ಕರಾಚಿ: ಫ್ರಾಂಚೈಸಿಗಳಿಗೆ ಕೋವಿಡ್-19 ಸೋಂಕಿನ ಹೆದರಿಕೆ ಹುಟ್ಟಿದ್ದರಿಂದ ಪಿಎಸ್ಎಲ್ 6 ಮುಂದೂಡಲಾಗಿದೆ ಎಂದು ಮಾಜಿ ನಾಯಕ ಶಾಹಿದ್ ಅಫ್ರಿದಿ ಟೀಕಿಸಿದ್ದಾರೆ.
ಲಾಹೋರ್‌ನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಅಫ್ರಿದಿ, ಪಾಕಿಸ್ತಾನ ಸೂಪರ್ ಲೀಗ್ ಅನ್ನು ಮುಂದೂಡಬಾರದು. ಪಿಎಸ್ಎಲ್ ಇದು ಪಾಕಿಸ್ತಾನ ಮತ್ತು ಪಾಕಿಸ್ತಾನ ಕ್ರಿಕೆಟ್‌ನ ಒಂದು ದೊಡ್ಡ ಬ್ರ್ಯಾಂಡ್ ಆಗಿದೆ. ಈ ಮಹತ್ವದ ಕಾರ್ಯಕ್ರಮಕ್ಕಾಗಿ ಪಿಸಿಬಿ 'ಬಿ' ಯೋಜನೆ ಹೊಂದಿಲ್ಲದಿರುವುದು ದುರದೃಷ್ಟಕರ ಎಂದು ಕ್ರಿಕೆಟ್ ಮಂಡಳಿ ವಿರುದ್ಧ ಹರಿಹಾಯ್ದರು.
ಕೆಲ ಆಟಗಾರರು ಮತ್ತು ಅಧಿಕಾರಿಗಳಿಗೆ ಕೊರೊನಾ ಸೋಂಕು ತಗುಲಿದಾಗ ಅವರ ಬಳಿ 'ಬಿ' ಯೋಜನೆ ಇರಲಿಲ್ಲ ಎಂದು ತೋರುತ್ತದೆ. ಇದು ನನಗೆ ಆಶ್ಚರ್ಯಕರ ಮೂಡಿಸಿದೆ. ಆದರೆ ಪಿಎಸ್ಎಲ್ ಮುಂದೂಡುವುದು ಉತ್ತಮ ಸಂದೇಶವಲ್ಲ ಎಂದು ಅವರು ಹೇಳಿದರು.
ಪಂದ್ಯಾವಳಿಗಾಗಿ ರಚಿಸಲಾದ ಬಯೋ ಸೆಕ್ಯೂರ್ ಬಬಲ್ ದೋಷಗಳಿಗೆ ಪಿಸಿಬಿ ಶೇ 90ರಷ್ಟು ಕಾರಣವಾಗಿದೆ ಎಂದು ನಾನು ಭಾವಿಸುತ್ತೇನೆ. ಇದರಿಂದಾಗಿ ಪಿಎಸ್ಎಲ್ ಅನ್ನು ಮುಂದೂಡಲು ಕಾರಣವಾಯಿತು ಎಂದು ಅಫ್ರಿದಿ ಹೇಳಿದರು.