ದುಬೈ: ಐಸಿಸಿ ಮಹಿಳಾ ಟಿ-20 ವಿಶ್ವಕಪ್ನಲ್ಲಿ ಮಿಂಚು ಹರಿಸುತ್ತಿರುವ 16 ವರ್ಷದ ಬಲಗೈ ಆಟಗಾರ್ತಿ, ಸ್ಫೋಟಕ ಬ್ಯಾಟ್ಸಮನ್ ಶೆಫಾಲಿ ವರ್ಮಾ ತಮ್ಮ ಬ್ಯಾಟಿಂಗ್ನಿಂದಲೇ ಎಲ್ಲರ ಗಮನ ಸಳೆದಿದ್ದು, ಇದೀಗ ಐಸಿಸಿ ಟಿ-20 ರ್ಯಾಕಿಂಗ್ನಲ್ಲಿ ನಂಬರ್ 1ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.
ಚುಟುಕು ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಬರೋಬ್ಬರಿ 19 ಸ್ಥಾನ ಜಿಗಿತ ಕಂಡಿರುವ ಈ ಪ್ಲೇಯರ್ ಇದೀಗ 761 ಅಂಕಗಳ ಮೂಲಕ ನಂಬರ್ 1 ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.
ಇಲ್ಲಿಯವರೆಗೆ ಕೇವಲ 18 ಟಿ-20 ಪಂದ್ಯಗಳನ್ನಾಡಿರುವ ಶೆಫಾಲಿ ವರ್ಮಾ, 146.96 ಸ್ಟ್ರೈಕ್ ರೇಟ್ನಲ್ಲಿ 485ರನ್ಗಳಿಕೆ ಮಾಡಿದ್ದು, ವಿಶ್ವಕಪ್ನಲ್ಲಿ ತಾವು ಆಡಿರುವ 4 ಪಂದ್ಯಗಳಿಂದ 161ರನ್ಗಳಿಕೆ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧ ಸಿಡಿಸಿರುವ 47ರನ್ ಗರಿಷ್ಠ ಸ್ಕೋರ್ ಆಗಿದೆ.
ಇನ್ನು ತಂಡದ ಮತ್ತೋರ್ವ ಆಟಗಾರ್ತಿ ಸ್ಮೃತಿ ಮಂದಾನಾ ಆರನೇ ಸ್ಥಾನದಲ್ಲಿದ್ದು, ರೊಡ್ರಿಗಸ್ 9ನೇ ಸ್ಥಾನದಲ್ಲಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಪೂನಂ ಯಾದವ್ 8ನೇ ಸ್ಥಾನದಲ್ಲಿದ್ದುಮ ದೀಪ್ತಿ ಶರ್ಮಾ ಹಾಗೂ ರಾಧಾ ಯಾದವ್ ಕ್ರಮವಾಗಿ 5 ಹಾಗೂ 7ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ತಂಡದ ಶೋಫಿಯಾ ಬೌಲಿಂಗ್ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.