ETV Bharat / sports

ಧೋನಿ ಈ ಬಾರಿಯ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರಲಿದ್ದಾರೆ: ಮಂಜ್ರೇಕರ್​ - ಸಂಜಯ್​ ಮಂಜ್ರೇಕರ್​

2020ರ ಐಪಿಎಲ್​ನಲ್ಲಿ ಧೋನಿ ಉತ್ತಮವಾಗಿ ಆಡಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಐಪಿಎಲ್​ನಲ್ಲಿ ಬ್ಯಾಟ್ಸ್​ಮನ್​ ಆಗಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗಿಂತಲೂ ಹೆಚ್ಚು ಸ್ಥಿರತೆ ಮತ್ತು ಯಶಸ್ವಿ ಬ್ಯಾಟ್ಸ್​ಮನ್​ ಆಗಿದ್ದಾರೆ. ನಾಲ್ಕೈದು ಬೌಲರ್​ಗಳನ್ನು ನಿರ್ವಹಿಸುವುದು ಹೇಗೆ ಅನ್ನೋದು ಅವರಿಗೆ ಗೊತ್ತಿದೆ ಎಂದು ಸಂಜಯ್​ ಮಂಜ್ರೇಕರ್ ತಿಳಿಸಿದ್ದಾರೆ.

ಎಂಎಸ್​  ಧೋನಿ
ಎಂಎಸ್​ ಧೋನಿ
author img

By

Published : Aug 8, 2020, 7:31 PM IST

ಹೈದರಾಬಾದ್​: ಕಳೆದೊಂದು ವರ್ಷದಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರವಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಈ ಬಾರಿಯ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ತೋರಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸಂಜಯ್​ ಮಂಜ್ರೇಕರ್​ ವಿಶ್ವಾಸ ವ್ಯಕ್ತಪಡಿಸಿದರು.

ಸಂಜಯ್ ಮಂಜ್ರೇಕರ್​
ಸಂಜಯ್ ಮಂಜ್ರೇಕರ್​

2020ರ ಐಪಿಎಲ್​ನಲ್ಲಿ ಧೋನಿ ಉತ್ತಮವಾಗಿ ಆಡಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಐಪಿಎಲ್​ನಲ್ಲಿ ಬ್ಯಾಟ್ಸ್​ಮನ್​ ಆಗಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗಿಂತಲೂ ಹೆಚ್ಚು ಸ್ಥಿರತೆ ಮತ್ತು ಯಶಸ್ವಿ ಬ್ಯಾಟ್ಸ್​ಮನ್​ ಆಗಿದ್ದಾರೆ. ನಾಲ್ಕೈದು ಬೌಲರ್​ಗಳನ್ನು ನಿರ್ವಹಿಸುವುದು ಹೇಗೆ ಅನ್ನೋದು ಅವರಿಗೆ ಗೊತ್ತಿದೆ ಎಂದು ತಿಳಿಸಿದ್ದಾರೆ.

ಸಚಿನ್​, ಧೋನಿಯಂತಹ ಆಟಗಾರರು ಚಾಂಪಿಯನ್​ ಕ್ರಿಕೆಟಿಗರು. ಅವರು ಹೆಚ್ಚು ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸುವುದಿಲ್ಲ. ಅದರಲ್ಲೂ ಧೋನಿಯನ್ನು ಸಾರ್ವಜನಿಕವಾಗಿ ನೋಡಲು ಸಾಧ್ಯವಿಲ್ಲ. ಸದ್ಯಕ್ಕೆ ಅವರು ಕ್ರಿಕೆಟ್​ ಆಡುವುದಕ್ಕೆ ಫಿಟ್​ನೆಸ್​ ಸಮಸ್ಯೆ ಅಥವಾ ರನ್‌ಗಾಗಿ ಓಡುವುದಕ್ಕೆ ಸಾಧ್ಯವಿಲ್ಲ ಎಂಬಂತೆ ಕಾಣುತ್ತಾರೆ.

ಆದರೆ ಕೊಹ್ಲಿ ಮದುವೆಯ ಸಮಯದಲ್ಲಿ ಧೋನಿಯ ಜೊತೆ ಮಾತನಾಡಿದ್ದೆ. ಈ ಸಂದರ್ಭದಲ್ಲಿ ಧೋನಿ ನಾನು ತಂಡದಲ್ಲಿ ಈಗಲೂ ವೇಗವಾಗಿ ಓಡುವ ಆಟಗಾರ. ಅಂತಾರಾಷ್ಟ್ರೀಯ ಕ್ರಿಕೆಟ್​ ಅಥವಾ ಹೈ ಲೆವೆಲ್​ ಕ್ರಿಕೆಟ್​ ಆಡಲು ಅಗತ್ಯವಾದ ಫಿಟ್​ನೆಸ್ ನನ್ನಲ್ಲಿದೆ ಎಂದು ಅವರು ತಿಳಿಸಿದ್ದರು ಎಂದು ಮಜ್ರೇಕರ್​ ನೆನಪಿಸಿಕೊಂಡಿದ್ದಾರೆ.

ನಾನೊಬ್ಬ ಬ್ಯಾಟ್ಸ್​ಮನ್​ ಆಗಿ ಹೇಳುವುದಾದರೆ, ಈ ಬಾರಿಯ ಐಪಿಎಲ್​ನಲ್ಲಿ ಧೋನಿ ಬ್ಯಾಟಿಂಗ್​ನಲ್ಲಿ ಹೆಚ್ಚೇನೂ ವಿಭಿನ್ನತೆ ಕಾಣುವುದಿಲ್ಲ. ಯುಎಇ ಧೋನಿಗೆ ಸೂಕ್ತವಾದ ಪರಿಸ್ಥಿತಿಯಾಗಿದೆ. ಏಕೆಂದರೆ, ಅಲ್ಲಿ ಪವರ್​ ಹಿಟ್ಟಿಂಗ್​ಗಿಂತ ಮೆದುಳನ್ನು ಉಪಯೋಗಿಸಿ ಆಡಬೇಕಿದೆ. ಆದ್ದರಿಂದ ಧೋನಿ ಯಶಸ್ವಿಯಾಗಲಿದ್ದಾರೆ ಎಂದು ಮಂಜ್ರೇಕರ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.