ETV Bharat / sports

ಭಾರತ ತಂಡದ ಬೌಲಿಂಗ್​ ಕೋಚ್​ ಆಗಲು ನಾನು ಸಿದ್ದ.. ಶೋಯೆಬ್​ ಅಖ್ತರ್​ - ಸಚಿನ್​ ತೆಂಡೂಲ್ಕರ್​

1998ರಲ್ಲಿ ನಾನು ವೇಗದ ಬೌಲಿಂಗ್​ ಮಾಡಿದ್ದ ವೇಳೆ, ಭಾರತೀಯರು ನನ್ನ ಜೊತೆ ಸಂಭ್ರಮಾಚರಿಸಿದ್ದರು. ನನಗೆ ಭಾರತದಲ್ಲಿ ಒಳ್ಳೆಯ ಫ್ಯಾನ್​ ಫೋಲೋಯಿಂಗ್​ ಇದೆ ಎಂದು ಅಖ್ತರ್​ ತಿಳಿಸಿದ್ದಾರೆ.

ಶೋಯೆಬ್​ ಅಖ್ತರ್​
ಶೋಯೆಬ್​ ಅಖ್ತರ್​
author img

By

Published : May 5, 2020, 12:01 PM IST

ನವದೆಹಲಿ: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರು ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗಲು ಅವಕಾಶ ಸಿಕ್ಕರೆ ಖಂಡಿತ ಆ ಜವಾಬ್ದಾರಿ ನಿರ್ವಹಿಸಲು ತಾವೂ ಸಿದ್ದ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಒಂದಿಲ್ಲೊಂದು ವಿಷಯ ಕುರಿತು ಮಾತನಾಡುವ ಅಖ್ತರ್​ ಸೋಮವಾರ ಹೆಲೋ ಆ್ಯಪ್​ ಸಂದರ್ಶನದಲ್ಲಿ ಭಾರತ ತಂಡಕ್ಕೆ ಕೋಚ್​ ಆಗುವ ವಿಚಾರವಾಗಿ ಮಾತನಾಡಿದ್ದಾರೆ. "ಆ ಜವಾಬ್ದಾರಿ ಸಿಕ್ಕರೆ ಖಂಡಿತವಾಗಿಯೂ ನಿರ್ವಹಿಸುತ್ತೇನೆ. ನನ್ನಲ್ಲಿರುವ ಜ್ಞಾನವನ್ನು ಬೇರೆಯವರಿಗೆ ಕಲಿಸಬೇಕು. ನಾನೇನು ಕಲಿತಿದ್ದೇನೋ ಅದನ್ನು ಬೇರಿಯವರಿಗೂ ಹಂಚಲು ಬಯಸುತ್ತೇನೆ. ನಾನು ಅಗ್ರೆಸಿವ್​ ಹಾಗೂ ಸಾಮರ್ಥ್ಯವುಳ್ಳ ಬೌಲರ್​ಗಳನ್ನು ಸೃಷ್ಟಿಸುತ್ತೇನೆ" ಎಂದು ತಿಳಿಸಿದ್ದಾರೆ.

ಪ್ರಥಮ ಆವೃತ್ತಿಯ ಐಪಿಎಲ್​ನಲ್ಲಿ ತಾವೂ ಆಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಅವಕಾಶ ಸಿಕ್ಕರೆ ಕೋಚ್​ ಆಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. 1998ರ ಸರಣಿಯ ವೇಳೆ ಸಚಿನ್​ ತೆಂಡೂಲ್ಕರ್​ ಅವರೊಂದಗಿನ ಮೊದಲ ಮಾತುಕತೆಯ ಬಗ್ಗೆ ಮಾತನಾಡುತ್ತಾ, ‘ನಾನು ಅವರನ್ನು ನೋಡಿದ್ದೆ. ಆದರೆ, ಅವರು ಭಾರತದಲ್ಲಿ ಎಷ್ಟರ ಮಟ್ಟಿಗೆ ಹೆಸರುವಾಸಿ ಎಂದು ತಿಳಿದಿರಲಿಲ್ಲ. ನಂತರ ತಿಳಿಯಿತು ಭಾರತದಲ್ಲಿ ಅವರನ್ನು ದೇವರಂತೆ ಪೂಜಿಸುತ್ತಾರೆ. ನೆನಪಿರಲಿ ಅವರು ನನಗೆ ನನ್ನ ಒಳ್ಳೆಯ ಸ್ನೇಹಿತ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.