ETV Bharat / sports

ರಸ್ತೆ ಬದಿ 'ಗೋವು'ಗಳಿಗೆ ಆಹಾರ ಹಾಕಿದ ಧವನ್: ಮೆಚ್ಚುಗೆ ಸೂಚಿಸಿದ ಭಜ್ಜಿ, ಕುಲ್ದೀಪ್​! - ಟೀಂ ಇಂಡಿಯಾ ಬ್ಯಾಟ್ಸ್​ಮನ್​

ರಸ್ತೆ ಬದಿ ಗೋವುಗಳಿಗೆ ಆಹಾರ ನೀಡಿರುವ ಟೀಂ ಇಂಡಿಯಾ ಬ್ಯಾಟ್ಸ್​ಮನ್​ ಶಿಖರ್​ ಧವನ್​​ ಇನ್​ಸ್ಟಾಗ್ರಾಮ್​ನಲ್ಲಿ ಅದರ ಬಗ್ಗೆ ಬರೆದುಕೊಂಡಿದ್ದಾರೆ.

Shikhar Dhawan Feeds Hungry Animals
Shikhar Dhawan Feeds Hungry Animals
author img

By

Published : Jun 12, 2020, 3:50 PM IST

ನವದೆಹಲಿ: ಟೀ ಇಂಡಿಯಾದ ಆರಂಭಿಕ ಆಟಗಾರ​ ಶಿಖರ್​ ಧವನ್​ ತಮ್ಮ ಮಗ ಜೋರಾವರ್​ ಹಾಗೂ ಪತ್ನಿ ಆಯೇಷಾ ಜೊತೆ ಸೇರಿ ಬಿದಿ ಬದಿಯ ಹಸಿದ ಗೋವುಗಳಿಗೆ ಆಹಾರ ಹಾಕಿದ್ದು, ಆ ವಿಡಿಯೋವನ್ನ ಇನ್​​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ.

ವಿಡಿಯೋ ಶೇರ್​ ಮಾಡಿರುವ ಶಿಖರ್​ ಧವನ್​, ಮಗನಿಗೆ ನಿಜವಾದ ಜೀವನದ ಪಾಠ ಕಲಿಸಿ ಕೊಡುತ್ತಿದ್ದೇನೆ. ನೀವೂ ಕೂಡ ಈ ರೀತಿಯಾಗಿ ಮಾಡಿ ಎಂದು ಮನವಿ ಮಾಡಿದ್ದಾರೆ. ಜತೆಗೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಹಸಿದ ಪ್ರಾಣಿಗಳಿಗೆ ಆಹಾರ ನೀಡುವುದು ನಿಜಕ್ಕೂ ನಿಮಗೆ ಹೆಮ್ಮೆ ಅನಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಇವರ ಮಾನವೀಯ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಟೀಂ ಇಂಡಿಯಾ ಕ್ರಿಕೆಟರ್ಸ್​ಗಳಾದ ಹರ್ಭಜನ್​ ಸಿಂಗ್​ ಹಾಗೂ ಕುಲ್ದೀಪ್​ ಯಾದವ್​ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿರುವ ಕಾರಣ ಶಿಖರ್​ ಧವನ್​ ಮನೆಯಲ್ಲೇ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.