ಅಬುಧಾಬಿ : ಆಫ್ಘಾನಿಸ್ತಾನದ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಫಾಲೋ ಆನ್‌ಗೆ ತುತ್ತಾಗಿದ್ದ ಜಿಂಬಾಬ್ವೆ, ನಾಯಕ ಸೀನ್ ವಿಲಿಯಮ್ಸ್ ಸಿಡಿಸಿದ ಶತಕದ ನೆರವಿನಿಂದ ಇನ್ನಿಂಗ್ಸ್ ಸೋಲಿನ ಭೀತಿಯಿಂದ ತಪ್ಪಿಸಿಕೊಂಡಿದ್ದಲ್ಲದೆ, 5ನೇ ದಿನ ಸ್ಪರ್ಧಾತ್ಮಕ ಟಾರ್ಗೆಟ್ ನೀಡುವ ಭರವಸೆ ಮೂಡಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಆಫ್ಘಾನಿಸ್ತಾನ 545 ರನ್ಗಳಿಸಿತ್ತು. ಇದಕ್ಕುತ್ತರವಾಗಿ ಜಿಂಬಾಬ್ವೆ ಮೊದಲ ಇನ್ನಿಂಗ್ಸ್ನಲ್ಲಿ 287ರನ್ಗಳಿಗೆ ಆಲೌಟ್ ಆಗಿತ್ತು. ಆಫ್ಘಾನಿಸ್ತಾನ 258ರನ್ಗಳ ಮುನ್ನಡೆ ಹೊಂದಿದ್ದರಿಂದ ಜಿಂಬಾಂಬ್ವೆ ಮೇಲೆ ಫಾಲೋ ಆನ್ ಹೇರಿತ್ತು.
ಬೃಹತ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಪ್ರವಾಸಿ ತಂಡ ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಒಂದು ಹಂತದಲ್ಲಿ 142 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಸೋಲಿನ ಭೀತಿಗೆ ಸಿಲುಕಿತ್ತು.
-
Fourth Test hundred for @sean14williams, his second in the series 🔥
— ICC (@ICC) March 13, 2021 " class="align-text-top noRightClick twitterSection" data="
What a fighting knock this has been!#AFGvZIM ➡️ https://t.co/RnJObjXDPq pic.twitter.com/E5mfLoFSI6
">Fourth Test hundred for @sean14williams, his second in the series 🔥
— ICC (@ICC) March 13, 2021
What a fighting knock this has been!#AFGvZIM ➡️ https://t.co/RnJObjXDPq pic.twitter.com/E5mfLoFSI6Fourth Test hundred for @sean14williams, his second in the series 🔥
— ICC (@ICC) March 13, 2021
What a fighting knock this has been!#AFGvZIM ➡️ https://t.co/RnJObjXDPq pic.twitter.com/E5mfLoFSI6
ಆದರೆ, ನಾಯಕ ವಿಲಿಯಮ್ಸನ್ ಅಜೇಯ ಶತಕ(106) ಮತ್ತು ಡೊನಾಲ್ಡ್ ಟ್ರಿಪಾನೋ (ಅಜೇಯ 63) 8ನೇ ವಿಕೆಟ್ಗೆ 124 ರನ್ಗಳನ್ನು ಸೇರಿಸಿದ್ದಲ್ಲದೆ, ನಾಲ್ಕನೇ ದಿನ 8 ರನ್ಗಳ ಮುನ್ನಡೆ ಪಡೆದುಕೊಂಡಿದೆ.
ವಿಲಿಯಮ್ಸನ್ 190 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 106 ಮತ್ತು ಟ್ರಿಪಾನೋ 164 ಎಸೆತಗಳಲ್ಲಿ 11 ಬೌಂಡರಿ ಸಹಿತ 63 ರನ್ಗಳಿಸಿ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಆಫ್ಘಾನಿಸ್ತಾನದ ಪರ ರಶೀದ್ ಖಾನ್ ಮೊದಲ ಇನ್ನಿಂಗ್ಸ್ನಲ್ಲಿ 4 ಮತ್ತು 2ನೇ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದು ಜಿಂಬಾಬ್ವೆ ವಿರುದ್ಧ ಮೇಲುಗೈ ಸಾಧಿಸಲು ನೆರವಾದರು.
ಇದನ್ನು ಓದಿ:ಹಶ್ಮತುಲ್ಲಾ ಶಾಹಿದಿ ದ್ವಿಶತಕ: ಆಫ್ಘಾನ್ ಕ್ರಿಕೆಟ್ನಲ್ಲಿ ಹೊಸ ದಾಖಲೆ