ಮುಂಬೈ: ಭಾರತದ ಮಾಜಿ ಆಟಗಾರ ಹಾಗೂ ಉತ್ತರಖಂಡ ರಣಜಿ ತಂಡದ ಕೋಚ್ ಆಗಿರುವ ವಾಸಿಮ್ ಜಾಫರ್ ಯುವ ಬ್ಯಾಟ್ಸ್ಮನ್ ಪೃಥ್ವಿ ಶಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆತನನ್ನು ಮಾಜಿ ಆರಂಭಿಕ ಬ್ಯಾಟ್ಸ್ಮನ್ ವಿರೇಂದ್ರ ಸೆಹ್ವಾಗ್ರಿಗೆ ಹೋಲಿಕೆ ಮಾಡಿದ್ದಾರೆ.
" ನನ್ನ ಪ್ರಕಾರ ಅವನು(ವಿಶೇಷ) ಆಟಗಾರ, ಆತ ಪ್ರಯೋಗಿಸುವ ಹೊಡೆತವನ್ನು ಗಮನಿಸಿದರೆ, ನನಗೆ ಅವನಲ್ಲಿ ವಿರೇಂದ್ರ ಸೆಹ್ವಾಗ್ರಿದ್ದ ಸಾಮರ್ಥ್ಯ ಕಾಣುತ್ತಿದೆ " ಎಂದು ಜಾಫರ್ ಆಕಾಶ್ ಚೋಪ್ರಾ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
" ಆತ ಸಂಪೂರ್ಣವಾಗಿ ಬೌಲಿಂಗ್ ದಾಳಿಯನ್ನು ಪುಡಿ ಮಾಡುವ ಸಾಮರ್ಥ್ಯವಿದೆ. ಆದರೆ ಕೆಲವು ಕಡೆ ಆಟವನ್ನು ಅರ್ಥಮಾಡಿಕೊಳ್ಳುವುದು ಅಗತ್ಯ ಎಂದು ನಾನು ಭಾವಿಸಿದ್ದೇನೆ. ಆತ ನ್ಯೂಜಿಲ್ಯಾಂಡ್ನಲ್ಲಿ ಸ್ವಲ್ಪ ಮಟ್ಟಿಗೆ ಪ್ರದರ್ಶನ ತೋರುವಲ್ಲಿ ವಿಫಲನಾದ, ಅಲ್ಲಿ ಶಾರ್ಟ್ ಬಾಲ್ಗಳಿಗೆ ಎರಡು ಬಾರಿ ವಿಕೆಟ್ ಒಪ್ಪಿಸಿದ. ಅಲ್ಲಿ ನ್ಯೂಜಿಲ್ಯಾಂಡ್ ಬೌಲರ್ಗಳು ಎಣೆದಿದ್ದ ಬಲೆಗೆ ಶಾ ಬಲಿಯಾಗಿದ್ದ " ಎಂದು ಜಾಫರ್ ತಿಳಿಸಿದ್ದಾರೆ.
ಇನ್ನು ಮತ್ತೊಬ್ಬ ಭಾರತೀಯ ಆರಂಭಿಕ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ ಬಗ್ಗೆ ಮಾತನಾಡಿದ್ದು, ಆತ ಉತ್ತಮ ಆಟಗಾರ, ಆದರೆ ಅದೇ ಹಾದಿಯಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿಬೇಕಿದೆ. ಸಿಕ್ಕಿರುವ ಸೀಮಿತ ಅವಕಾಶಗಳನ್ನು ಮಯಾಂಕ್ ಅದ್ಭುತವಾಗಿ ಉಪಯೋಗಿಸಿಕೊಂಡಿದ್ದಾರೆ. ಮುಂದೆ ವಿದೇಶದಲ್ಲಿ ಅವರಿಗೆ ನಿಜವಾದ ಸವಾಲು ಎದುರಾಗಲಿದೆ. ಅದರಲ್ಲೂ ಆಸ್ಟ್ರೇಲಿಯಾ ಪ್ರವಾಸ ಪ್ರಮುಖವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.