ರನ್​ಗಳಿಸಿ, ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡಿದರು.

ವಖಾರ್​ ಯೂನಿಸ್/Waqar Younis
ವಖಾರ್​ ಯೂನಿಸ್/Waqar Younis

ಈ ಬಗ್ಗೆ ಇದೀಗ ತಮ್ಮದೇ ಯೂಟ್ಯೂಬ್​​ನಲ್ಲಿ ಮಾಹಿತಿ ಹಂಚಿಕೊಂಡಿರುವ ಶೊಯೆಬ್​, ಪಂದ್ಯ ಆರಂಭಗೊಳ್ಳುವುದಕ್ಕೂ ಹಿಂದಿನ ರಾತ್ರಿ ಎಡ ಮೊಣಕಾಲಿಗೆ 4-5 ಚುಚ್ಚುಮದ್ದು ತೆಗೆದುಕೊಳ್ಳಬೇಕಾಗಿತ್ತು. ಆ ವೇಳೆ, ನಾನು ಫಿಟ್ನೆಸ್​ ತೊಂದರೆಯಿಂದ ಬಳಲುತ್ತಿದೆ. ಮೊಣಕಾಲಿನಲ್ಲಿ ನೀರು ಸಹ ತುಂಬಿಕೊಂಡಿತ್ತು. ಬೌಲಿಂಗ್​ ಆರಂಭ ಮಾಡುವುದಕ್ಕೂ ಮುಂಚಿತವಾಗಿ ನಾನು ಇದರ ಬಗ್ಗೆ ತಂಡದ ಆಟಗಾರರಿಗೆ ಹೇಳಿದ್ದೆ. ಆದರೆ, ಟೀಂ ಇಂಡಿಯಾವನ್ನ ನಾವು 270 ರನ್​ವೊಳಗೆ ಕಟ್ಟಿಹಾಕಬಹುದು ಎಂಬ ಮಾತುಗಳನ್ನ ಸಹ ಆಟಗಾರರು ಹೇಳಿದ್ದರು. ಆದರೆ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಸಚಿನ್​,ಸೆಹ್ವಾಗ್​ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದರು ಎಂದು ಹೇಳಿದರು.

ಇದೇ ವೇಳೆ, ವಕಾರ್​ ಯೂನಿಸ್​ ಕೂಡ ಕಳಪೆ ನಾಯಕತ್ವ ನಿರ್ವಹಣೆ ಮಾಡಿದ್ದರು. ಅದು ಕೂಡ ನಮ್ಮ ತಂಡದ ಸೋಲಿಗೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ. ಈ ಪಂದ್ಯದಲ್ಲಿ ಬೌಲಿಂಗ್​ ಮಾಡಿದ್ದ ಅಖ್ತರ್​​ 98ರನ್​ಗಳಿಕೆ ಮಾಡಿದ್ದ ಸಚಿನ್​ ವಿಕೆಟ್​ ಪಡೆದುಕೊಂಡು 72ರನ್​​ ನೀಡಿದ್ದರು.

Intro:Body:

2003 ವಿಶ್ವಕಪ್​​ನಲ್ಲಿ ಭಾರತದ ವಿರುದ್ಧ ಪಾಕ್​​​ ಸೋಲು ಕಂಡಿದ್ಯಾಕೆ: ರಹಸ್ಯ ಹೊರಹಾಕಿದ ಶೊಯೆಬ್​ ಅಖ್ತರ್​​!

ಕರಾಚಿ: ಬರೋಬ್ಬರಿ 16 ವರ್ಷಗಳ ಬಳಿಕ ಪಾಕ್​ ಕ್ರಿಕೆಟ್​ ತಂಡದ ವೇಗದ ಬೌಲರ್​ ಶೊಯೆಬ್​ ಅಖ್ತರ್​​ 2003ರ ವಿಶ್ವಕಪ್​ ಕುರಿತಾದ ರಹಸ್ಯವೊಂದನ್ನ ಹೊರಹಾಕಿದ್ದಾರೆ. ಗ್ರೂಪ್​ ಹಂತದಲ್ಲಿ ಟೀಂ ಇಂಡಿಯಾ ವಿರುದ್ಧ ತಾವು ಸೋಲು ಕಾಣಲು ಏನು ಕಾರಣ ಎಂಬ ಮಾಹಿತಿಯನ್ನ ಇದೀಗ ರಿವೀಲ್​ ಮಾಡಿದ್ದಾರೆ. 

