ನವದೆಹಲಿ: ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಸೀಮಿತ ಓವರ್ಗಳ ಉಪನಾಯಕ ರೋಹಿತ್ ಶರ್ಮಾ ಸಂದರ್ಶನ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದರು. ಇದರಲ್ಲಿ ಎರಡು ಖಾಲಿ ಬಾಕ್ಸ್ ನೀಡಿ ಇದರಲ್ಲಿ ಇಬ್ಬರ ಸಂಭಾಷಣೆಯನ್ನ ಭರ್ತಿ ಮಾಡಿದರೆ , ಉತ್ತಮವಾದದನ್ನು ನನ್ನ ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಳ್ಳುತ್ತೇನೆ ಎಂದು ರಹಾನೆ ಬರೆದು ಕೊಂಡಿದ್ದರು.
ರಹಾನೆ ಪೋಸ್ಟ್ ಮಾಡಿದಂತೆ ಭಾರತ ತಂಡದ ಚಾರ್ಲಿ ಚಾಪ್ಲಿನ್ ಎಂದೇ ಖ್ಯಾತರಾಗಿರುವ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್, ಇಬ್ಬರನ್ನು ಕಾಲೆಳೆಯುವಂತೆ ಪ್ರತಿಕ್ರಿಯೆ ನೀಡಿದ್ದಾರೆ.
ರಹಾನೆ ಹೇಳಿದಂತೆ ಇಬ್ಬರ ಸಂಭಾಷಣೆಯನ್ನು ಧವನ್ ತಮ್ಮಿಷ್ಟದಂತೆ ಬರೆದು ಕಾಮೆಂಟ್ ಮಾಡಿದ್ದಾರೆ. ‘ರೋಹಿತ್- ಹೇ ಬ್ರದರ್ ನಿನ್ನ ಬಾಯಿಯಲ್ಲಿ ಏನಿಟ್ಟುಕೊಂಡಿದ್ದೀಯಾ? ಎಂದು ಪ್ರಶ್ನೆ ಕೇಳಿದಂತೆ , ಇದಕ್ಕೆ ರಹಾನೆ -‘ಮಸಾಲಾ’ ಎಂದು ಉತ್ತರಿಸಿದಂತೆ ಕಾಂಮೆಂಟ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಶಿಖರ್ ಧವನ್ ರೋಹಿತ್ ಹಾಗೂ ರಹಾನೆ ಇಬ್ಬರ ಜೊತೆಗೂ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ. ಧವನ್ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಿ, ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ರಹಾನೆ ಜೊತೆಗೆ ಕೆಲವು ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭಿಸಿದ್ದಾರೆ.
![ಶಿಖರ್ ಧವನ್](https://etvbharatimages.akamaized.net/etvbharat/prod-images/dhawan_comment_11592360860775-64_1706email_1592360872_771.png)
ಐಪಿಎಲ್ನಲ್ಲಿ ರಹಾನೆ ಈ ಬಾರಿ ಡೆಲ್ಕಿ ಕ್ಯಾಪಿಟಲ್ ಪರ ಆಡಲಿದ್ದು, ಯುವ ಆಟಗಾರರ ದಂಡನ್ನೇ ಹೊಂದಿರುವ ಡೆಲ್ಲಿ ತಂಡಕ್ಕೆ ಈ ಇಬ್ಬರು ಅನುಭವಿಗಳು ಆಧಾರ ಸ್ತಂಭಗಳಾಗಿದ್ದಾರೆ.