ETV Bharat / sports

ಮುಶ್ಫಿಕರ್​ ರಹೀಮ್​ ಹರಾಜಿಗಿಟ್ಟಿದ್ದ ಬ್ಯಾಟ್ 20,000 ಅಮೆರಿಕನ್​ ಡಾಲರ್ ನೀಡಿ​ ಖರೀದಿಸಿದ ಅಫ್ರಿದಿ

ಮೇ 13ರಂದು ಶಾಹೀದ್​ ಅಫ್ರಿದಿ ತಮ್ಮ ನೆಚ್ಚಿನ ಬ್ಯಾಟ್​ಅನ್ನು 20,000 ಅಮೆರಿಕನ್​ ಡಾಲರ್​ ನೀಡಿ ಖರೀದಿಸಿದ್ದಾರೆ. ನಾನು ಅವರ ಸಹಾಯ ಗುಣಕ್ಕೆ ಧನ್ಯವಾದ ತಿಳಿಸಲು ಬಯಸುತ್ತೇನೆ. ಜೊತೆಗೆ ಇದಕ್ಕೆ ನೆರವಾದ ತಮೀಮ್​ ಇಕ್ಬಾಲ್​ ಅವರಿಗೂ ನಾನು ಋಣಿಯಾಗಿರುತ್ತೇನೆ ಎಂದು ರಹೀಮ್​ ತಿಳಿಸಿದ್ದಾರೆ.

ರಹೀಮ್​ ಬ್ಯಾಟ್​ ಖರೀದಿಸಿದಿ ಅಫ್ರಿದಿ
ರಹೀಮ್​ ಬ್ಯಾಟ್​ ಖರೀದಿಸಿದಿ ಅಫ್ರಿದಿ
author img

By

Published : May 16, 2020, 1:10 PM IST

ಡಾಕಾ: ಕೊರೊನಾ ವೈರಸ್​ ವಿರುದ್ಧದ ಹೋರಾಟಕ್ಕೆ ನೆರವು ನೀಡಲು ಬಾಂಗ್ಲಾದೇಶದ ವಿಕೆಟ್​ ಕೀಪರ್ ಮುಶ್ಪಿಕರ್​ ರಹೀಮ್​​ ಹರಾಜಿಗಿಟ್ಟಿದ್ದ ಬ್ಯಾಟ್​​ಅನ್ನು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹೀದ್​ ಅಫ್ರಿದಿ ಖರೀದಿಸಿದ್ದಾರೆ.

2013ರಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್​ನಲ್ಲಿ ದ್ವಿಶತಕ ಸಿಡಿಸಿದ್ದ ತಮ್ಮ ನೆಚ್ಚಿನ ಬ್ಯಾಟ್​ಅನ್ನು ರಹೀಮ್​ ಬಾಂಗ್ಲಾದೇಶದಲ್ಲಿ ಕೊರೊನಾ ವಿರುದ್ಧ ಹೋರಾಟಕ್ಕೆ ನೆರವು ನೀಡವ ಸಲುವಾಗಿ ಹರಾಜಿಗಿಟ್ಟಿದ್ದರು. ಈ ವೇಳೆ ಸುಳ್ಳು ಬಿಡ್​ ಮಾಡಿ ಈ ಹರಾಜು ಅರ್ಧದಲ್ಲೇ ನಿಂತಿತ್ತು. ಇದೀಗ ಅಫ್ರಿದಿ ತಮ್ಮ ಶಾಹೀದ್​ ಅಫ್ರಿದಿ ಫೌಂಡೇಶನ್​ ಮೂಲಕ 20000 ಅಮೆರಿಕನ್​ ಡಾಲರ್​(16.9 ಲಕ್ಷ ಬಾಂಗ್ಲಾ ಟಾಕಾ) ನೀಡಿ ಖರೀದಿಸಿದ್ದಾರೆ.

ಮೇ 13ರಂದು ಶಾಹೀದ್​ ಅಫ್ರಿದಿ ತಮ್ಮ ನೆಚ್ಚಿನ ಬ್ಯಾಟ್​ಅನ್ನು 20,000 ಅಮೆರಿಕನ್​ ಡಾಲರ್​ ನೀಡಿ ಖರೀದಿಸಿದ್ದಾರೆ. ನಾನು ಅವರ ಸಹಾಯ ಗುಣಕ್ಕೆ ಧನ್ಯವಾದ ತಿಳಿಸಲು ಬಯಸುತ್ತೇನೆ. ಜೊತೆಗೆ ಇದಕ್ಕೆ ನೆರವಾದ ತಮೀಮ್​ ಇಕ್ಬಾಲ್​ ಅವರಿಗೂ ನಾನು ಋಣಿಯಾಗಿರುತ್ತೇನೆ ಎಂದು ರಹೀಮ್​ ತಿಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿ 20,065 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 298 ಮಂದಿ ಸಾವನ್ನಪ್ಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.