ವಾರಣಾಸಿ (ಉತ್ತರ ಪ್ರದೇಶ): ಕಳೆದ 2 ದಿನಗಳಿಂದ ಕಾಶಿಯಲ್ಲಿರವ ಶಿಖರ್ ಧವನ್ ವಲಸೆ ಹಕ್ಕಿಗಳಿಗೆ ಆಹಾರ ನೀಡಿದ್ದು, ಸಂಕಷ್ಟಕ್ಕೆ ಸಿಲುಕವ ಸಾಧ್ಯತೆ ಹೆಚ್ಚಾಗಿದೆ.
ಪಕ್ಷಿ ಜ್ವರ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಜನವರಿ 11 ರಿಂದ ವಲಸೆ ಹಕ್ಕಿಗಳಿಗೆ ಆಹಾರವನ್ನು ನೀಡುವುದನ್ನು ವಾರಣಾಸಿ ಜಿಲ್ಲಾಡಳಿತ ನಿಷೇಧಿಸಿತ್ತು. ಆದರೆ, ಶಿಖರ್ ಧವನ್ ಅವರು ಗಂಗಾ ನದಿಯಲ್ಲಿ ದೋಣಿ ವಿಹಾರಕ್ಕೆ ಹೋದ ಸಮಯದಲ್ಲಿ ವಲಸೆ ಹಕ್ಕಿಗಳಿಗೆ ಆಹಾರವನ್ನು ನೀಡಿದ್ದು, ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ. ಘಟನೆಯನ್ನು ತಿಳಿದ ನಂತರ ವಾರಣಾಸಿ ಜಿಲ್ಲಾಧಿಕಾರಿ ಇದಕ್ಕೆ ನಾವಿಕನನ್ನು ಹೊಣೆಗಾರನನ್ನಾಗಿ ಮಾಡಿದ್ದಾರೆ.
ಧವನ್ ತಪ್ಪನ್ನು ಒಪ್ಪದ ಜಿಲ್ಲಾಡಳಿತ
ಧವನ್ ವಲಸೆ ಪಕ್ಷಿಗಳಿಗೆ ಆಹಾರ ನೀಡಿದ ಫೋಟೋ ಜಾಲತಾಣದಲ್ಲಿ ವೈರಲ್ ಆದ ನಂತರ ಶಿಖರ್ ಧವನ್ ಅವರನ್ನು ಕರೆದೊಯ್ದ ನಾವಿಕನ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿ ಮಾತನಾಡಿದ್ದಾರೆ. ಶಿಖರ್ ಧವನ್ ಪ್ರವಾಸಿಗರಾಗಿ ಇಲ್ಲಿಗೆ ಆಗಮಿಸಿದ್ದಾರೆ. ಪಕ್ಷಿಗಳಿಗೆ ಆಹಾರ ನೀಡುವುದನ್ನು ವಾರಣಾಸಿ ಜಿಲ್ಲಾಡಳಿತ ನಿಷೇಧಿಸಿದ್ದ ಬಗ್ಗೆ ತಿಳಿದಿರಲಿಲ್ಲ. ಆದರೆ ನಾವಿಕನಿಗೆ ಜಿಲ್ಲಾಡಳಿತದ ಆದೇಶದ ಬಗ್ಗೆ ತಿಳಿದಿತ್ತು. ಅದನ್ನು ತಿಳಿದಿದ್ದರೂ ಸಹ, ಶಿಖರ್ ಧವನ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿಲ್ಲ. ಆದ್ದರಿಂದ ನಾವಿಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.