2003ರ ಮಾರ್ಚ್​​ 1ರಂದು ದಕ್ಷಿಣ ಆಫ್ರಿಕಾದ ಸೆಂಚೂರಿಯನ್​ನಲ್ಲಿ ನಡೆದಿದ್ದ ಗ್ರೂಪ್​ ಹಂತದ ಪಂದ್ಯದಲ್ಲಿ ಪಾಕ್​ ಭಾರತದ ವಿರುದ್ಧ 6ವಿಕೆಟ್​ಗಳ ಸೋಲು ಕಂಡಿತ್ತು. ಮೊದಲು ಬ್ಯಾಟ್​ ಮಾಡಿದ ಪಾಕ್​​ ಟೀಂ ಇಂಡಿಯಾ ಗೆಲುವಿಗೆ 274ರನ್​ ಟಾರ್ಗೆಟ್​ ನೀಡತ್ತು. ಆ ವೇಳೆ ಬಲಿಷ್ಠ ಬೌಲಿಂಗ್​ ಪಡೆ ಹೊಂದಿದ್ದ ಪಾಕ್​ ಟೀಂ ಇಂಡಿಯಾ ತಂಡವನ್ನ ಕಟ್ಟುಹಾಕುವಲ್ಲಿ ವಿಫಲಗೊಂಡಿತ್ತು. ಈ ಪಂದ್ಯದಲ್ಲಿ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​​ 98ರನ್​ಗಳಿಸಿ, ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡಿದರು. 

ಈ ಬಗ್ಗೆ ಇದೀಗ ತಮ್ಮದೇ ಯೂಟ್ಯೂಬ್​​ನಲ್ಲಿ ಮಾಹಿತಿ ಹಂಚಿಕೊಂಡಿರುವ ಶೊಯೆಬ್​, ಪಂದ್ಯ ಆರಂಭಗೊಳ್ಳುವುದಕ್ಕೂ ಹಿಂದಿನ ರಾತ್ರಿ ಎಡ ಮೊಣಕಾಲಿಗೆ 4-5 ಚುಚ್ಚುಮದ್ದು ತೆಗೆದುಕೊಳ್ಳಬೇಕಾಗಿತ್ತು. ಆ ವೇಳೆ ನಾನು ಫಿಟ್ನೆಸ್​ ತೊಂದರೆಯಿಂದ ಬಳಲುತ್ತಿದೆ. ಮೊಣಕಾಲಿನಲ್ಲಿ ನೀರು ಸಹ ತುಂಬಿಕೊಂಡಿತ್ತು. ಬೌಲಿಂಗ್​ ಆರಂಭ ಮಾಡುವುದಕ್ಕೂ ಮುಂಚಿತವಾಗಿ ನಾನು ಇದರ ಬಗ್ಗೆ ತಂಡದ ಆಟಗಾರರಿಗೆ ಹೇಳಿದ್ದೆ. ಆದರೆ ಟೀಂ ಇಂಡಿಯಾ ತಂಡವನ್ನ ನಾವು 270ರನ್​ವೊಳಗೆ ಕಟ್ಟಿಹಾಕಬಹುದು ಎಂಬ ಮಾತುಗಳನ್ನ ಸಹ ಆಟಗಾರರು ಹೇಳಿದ್ದರು. ಆದರೆ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಸಚಿನ್​,ಸೆಹ್ವಾಗ್​ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದರು ಎಂದು ಹೇಳಿದರು. 

ಇದೇ ವೇಳೆ ವಖಾರ್​ ಯೂನಿಸ್​ ಕೂಡ ಕಳಪೆ ನಾಯಕತ್ವ ನಿರ್ವಹಣೆ ಮಾಡಿದ್ದರು. ಅದು ಕೂಡ ನಮ್ಮ ತಂಡದ ಸೋಲಿಗೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ. ಈ ಪಂದ್ಯದಲ್ಲಿ ಬೌಲಿಂಗ್​ ಮಾಡಿದ್ದ ಅಖ್ತರ್​​ 98ರನ್​ಗಳಿಕೆ ಮಾಡಿದ್ದ ಸಚಿನ್​ ವಿಕೆಟ್​ ಪಡೆದುಕೊಂಡು 72ರನ್​​ ನೀಡಿದ್ದರು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.