ETV Bharat / sports

ಕ್ವಾರ್ಟರ್​ ಖುಷಿಯಲ್ಲಿದ್ದ ಸೆರೆನಾಗೆ ಬಿತ್ತು 6.8 ಲಕ್ಷ ರೂ ದಂಡ

ವಿಂಬಲ್ಡನ್​ನಲ್ಲಿ ಕ್ವಾರ್ಟರ್​ ಫೈನಲ್​ ತಲುಪಿದ್ದ ಅಮೆರಿಕಾದ ಹಿರಿಯ ಟೆನ್ನಿಸ್​ ಆಟಗಾರ್ತಿ ಸೆರನಾ ವಿಲಿಯಮ್ಸ್​ಗೆ ಆಲ್​ ಇಂಗ್ಲೆಂಡ್​ ಟೆನ್ನಿಸ್​ ಕ್ಲಬ್​ 10 ಸಾವಿರ ಡಾಲರ್​ ದಂಡ ವಿಧಿಸಿದೆ.

author img

By

Published : Jul 9, 2019, 6:03 PM IST

Updated : Jul 9, 2019, 7:22 PM IST

Serena Williams

ವಿಂಬಲ್ಡನ್​: ವಿಂಬಲ್ಡನ್​ನಲ್ಲಿ ಕ್ವಾರ್ಟರ್​ ಫೈನಲ್​ ತಲುಪಿದ್ದ ಅಮೆರಿಕಾದ ಹಿರಿಯ ಟೆನ್ನಿಸ್​ ಆಟಗಾರ್ತಿ ಸೆರನಾ ವಿಲಿಯಮ್ಸ್​ಗೆ ಆಲ್​ ಇಂಗ್ಲೆಂಡ್​ ಟೆನ್ನಿಸ್​ ಕ್ಲಬ್​ 10 ಸಾವಿರ ಡಾಲರ್​ ದಂಡ ವಿಧಿಸಿದೆ.

23 ಬಾರಿಯ ಗ್ರ್ಯಾಂಡ್​ಸ್ಲಾಮ್​ ವಿನ್ನರ್​ ಹಾಗೂ 7 ಬಾರಿಯ ವಿಂಬಲ್ಡನ್​ ಚಾಂಪಿಯನ್​ ಆಗಿರುವ ಸೆರೆನಾ, ಟೂರ್ನಿ ಪ್ರಾರಂಭವಾಗುವುದಕ್ಕೂ ಮುನ್ನ ಅಭ್ಯಾಸ ನಡೆಸುವ ವೇಳೆ ವಿಂಬಲ್ಡನ್‌ನ ಕೋರ್ಟ್​ನಲ್ಲಿ ತಮ್ಮ ರಾಕೆಟ್​ ಎಸೆದು ಹಾನಿಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಆಲ್ ಇಂಗ್ಲೆಂಡ್ ಕ್ಲಬ್ 10,000 ಡಾಲರ್ ದಂಡ ವಿಧಿಸಿದೆ.

ಸೆರೆನಾ ಜೊತೆಗೆ ಇಟಲಿಯ ಫ್ಯಾಬಿಯೋ ಫೋಗ್ನಿಗಿ ಅವರಿಗೂ 3000 ಸಾವಿರ ಡಾಲರ್​ ದಂಡ ವಿಧಿಸಲಾಗಿದೆ. ಇವರು ಪಂದ್ಯ ಸೋತ ಸಂದರ್ಭದಲ್ಲಿ ವಿಂಬಲ್ಡನ್​ ಕೋರ್ಟ್​ಗೆ ಬಾಂಬ್​ ಬೀಳಲಿ ಎಂದು ಹೇಳುವ ಮೂಲಕ ಅಸಭ್ಯವಾಗಿ ವರ್ತಿಸಿದ್ದರು.

ಇದೇ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೊಸ್ ಕೂಡ ಹದ್ದು ಮೀರಿ ವರ್ತಿಸಿದ ಕಾರಣಕ್ಕೆ ಒಮ್ಮೆ 3000 ಹಾಗೂ ಮತ್ತೊಮ್ಮೆ 8000 ಡಾಲರ್​ ದಂಡ ವಿಧಿಸಲಾಗಿದೆ.

Intro:Body:Conclusion:
Last Updated : Jul 9, 2019, 7:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.