ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಹೊಸದೊಂದು ದಾಖಲೆ ನಿರ್ಮಾಣಗೊಂಡಿದ್ದು, ಬಳ್ಳಾರಿ ಟಸ್ಕರ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಕೇವಲ 39 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಹೊಸ ಇತಿಹಾಸ ರಚನೆ ಮಾಡಿದ್ದು, 4 ಓವರ್ಗಳಲ್ಲಿ ಬರೋಬ್ಬರಿ 8ವಿಕೆಟ್ ಪಡೆದುಕೊಂಡಿದ್ದಾರೆ.
-
Innings of the tournament so far! 🔥
— Namma KPL (@KPLKSCA) August 23, 2019 " class="align-text-top noRightClick twitterSection" data="
Describe @gowthamyadav88's record ton in a word... #BTvSL #KPL8 #NammaKPL #KPLNoduGuru pic.twitter.com/SqLmyEt6r9
">Innings of the tournament so far! 🔥
— Namma KPL (@KPLKSCA) August 23, 2019
Describe @gowthamyadav88's record ton in a word... #BTvSL #KPL8 #NammaKPL #KPLNoduGuru pic.twitter.com/SqLmyEt6r9Innings of the tournament so far! 🔥
— Namma KPL (@KPLKSCA) August 23, 2019
Describe @gowthamyadav88's record ton in a word... #BTvSL #KPL8 #NammaKPL #KPLNoduGuru pic.twitter.com/SqLmyEt6r9
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬಳ್ಳಾರಿ ಟಸ್ಕರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ರೆಡ್ಡಿ(34), ಸಿಎಂ ಗೌತಮ್(13)ರನ್ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಸಿಎಂ ಗೌತಮ್ ವಿಕೆಟ್ ಬೀಳುತ್ತಿದ್ದಂತೆ ಕಣಕ್ಕಿಳಿದ ಕೃಷ್ಣಪ್ಪ ಗೌತಮ್ ಎದುರಾಳಿ ಬೌಲರ್ಗಳ ಮೇಲೆ ಸವಾರಿ ನಡೆಸಿದರು. ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ ಗೌತಮ್, 13 ಸಿಕ್ಸರ್ ಹಾಗೂ 7 ಬೌಂಡರಿ ಸಿಡಿಸಿದರು. ಕೊನೆಯದಾಗಿ ಅಜೇಯರಾಗಿ ಉಳಿದ ಈ ಪ್ಲೇಯರ್ 56 ಎಸೆತಗಳಲ್ಲಿ 134ರನ್ಗಳಿಕೆ ಮಾಡಿದರು. ಇನ್ನು ಬೌಲಿಂಗ್ನಲ್ಲೂ ಚಮತ್ಕಾರ ಮಾಡಿರುವ ಗೌತಮ್ ತಾವು ಎಸೆದ 4 ಓವರ್ಗಳಲ್ಲಿ ಕೇವಲ 15ರನ್ ನೀಡಿ ಪ್ರಮುಖ 8 ವಿಕೆಟ್ ಪಡೆದುಕೊಂಡರು.
-
With a performance that could be the best we will ever see, @gowthamyadav88 is the #RedmiManOfTheMatch. #BTvSL #KPL8 #NammaKPL #KPLNoduGuru pic.twitter.com/tKcHZ7j6Jv
— Namma KPL (@KPLKSCA) August 23, 2019 " class="align-text-top noRightClick twitterSection" data="
">With a performance that could be the best we will ever see, @gowthamyadav88 is the #RedmiManOfTheMatch. #BTvSL #KPL8 #NammaKPL #KPLNoduGuru pic.twitter.com/tKcHZ7j6Jv
— Namma KPL (@KPLKSCA) August 23, 2019With a performance that could be the best we will ever see, @gowthamyadav88 is the #RedmiManOfTheMatch. #BTvSL #KPL8 #NammaKPL #KPLNoduGuru pic.twitter.com/tKcHZ7j6Jv
— Namma KPL (@KPLKSCA) August 23, 2019
ಕರ್ನಾಟಕ ಪ್ರೀಮಿಯರ್ ಲೀಗ್ನ ಇತಿಹಾಸದಲ್ಲೇ ಅತಿ ವೇಗವಾಗಿ ಮೂಡಿಬಂದಿರುವ ಶತಕ ಇದಾಗಿದೆ. ಇನ್ನು ಪಂದ್ಯದ ನಡುವೆ ಮಳೆ ಸುರಿದ ಕಾರಣ 17 ಓವರ್ಗಳಿಗೆ ಪಂದ್ಯವನ್ನ ಇಳಿಕೆ ಮಾಡಲಾಯಿತು. ಇವರ 134ರನ್ಗಳ ನೆರವಿನಿಂದ ಬಳ್ಳಾರಿ ತಂಡ 17 ಓವರ್ಗಳಲ್ಲಿ 3ವಿಕೆಟ್ನಷ್ಟಕ್ಕೆ 203ರನ್ಗಳಿಕೆ ಮಾಡಿತು. ಇನ್ನು ಇದರ ಬೆನ್ನತ್ತಿದ್ದ ಶಿವಮೊಗ್ಗ ಲಯನ್ಸ್ ತಂಡ 16.3 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 133ರನ್ಗಳಿಕೆ ಮಾಡಿದ್ದು, ಬಳ್ಳಾರಿ ತಂಡ 70ರನ್ಗಳ ಗೆಲುವು ದಾಖಲು ಮಾಡಿದೆ.
ಕೃಷ್ಣಪ್ಪ ಗೌತಮ್ ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಿರುವ ಅನುಭವ ಹೊಂದಿದ್ದು, ಟೀಂ ಇಂಡಿಯಾ ತಂಡ ಸೇರಲು ಉತ್ಸುಕರಾಗಿದ್ದಾರೆ.