ಹೈದರಾಬಾದ್: ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಇಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 10 ವರ್ಷಗಳನ್ನು ಪೂರೈಸಿದ್ದು ಇದಕ್ಕಿಂದ ದೊಡ್ಡ ಗೌರವ ಮತ್ತೊಂದಿಲ್ಲ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
"ಭಾರತ ತಂಡದ ಜೊತೆ 10 ವರ್ಷ ಕಳೆದಿದ್ದೇನೆ, ನನ್ನ ದೇಶದ ಪರ 10 ವರ್ಷಗಳ ಕಾಲ ಆಡಿದ್ದೇನೆ. ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ. ನನ್ನ ದೇಶವನ್ನು ಪ್ರತಿನಿಧಿಸಿರುವುದು ನನಗೆ ಜೀವಮಾನದ ನೆನೆಪುಗಳನ್ನು ನೀಡಿದೆ, ಇದಕ್ಕೆ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ " ಎಂದು ಗಬ್ಬರ್ ಖ್ಯಾತಿಯ ಧವನ್ ಟ್ವೀಟ್ ಮಾಡಿದ್ದಾರೆ.
-
10 years with Team India, 10 years playing for my country - there has been no greater honour. Representing my nation has given me memories for a lifetime, that I am always grateful for 🙏 🇮🇳 pic.twitter.com/8ULk1gHgpZ
— Shikhar Dhawan (@SDhawan25) October 20, 2020 " class="align-text-top noRightClick twitterSection" data="
">10 years with Team India, 10 years playing for my country - there has been no greater honour. Representing my nation has given me memories for a lifetime, that I am always grateful for 🙏 🇮🇳 pic.twitter.com/8ULk1gHgpZ
— Shikhar Dhawan (@SDhawan25) October 20, 202010 years with Team India, 10 years playing for my country - there has been no greater honour. Representing my nation has given me memories for a lifetime, that I am always grateful for 🙏 🇮🇳 pic.twitter.com/8ULk1gHgpZ
— Shikhar Dhawan (@SDhawan25) October 20, 2020
2010, ಅಕ್ಟೋಬರ್ 20 ರಂದು ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಎಡಗೈ ಬ್ಯಾಟ್ಸ್ಮನ್ ಈ ಒಂದು ದಶಕದಲ್ಲಿ 136 ಪಂದ್ಯಗಳಲ್ಲಿ ಭಾರತ ತಂಡದ ಪರ ಆಡಿದ್ದು, 17 ಶತಕಗಳ ಸಹಿತ 5688 ರನ್ಗಳಿಸಿದ್ದಾರೆ. 143 ರನ್ ಅವರ ಗರಿಷ್ಠ ಸ್ಕೋರ್ ಆಗಿದೆ.
![ಶಿಖರ್ ಧವನ್](https://etvbharatimages.akamaized.net/etvbharat/prod-images/1200px-shikhar_dhawan_16005494418_2010newsroom_1603193470_12.jpg)
34 ವರ್ಷದ ಆಟಗಾರ 34 ಟೆಸ್ಟ್ ಪಂದ್ಯಗಳನ್ನಾಡಿದ್ದು 7 ಶತಗಳ ಸಹಿತ 2315 ರನ್, 60 ಟಿ20 ಪಂದ್ಯಗಳಿಂದ 10 ಅರ್ಧಶತಕಗಳ ಸಹಿತ 1238 ರನ್ಗಳಿಸಿದ್ದಾರೆ.
![ಶಿಖರ್ ಧವನ್](https://etvbharatimages.akamaized.net/etvbharat/prod-images/155551_2010newsroom_1603193470_213.jpg)