ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡ ತವರಿನಲ್ಲೇ ಟಿ20 ಸರಣಿ ಸೋತ ಬೆನ್ನಲ್ಲೇ ನಾಯಕತ್ವ ಸ್ಥಾನದಿಂದ ಸರ್ಫರಾಜ್ ಅಹ್ಮದ್ರನ್ನು ತೆಗೆದು ಹಾಕಿದ್ದು, ಪಿಸಿಬಿ ಹೊಸ ನಾಯಕನನ್ನು ಘೋಷಣೆ ಮಾಡಿದೆ.
-
Azhar Ali appointed Test and Babar Azam T20I captain
— PCB Media (@TheRealPCBMedia) 18 October 2019 " class="align-text-top noRightClick twitterSection" data="
More ▶️ https://t.co/ekAM8l0ENP
">Azhar Ali appointed Test and Babar Azam T20I captain
— PCB Media (@TheRealPCBMedia) 18 October 2019
More ▶️ https://t.co/ekAM8l0ENPAzhar Ali appointed Test and Babar Azam T20I captain
— PCB Media (@TheRealPCBMedia) 18 October 2019
More ▶️ https://t.co/ekAM8l0ENP
ಸರ್ಫರಾಜ್ ಅಹ್ಮದ್ರನ್ನು ಟಿ20 ಹಾಗೂ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಸಲಾಗಿದ್ದು, ಬಾಬರ್ ಅಜಮ್ ಹಾಗೂ ಅಜರ್ ಅಲಿಯನ್ನು ಕ್ರಮವಾಗಿ ಟಿ20 ಹಾಗೂ ಟೆಸ್ಟ್ ತಂಡಕ್ಕೆ ನಾಯಕರನ್ನಾಗಿ ಹೆಸರಿಸಲಾಗಿದೆ.
ನವೆಂಬರ್ 21ರಿಂದ ಆಸ್ಟ್ರೇಲಿಯಾ ವಿರುದ್ಧ ಕಾಂಗರೂ ನಾಡಿನಲ್ಲಿ ಟೆಸ್ಟ್ ನಡೆಯಲಿದ್ದು, ಸರ್ಫರಾಜ್ರನ್ನು ಈ ಸರಣಿಯಿಂದ ಕೈಬಿಡಲಾಗಿದೆ.
ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನ ಬಳಿಕ ಸರ್ಫರಾಜ್ ನಾಯಕತ್ವದ ಬಗ್ಗೆ ಭಾರೀ ಟೀಕೆಗಳು ಕೇಳಿಬಂದಿದ್ದವು. ಹೀಗಿದ್ದರೂ ಪಿಸಿಬಿ ಸರ್ಫರಾಜ್ರನ್ನು ನಾಯಕತ್ವದಲ್ಲೇ ಮುಂದುವರೆಸಿತ್ತು.