ನವದೆಹಲಿ: ಭಾರತ ತಂಡದ ಹಿರಿಯ ಬ್ಯಾಟ್ಸ್ಮನ್ ಶಿಖರ್ ಧವನ್ ತಮ್ಮಲ್ಲಿ ತೀಕ್ಷ್ಣವಾದ ಹಾಸ್ಯ ಪ್ರಜ್ಞೆ ಇರುವುದರಿಂದ ತಾವೊಬ್ಬ ಯಶಸ್ವಿ ಕಾಮೆಂಟ್ಟೇಟರ್ ಆಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ದಶಕದಿಂದ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಶಿಖರ್ ಧವನ್ ತಮ್ಮ ನಿವೃತ್ತಿ ನಂತರ ಒಬ್ಬ ಉತ್ತಮ ಸ್ಫೂರ್ತಿದಾಯಕ ಮಾತುಗಾರನಾಗುತ್ತೇನೆ ಎಂದು ತಿಳಿಸಿದ್ದಾರೆ.
ಭಾರತ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಜೊತೆ ನಡೆಸಿದ ಇನ್ಸ್ಟಾಗ್ರಾಂ ಲೈವ್ ಸೆಷನ್ನಲ್ಲಿ ತಮ್ಮ ವೃತ್ತಿ ಜೀವನ ಮುಗಿದ ನಂತರದಲ್ಲಿ ಏನು ಮಾಡಬೇಕೆಂದುಕೊಂಡಿದ್ದಾರೆ ಎಂಬುದನ್ನು ಹೇಳಿಕೊಂಡಿದ್ದಾರೆ.
"ನನ್ನ ಹಾಸ್ಯಪ್ರಜ್ಞೆ ನನ್ನ ಶಕ್ತಿ, ಹಾಗಾಗಿ ನಾನು ಕಾಮೆಂಟರಿಯಲ್ಲಿ ಒಳ್ಳೆಯ ಜ್ಞಾನ ಹೊಂದಿದ್ದು, ನಾನು ಉತ್ತಮ ಕಾಮೆಂಟೇಟರ್ ಆಗಿಲಿದ್ದೇನೆ. ಅದರಲ್ಲೂ ವಿಶೇಷವಾಗಿ ಹಿಂದಿಯಲ್ಲಿ ನನ್ನ ಕಾಮೆಂಟರಿ ಉತ್ತಮವಾಗಿರುತ್ತದೆ. ನನ್ನ ಹಾಸ್ಯಪ್ರಜ್ಞೆ ತುಂಬಾ ತೀಕ್ಷ್ಣವಾಗಿರುವುದರಿಂದ ನಾನು ಉತ್ತಮ ಭಾಷಣಕಾರನು ಆಗುಬಹುದು. ಇನ್ನು ನಾನು ಪ್ರೇರಕ ಭಾಷಣ ಮಾಡುವಾಗ ಕೊಳಲನ್ನು ಬಳಸಿಕೊಂಡರೆ, ಹೆಚ್ಚಿನ ಜನರನ್ನು ಮೋಡಿ ಮಾಡಬಲ್ಲೆನು" ಎಂದು ಅಶ್ವಿನ್ ಜೊತೆ ಹೇಳಿಕೊಂಡಿದ್ದಾರೆ.
34 ವರ್ಷದ ಧವನ್ ಕಳೆದ ಜನವರಿಯಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ ಪರ ಕಣಕ್ಕಿಳಿಯಬೇಕಿತ್ತು. ಆದರೆ ಕೊರೊನಾ ಭೀತಿಯಿಂದ ಮುಂದೂಡಲ್ಪಟ್ಟಿದೆ. ಧವನ್ 2019ರ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ ಪರ 16 ಪಂದ್ಯಗಳನ್ನಾಡಿದ್ದು, 33.42ರ ಸರಾಸರಿಯಲ್ಲಿ 521 ರನ್ಗಳಿಸಿದ್ದರು.