ಸೆಂಚುರಿಯನ್: ಬುಧವಾರ ಅಂತ್ಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಪಾಕಿಸ್ತಾನ 2-1ರಲ್ಲಿ ಬಗ್ಗುಬಡಿದಿದೆ. ಈ ಸಂದರ್ಭದಲ್ಲಿ ಪಾಕ್ ತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಮಾಜಿ ಆಲ್ರೌಂಡರ್ ಶಾಹೀದ್ ಅಫ್ರಿದಿ ಐಪಿಲ್ಗಾಗಿ ತಂಡ ತೊರೆದ ದ.ಆಫ್ರಿಕಾ ಆಟಗಾರರ ವಿರುದ್ಧ ಕಿಡಿಕಾರಿದ್ದಾರೆ.
ಬುಧವಾರ ಸರಣಿ ನಿರ್ಣಾಯಕ ಪಂದ್ಯಕ್ಕೂ ಮುನ್ನ ಆಫ್ರಿಕಾ ತಂಡದ ಸ್ಟಾರ್ ಆಟಗಾರರಾದ ಕ್ವಿಂಟನ್ ಡಿ ಕಾಕ್, ಕಗಿಸೊ ರಬಾಡ ಮತ್ತು ಅನ್ರಿಚ್ ನೋಕಿಯಾ, ಡೇವಿಡ್ ಮಿಲ್ಲರ್ ಹಾಗೂ ಲುಂಗಿ ಎಂಗಿಡಿಯನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಐಪಿಎಲ್ಗಾಗಿ ಬಿಡುಗಡೆ ಮಾಡಿತ್ತು. ಅಲ್ಲದೇ ಈ ಆಟಗಾರರು ಮುಂಬರುವ ಟಿ20 ಸರಣಿಗೂ ಪರಿಗಣಿಸಲಾಗಿಲ್ಲ. ಪರಿಣಾಮ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಹರಿಣ ಪಡೆ 28ರನ್ಗಳಿಂದ ಸೋಲು ಕಂಡಿತ್ತು. ಈ ಕಾರಣದಿಂದ ಅಫ್ರಿದಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯನ್ನು ದೂಷಿಸಿದ್ದಾರೆ.
-
Surprising to see @OfficialCSA allowing players to travel for IPL in the middle of a series. It is sad to see T20 leagues influencing international cricket. Some rethinking needs to be done!! https://t.co/5McUzFuo8R
— Shahid Afridi (@SAfridiOfficial) April 7, 2021 " class="align-text-top noRightClick twitterSection" data="
">Surprising to see @OfficialCSA allowing players to travel for IPL in the middle of a series. It is sad to see T20 leagues influencing international cricket. Some rethinking needs to be done!! https://t.co/5McUzFuo8R
— Shahid Afridi (@SAfridiOfficial) April 7, 2021Surprising to see @OfficialCSA allowing players to travel for IPL in the middle of a series. It is sad to see T20 leagues influencing international cricket. Some rethinking needs to be done!! https://t.co/5McUzFuo8R
— Shahid Afridi (@SAfridiOfficial) April 7, 2021
"ಸರಣಿಯ ಮಧ್ಯದಲ್ಲಿ ಆಟಗಾರರನ್ನು ಐಪಿಎಲ್ಗಾಗಿ ಪ್ರಯಾಣಿಸಲು ಸಿಎಸ್ಎ ಅವಕಾಶ ನೀಡಿರುವುದನ್ನು ನೋಡಿ ಆಶ್ಚರ್ಯವಾಗಿದೆ. ಟಿ-20 ಲೀಗ್ಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಮೇಲೆ ಪ್ರಭಾವ ಬೀರುತ್ತಿರುವುದನ್ನು ನೋಡಲು ದುಃಖಕರವಾಗಿದೆ. ಇದರ ಬಗ್ಗೆ ಮರುಚಿಂತನೆ ಅಗತ್ಯವಾಗಿದೆ!! ಎಂದು ಅಫ್ರಿದಿ ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ ಫಖರ್ ಝಮಾನ್ ಅವರ ಶತಕ(103) ಮತ್ತು ಬಾಬರ್ ಅಜಮ್ರ 84 ರನ್ಗಳ ನೆರವಿನಿಂದ 7 ವಿಕೆಟ್ ಕಳೆದುಕೊಂಡು 320 ರನ್ಗಳಿಸಿತ್ತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ 292 ರನ್ಗಳಿಗೆ ಆಲೌಟ್ ಆಗುವ ಮೂಲಕ 28 ರನ್ಗಳ ಸೋಲು ಕಂಡಿತ್ತು.