ಢಾಕಾ: ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಬಿಸಿಬಿ ಪ್ರಕಟಿಸಿದ 18 ಸದಸ್ಯರ ತಂಡದಲ್ಲಿ ಬಾಂಗ್ಲಾದೇಶದ ಮಾಜಿ ಕ್ಯಾಪ್ಟನ್ ಶಕೀಬ್ ಅಲ್ ಹಸನ್ ಅವಕಾಶ ಪಡೆದುಕೊಂಡಿದ್ದಾರೆ.
ಶಕೀಬ್, ಐಸಿಸಿ ಭ್ರಷ್ಟಾಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದ ಆರೋಪದ ಮೇಲೆ 12 ತಿಂಗಳ ನಿಷೇಧಕ್ಕೊಳಗಾಗಿದ್ದರು. ಐಪಿಎಲ್ ಪಂದ್ಯ ಹಾಗೂ ತ್ರಿಕೋನ ಸರಣಿಯ ವೇಳೆ ಮ್ಯಾಚ್ ಫಿಕ್ಸಿಂಗ್ಗಾಗಿ ಬುಕ್ಕಿಯೊಬ್ಬ ತಮ್ಮನ್ನು ಸಂಪರ್ಕಿಸಿದ್ದ ವಿಚಾರವನ್ನು ಮುಚ್ಚಿಟ್ಟಿದ್ದ ಆರೋಪಕ್ಕೆ ಒಳಪಟ್ಟಿದ್ದರು. ಇದೀಗ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಲು ಸಿದ್ಧರಾಗಿದ್ದಾರೆ.
-
Bangladesh ODI Squad for the 3-match series against West Indies.#BANvWI#RiseOfTheTigers pic.twitter.com/Mbdm54ptQy
— Bangladesh Cricket (@BCBtigers) January 16, 2021 " class="align-text-top noRightClick twitterSection" data="
">Bangladesh ODI Squad for the 3-match series against West Indies.#BANvWI#RiseOfTheTigers pic.twitter.com/Mbdm54ptQy
— Bangladesh Cricket (@BCBtigers) January 16, 2021Bangladesh ODI Squad for the 3-match series against West Indies.#BANvWI#RiseOfTheTigers pic.twitter.com/Mbdm54ptQy
— Bangladesh Cricket (@BCBtigers) January 16, 2021
ಶಕೀಬ್ ಅಲ್ ಹಸನ್ ಜೊತೆಗೆ ಬಿಸಿಬಿ ಮೂವರು ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ಆಗಾರರನ್ನು ಸೇರಿಸಿದೆ. ಬಿಪಿಎಲ್ನಲ್ಲಿ ಮಿಂಚಿದ್ದ ಆಫ್ ಸ್ಪಿನ್ನರ್ ಮೆಹದಿ ಹಸನ್, ವೇಗಿ ಹಸನ್ ಮಹ್ಮುದ್ ಮತ್ತು ಶೋರಿಫುಲ್ ಇಸ್ಲಾಮ್ ವೆಸ್ಟ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ ಎಂದು ಬಿಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಆದರೆ ಈ ಮೊದಲು ಘೋಷಿಸಿದ್ದ 24 ಸದಸ್ಯರ ಪಟ್ಟಿಯಿಂದ ಹೊರಬಿದ್ದಿರುವ ಮಾಜಿ ನಾಯಕ ಮುಷ್ರಫೆ ಮಾರ್ತಾಜಾ ಅವರನ್ನು ಅಂತಿಮ ತಂಡದ ಪಟ್ಟಿಯಲ್ಲೂ ಪರಿಗಣಿಸಿಲ್ಲ.
ಈ ಸರಣಿಯ ಮೊದಲೆರಡು ಪಂದ್ಯಗಳು ಜನವರಿ 20 ಮತ್ತು 22 ರಂದು ಮಿರ್ಪುರ್ನ ಶೇರ್ ಇ ಬಾಂಗ್ಲಾ ರಾಷ್ಟ್ರೀಯ ಮೈದಾನದಲ್ಲಿ ಹಾಗೂ ಕೊನೆಯ ಏಕದಿನ ಪಂದ್ಯ ಜನವರಿ 25 ರಂದು ಚಟ್ಟೋಗ್ರಾಮ್ನಲ್ಲಿ ನಡೆಯಲಿದೆ.
ಬಾಂಗ್ಲಾದೇಶ ಏಕದಿನ ತಂಡ: ತಮೀಮ್ ಇಕ್ಬಾಲ್ (ಕ್ಯಾಪ್ಟನ್), ಶಕಿಬ್ ಅಲ್ ಹಸನ್, ನಜ್ಮುಲ್ ಹೊಸೇನ್ ಶಾಂಟೊ, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮೊಹಮ್ಮದ್ ಮಿಥುನ್, ಲಿಟನ್ ದಾಸ್, ಮಹಮ್ಮದುಲ್ಲಾ, ಅಫಿಫ್ ಹೊಸೈನ್, ಸೌಮ್ಯ ಸರ್ಕಾರ್, ತಸ್ಕಿನ್ ಅಹ್ಮದ್, ರುಬೆಲ್ ಹುಸೈನ್, ತೈಜುಲ್ ಇಸ್ಲಾಮ್, ಮೆಹಿದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಮಹೆದಿ ಹಸನ್, ಹಸನ್ ಮಹಮ್ಮದ್, ಶೋರಿಫುಲ್ ಇಸ್ಲಾಂ
ಇದನ್ನು ಓದಿ:ಐಪಿಎಲ್ ಮಿನಿ ಹರಾಜು; ಹೆಸರು ನೋಂದಾಯಿಸಿಕೊಳ್ಳಲು ಆಟಗಾರರಿಗೆ ಫೆ.4 ಕೊನೆ ದಿನ