ಲೀಡ್ಸ್: ಸೆಮಿಫೈನಲ್ಗೇರಲು ತನ್ನ ಮುಂದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಿರುವ ಪಾಕಿಸ್ತಾನ ತಂಡಕ್ಕೆ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ 229 ರನ್ಗಳ ಟಾರ್ಗೇಟ್ ನೀಡಿದೆ.
ಲೀಡ್ಸ್ನಲ್ಲಿ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು. ಟಾಸ್ ಗೆದ್ದ ಅಫ್ಘಾನಿಸ್ತಾನ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 227 ರನ್ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಅಫ್ಘಾನಿಸ್ತಾನ, ಪಾಕಿಸ್ತಾನ ಬೌಲರ್ಗಳ ದಾಳಿಗೆ ತತ್ತರಿಸಿದರು. ಕೇವಲ 27 ರನ್ಗಳಾಗುವಷ್ಟರಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ನಾಯಕ ನೈಬ್(15) ಹಾಗೂ 3ನೇ ಕ್ರಮಾಂಕದಲ್ಲಿ ಬಂದ ಶಾಹಿದಿ(0) ಯುವ ಬೌಲರ್ ಶಾಹೀನ್ ಆಫ್ರಿದಿಗೆ ವಿಕೆಟ್ ಒಪ್ಪಿಸಿದರು.
-
Afghanistan finish on 227/9!
— Cricket World Cup (@cricketworldcup) June 29, 2019 " class="align-text-top noRightClick twitterSection" data="
An excellent effort from the Pakistan bowling attack 👏 #CWC19 | #PAKvAFG | #WeHaveWeWill | #AfghanAtalan pic.twitter.com/z4Gkn7JSYp
">Afghanistan finish on 227/9!
— Cricket World Cup (@cricketworldcup) June 29, 2019
An excellent effort from the Pakistan bowling attack 👏 #CWC19 | #PAKvAFG | #WeHaveWeWill | #AfghanAtalan pic.twitter.com/z4Gkn7JSYpAfghanistan finish on 227/9!
— Cricket World Cup (@cricketworldcup) June 29, 2019
An excellent effort from the Pakistan bowling attack 👏 #CWC19 | #PAKvAFG | #WeHaveWeWill | #AfghanAtalan pic.twitter.com/z4Gkn7JSYp
ನಂತರ ರೆಹ್ಮತ್ ಜೊತೆಗೂಡಿದ ಯುವ ಕೀಪರ್ ಇಕ್ರಮ್ ಅಲಿ ಮೂರನೇ ವಿಕೆಟ್ಗೆ 30 ಸೇರಿಸುವ ಮೂಲಕ ಅಲ್ಪ ಚೇತರಿಕೆ ನೀಡಿದರು. ಈ ಹಂತದಲ್ಲಿ 35 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ರೆಹ್ಮತ್ ರನ್ನು ಸ್ಪಿನ್ನರ್ ಇಮಾದ್ ವಾಸೀಂ ಪೆವಿಲಿಯನ್ಗಟ್ಟಲು ಯಶಸ್ವಿಯಾದರು. ಶಾ ವಿಕೆಟ್ ಪತನದ ನಂತರ ಅಬ್ಬರ ಆಟವಾಡಿದ ಮಾಜಿ ನಾಯಕ ಅಸ್ಘರ್ ಅಫ್ಘನ್ ಕೇವಲ 35 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಿತ 43 ರನ್ಗಳಿಸಿ 4 ನೇ ವಿಕೆಟ್ ಜೊತಯಾಟದಲ್ಲಿ ಇಕ್ರಮ್ ಜೊತೆ 64 ರನ್ ಸೇರಿಸಿದರು. ಈ ಸಂದರ್ಭದಲ್ಲಿ ದಾಳಿಗಿಳಿದ ಸ್ಪಿನ್ನರ್ ಶದಾಬ್ ಖಾನ್ ಅಫ್ಘನ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಕೇವಲ 5 ರನ್ ಅಂತರದಲ್ಲಿ ಇಕ್ರಮ್(24) ಕೂಡ ಇಮಾದ್ ವಾಸಿಂಗ್ ಬೌಲಿಂಗ್ನಲ್ಲಿ ಹಫೀಜ್ಗೆ ಕ್ಯಾಚ್ ನೀಡಿದರು.
ಇವರಿಬ್ಬರ ಪತನದ ನಂತರ ಸ್ಫೋಟಕ ಬ್ಯಾಟ್ಸ್ಮನ್ ನಜೀಬುಲ್ಹಾ ಜಾಡ್ರನ್ 54 ಎಸೆತಗಳಲ್ಲಿ 6 ಬೌಂಡರಿ ಸಹಿತ 42 ರನ್ಗಳಿಸಿದರು. ಆಲ್ರೌಂಡರ್ಗಳಾದ ನಬಿ 16, ಹಾಗೂ ಶೆನ್ವಾರಿ 19 ರನ್ಗೆ ಸೀಮಿತವಾದರೆ, ರಶೀದ್ ಖಾನ್ 4,ಹಮೀದ್ ಹಸನ್ 1 ಹಾಗೂ ಮುಜೀಬ್ ಔಟಾಗದೆ 7 ರನ್ಗಳಿಸಿದರು.
ಕಳೆದ ಪಂದ್ಯದಲ್ಲಿ 3 ವಿಕೆಟ್ ಪಡೆದು ಮಿಂಚಿದ್ದ ಆಫ್ರಿದಿ ಈ ಪಂದ್ಯದಲ್ಲೂ 4 ವಿಕೆಟ್ ಪಡೆದು ಅಫ್ಘಾನಿಸ್ತಾನ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದರು. ಅಫ್ರಿದಿಗೆ ಬೆಂಬಲ ನೀಡಿದ ಇಮಾದ್ ವಾಸೀಂ 2, ವಹಾಬ್ ರಿಯಾಜ್ 2 ಹಾಗೂ ಶದಾಬ್ ಖಾನ್ ಒಂದು ವಿಕೆಟ್ ಪಡೆದರು.