ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಗಾಯಗೊಂಡಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮುಂದಿನ ಪಂದ್ಯಕ್ಕೆ ಕಣಕ್ಕಿಳಿಯುವುದು ಅನುಮಾನವಾಗಿದೆ.
ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ವೇಗಿ ಪ್ಯಾಟ್ ಕಮ್ಮಿನ್ಸ್ ಎಸೆದ ಶಾರ್ಟ್ ಬಾಲ್ ಮೊಣಕೈಗೆ ತಗುಲಿದ ಪರಿಣಾಮ ಶಮಿ ತೀವ್ರ ನೋವಿನಿಂದ ರಿಟೈರ್ಡ್ ಹರ್ಟ್ ಪಡೆದು ಮೈದಾನದಿಂದ ಹೊರ ನಡೆದರು. ಹೆಚ್ಚಿನ ಸ್ಕ್ಯಾನ್‌ಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
-
The extent of Mohammed Shami's injury a concern for India with a one-week turnaround to the Boxing Day Test #AUSvIND
— ESPNcricinfo (@ESPNcricinfo) December 19, 2020 " class="align-text-top noRightClick twitterSection" data="
">The extent of Mohammed Shami's injury a concern for India with a one-week turnaround to the Boxing Day Test #AUSvIND
— ESPNcricinfo (@ESPNcricinfo) December 19, 2020The extent of Mohammed Shami's injury a concern for India with a one-week turnaround to the Boxing Day Test #AUSvIND
— ESPNcricinfo (@ESPNcricinfo) December 19, 2020
ಪಂದ್ಯ ಮುಗಿದ ನಂತರ ಪ್ರತಿಕ್ರಿಯೆ ನೀಡಿರುವ ವಿರಾಟ್ " ಶಮಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವರನ್ನು ಸ್ಕ್ಯಾನ್‌ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರು ತುಂಬಾ ನೋವಿನಿಂದ ಬಳಲುತ್ತಿದ್ದರು, ತೋಳನ್ನು ಕೂಡ ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಸಂಜೆಯ ವೇಳೆಗೆ ಸಂಪೂರ್ಣ ಮಾಹಿತಿ ತಿಳಿಯುತ್ತದೆ" ಎಂದಿದ್ದಾರೆ.
ಓದಿ 'ಬ್ಯಾಟಿಂಗ್ನಲ್ಲಿ ತೀಕ್ಷ್ಣತೆಯ ಕೊರತೆ': ಸೋಲಿಗೆ ಕಾರಣ ಕೊಟ್ಟ ವಿರಾಟ್
ಪಿತೃತ್ವ ರಜೆ ಮೇಲೆ ವಿರಾಟ್ ತವರಿಗೆ ಹಿಂದಿರುಗುತ್ತಿದ್ದು, ಟೀಂ ಇಂಡಿಯಾದ ಬ್ಯಾಟಿಂಗ್ ಬಲ ಕುಗ್ಗಿಸಿದೆ. ಒಂದು ವೇಳೆ, ಮೊಹಮ್ಮದ್ ಶಮಿ ಕೂಡ ಅಲಭ್ಯರಾದರೆ ಬೌಲಿಂಗ್ ವಿಭಾಗಕ್ಕೂ ದೊಡ್ಡ ಹೊಡೆತ ಬೀಳುವ ಆತಂಕ ಎದುರಾಗಿದೆ.