ETV Bharat / sports

ಏರ್ ಬಬಲ್ ವ್ಯವಸ್ಥೆಯಲ್ಲಿ ಭಾರತಕ್ಕೆ ಶಕಿಬ್ ಅಲ್ ಹಸನ್ ಭೇಟಿ! - ಶಕೀಬ್ ಅಲ್ ಹಸನ್ ಲೇಟೆಸ್ಟ್ ನ್ಯೂಸ್

ಭಾರತಕ್ಕೆ ಭೇಟಿ ನೀಡುತ್ತಿರುವ ಬಾಂಗ್ಲಾ ಕ್ರಿಕೆಟಿಗ ಶಕಿಬ್ ಅಲ್ ಹಸನ್, ಉಭಯ ದೇಶಗಳ ನಡುವೆ ಸಹಿ ಹಾಕಿದ ಏರ್ ಬಬಲ್ ವ್ಯವಸ್ಥೆಯಲ್ಲಿ ಆಗಮಿಸಲಿದ್ದಾರೆ.

Shakib Al Hasan to visit India under 'air bubble' arrangement
ಶಕೀಬ್ ಅಲ್ ಹಸನ್
author img

By

Published : Nov 12, 2020, 12:05 PM IST

Updated : Nov 12, 2020, 12:31 PM IST

ಢಾಕಾ: ಉಭಯ ದೇಶಗಳ ನಡುವೆ ಸಹಿ ಹಾಕಿದ ಏರ್ ಬಬಲ್ ವ್ಯವಸ್ಥೆಯಲ್ಲಿ ಬಾಂಗ್ಲಾದೇಶದ ಸ್ಟಾರ್​ ಆಲ್‌ರೌಂಡರ್ ಶಕಿಬ್ ಅಲ್ ಹಸನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಬಾಂಗ್ಲಾದೇಶದ ಭಾರತೀಯ ಹೈಕಮಿಷನ್ ಮಾಹಿತಿ ನೀಡಿದೆ.

"ಬಾಂಗ್ಲಾದೇಶದ ಭಾರತದ ಹೈಕಮಿಷನ್, ಕ್ರಿಕೆಟಿಗ ಶಕಿಬ್ ಅಲ್ ಹಸನ್ ಅವರನ್ನು ಬರಮಾಡಿಕೊಳ್ಳಲು ಸಂತೋಷವಾಗಿದೆ. ಭಾರತ ಮತ್ತು ಬಾಂಗ್ಲಾದೇಶದಲ್ಲಿ ಅತ್ಯಂತ ಜನಪ್ರಿಯ ಆಟಗಾರನಾಗಿರುವ ಅವರು, ಏರ್ ಬಬಲ್ ವ್ಯವಸ್ಥೆಯೊಂದಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ" ಎಂದು ಹೈಕಮಿಷನ್ ಟ್ವೀಟ್ ಮಾಡಿದೆ.

ಪ್ರವಾಸೋದ್ಯಮ ಉದ್ದೇಶಗಳನ್ನು ಹೊರತುಪಡಿಸಿ ಭಾರತಕ್ಕೆ ಪ್ರಯಾಣಿಸಲು ಬಯಸುವ ಬಾಂಗ್ಲಾದೇಶ ಪ್ರಜೆಗಳು ಈ ವ್ಯವಸ್ಥೆಯಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ಕಳೆದ ತಿಂಗಳು ಹೈಕಮಿಷನ್ ತಿಳಿಸಿತ್ತು.

ಭ್ರಷ್ಟಾಚಾರ - ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಎಡಗೈ ಆಲ್‌ರೌಂಡರ್​​​ನನ್ನು ಎಲ್ಲಾ ರೀತಿಯ ಆಟಗಳಿಂದ ಎರಡು ವರ್ಷಗಳ ಕಾಲ ನಿಷೇಧಿಸಲಾಯಿತು. ಅವರ ನಿಷೇಧ ಕಳೆದ ತಿಂಗಳು ಅಕ್ಟೋಬರ್‌ನಲ್ಲಿ ಕೊನೆಗೊಂಡಿದೆ. ಇದೀಗ ಶಕಿಬ್ ಮತ್ತೆ ಕ್ರಿಕೆಟ್​ಗೆ ಮರಳಲು ಆಡಲು ಅರ್ಹರಾಗಿದ್ದಾರೆ. ಶಕಿಬ್ ತನ್ನ ಅಳಿಯಂದಿರು ಮತ್ತು ಕುಟುಂಬದೊಂದಿಗೆ ನಿಷೇಧದ ಅವಧಿಯ ಬಹುಪಾಲು ಅಮೆರಿಕದಲ್ಲಿದ್ದರು.

ಈಗಾಗಲೆ ಫಿಟ್ನೆಸ್ ಪರೀಕ್ಷೆ ಪುರ್ಣಗೊಳಿಸಿರುವ ಶಕಿಬ್, ಮುಂಬರುವ ಬಂಗಬಂಧು ಟಿ-20 ಕಪ್‌ ಆಡಲು ಸಮರ್ಥರಾಗಿದ್ದಾರೆ.

ಇಲ್ಲಿಯವರೆಗೆ ಬಾಂಗ್ಲಾದೇಶ ಪರ 56 ಟೆಸ್ಟ್, 206 ಏಕದಿನ ಮತ್ತು 76 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ ಟೆಸ್ಟ್​ನಲ್ಲಿ 3,862, ಏಕದಿನ ಕ್ರಿಕೆಟ್​ನಲ್ಲಿ 6,323 ಮತ್ತು ಟಿ-20 ಪಂದ್ಯಗಳಲ್ಲಿ 1,567 ರನ್ ಗಳಿಸಿದ್ದಾರೆ. ಅಲ್ಲದೇ, ಮೂರು ಸ್ವರೂಪಗಳಲ್ಲಿ ಕ್ರಮವಾಗಿ 210, 260 ಮತ್ತು 92 ವಿಕೆಟ್‌ಗಳನ್ನು ಪಡೆದಿದ್ದಾರೆ.

Last Updated : Nov 12, 2020, 12:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.